Plush.Launch Press Meet

Sunday, October 18, 2020

359

 

*ಪ್ಲಶ್​ ಎಂಬುದು ವೆಡ್ಡಿಂಗ್​ ಸೂಪರ್​ ಮಾರ್ಕೇಟ್​ ಥರ; ಸಂತೋಷಿ ಶ್ರೀಕರ್​*

*ಬೆಂಗಳೂರು*: ಹನಿಮೂನ್ ಎಕ್ಸ್ಪ್ರೆಸ್ ಮತ್ತು ತೆನಾಲಿ ರಾಮ ಸಿನಿಮಾ ಮೂಲಕ ಕನ್ನಡಕ್ಕೆ ಆಗಮಿಸಿದ್ದೆ. ಜಗ್ಗೇಶ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದೆ. ಇದೀಗ ಇದೇ ಕರ್ನಾಟಕದ ಬೆಂಗಳೂರಿನಲ್ಲಿ ಹೊಸ ಉದ್ಯಮ ಆರಂಭಿಸುತ್ತಿದ್ದೇನೆ. ಕಲಾವಿದರಿಗೆ ನಟನೆಯೊಂದೇ ಶಾಶ್ವತ ಅಲ್ಲ. ಅದರ ಜತೆಗೆ ಬೇರೆ ಕ್ಷೇತ್ರದತ್ತಲೂ ಗಮನಹರಿಸಬೇಕು. ಹಾಗಾಗಿ ಸೌಂದರ್ಯ ಕ್ಷೇತ್ರವನ್ನು ಆಯ್ದುಕೊಂಡು ಇದೀಗ ಪ್ಲಶ್​ ಹೆಸರಿನ ಶಾಖೆಯನ್ನು ಬೆಂಗಳೂರಿನಲ್ಲಿ ತೆರೆದಿದ್ದೇನೆ. ವೆಡ್ಡಿಂಗ್​ ಸೂಪರ್​ ಮಾರ್ಕೆಟ್​ ರೀತಿಯಲ್ಲಿ ಒಂದೇ ವೇದಿಕೆಯಲ್ಲಿ ಎಲ್ಲ ಸೇವೆಗಳು ಪ್ಲಶ್​ ಅಡಿಯಲ್ಲಿ ಸಿಗಲಿವೆ ಎಂದು ನಟಿ ಸಂತೋಷಿ ಶ್ರೀಕರ್​ ಖುಷಿ ಹಂಚಿಕೊಂಡರು.

ಭಾನುವಾರ ನಗರದ ವೆಲ್​ಕಮ್​ ಐಟಿಸಿ ಹೊಟೇಲ್​ನಲ್ಲಿ ಪ್ಲಶ್​ ಅಕಾಡೆಮಿ ತೆರೆಯುವ ಬಗ್ಗೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ಲಶ್​ ಅಕಾಡೆಮಿ ಒಂದು ರೀತಿ ವೆಡ್ಡಿಂಗ್​ ಸೂಪರ್​ ಮಾರ್ಕೆಟ್​ ಇದ್ದಂತೆ. ವಧು ವರರ ಮೇಕಪ್​, ಹೇರ್ ಸ್ಟೈಲ್​, ಕಾಸ್ಟೂಮ್ನಿಂದ ಹಿಡಿದು ಎಲ್ಲ ಬಗೆಯ ಸೇವೆಯೂ ಪ್ಲಶ್​ನಿಂದ ಸಿಗಲಿದೆ. 2014ರಲ್ಲಿಯೇ ತಮಿಳುನಾಡಿನ ಮಧುರೈನಲ್ಲಿ ಪ್ಲಶ್​ ಅಕಾಡೆಮಿ ತೆರೆದಿದ್ದೇವೆ. ಸಾಕಷ್ಟು ಮಂದಿ ಅಕಾಡೆಮಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಈಗಲೂ ಪಡೆದುಕೊಳ್ಳುತ್ತಿದ್ದಾರೆ ಎಂದರು.

*ಬೆಂಗಳೂರಿಗರಿಗೂ ಪರಿಚಯ:* ದಕ್ಷಿಣ ಭಾರತದ ನಟಿಯಾಗಿರುವ ನಾನು ತಮಿಳು, ತೆಲುಗು ಮತ್ತು ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದೇ ರೀತಿ ಮಧುರೈನಲ್ಲಿ ಈ ಉದ್ಯಮ ಸ್ಥಾಪಿತವಾಗಿದೆ. ಬೆಂಗಳೂರೂ ಸಹ ನನಗೆ ಪರಿಚಯದ ನಗರವಾಗಿರುವುದರಿಂದ ಉದ್ಯಮವನ್ನು ಇಲ್ಲಿಗೆ ವಿಸ್ತರಿಸಿದ್ದೇನೆ. ಮುಂದಿನ ದಿನಗಳಲ್ಲಿ ಹೈದರಾಬಾದ್​ ಮತ್ತು ಸಿಂಗಾಪೂರ್​ನಲ್ಲಿಯೂ ತೆರೆಯುವ ಯೋಜನೆ ಇದೆ ಎಂದರು.

*ಎಲ್ಲವೂ ಒಂದೇ ವೇದಿಕೆಯಲ್ಲಿ ಸಿಗಬೇಕು:* ಪ್ಲಶ್​ ಮೂಲಕ ಮದುವೆಯೊಂದೇ ಅಲ್ಲ, ಭವಿಷ್ಯವನ್ನೂ ಇಲ್ಲಿ ಕಂಡುಕೊಳ್ಳಬಹುದು. ಅಕಾಡೆಮಿಗೆ ಸೇರಿಕೊಂಡು, ಮೇಕಪ್​ ಸ್ಪೆಷಲಿಸ್ಟ್, ಹೇರ್​ಸ್ಟೈಲಿಸ್ಟ್​, ವೆಡ್ಡಿಂಗ್​ ಫೋಟೋಗ್ರಾಫಿ, ಬ್ಯೂಟಿ ಲೌಂಜ್​ ಸೇವೆಯನ್ನು ಕೋರ್ಸ್​ ರೀತಿಯಲ್ಲಿ ಕಲಿಯಬಹುದು. ಈ ಕೋರ್ಸ್​ ಆಯ್ದುಕೊಂಡವರಿಗೆ ಪ್ರಸ್ತುತ ಕಾಲಮಾನದ ಟ್ರೆಂಡ್​, ಟ್ರೆಂಡಿ ಮೇಕ್ ಓವರ್ ತಂತ್ರಗಳನ್ನು ಮತ್ತು ಬ್ರಾಂಡ್​ಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಉದ್ಯೋಗಾವಕಾಶ ಒದಗಿಸಿಕೊಡುವ ಜವಾಬ್ದಾರಿಯನ್ನೂ ಪ್ಲಶ್​ ಅಕಾಡೆಮಿ ವಹಿಸಿಕೊಳ್ಳಲಿದೆ. ಇದರ ಜತೆಗೆ ಶೀಘ್ರದಲ್ಲಿ ಪ್ಲಶ್​ ನಲ್ಲಿಯೇ ಸಲೂನ್​ ಸಹ ತೆರೆದುಕೊಳ್ಳಲಿದೆ. ವಧು ವರರ ಜ್ಯುವೆಲ್ಲರಿಗಳು, ಬಗೆಬಗೆ ವಿನ್ಯಾಸದ ಬಟ್ಟೆಗಳೂ ನಮ್ಮಲ್ಲಿ ದೊರೆಯಲಿವೆ ಎಂದರು.

*ವರ್ಣರಂಜಿತ ಕಾರ್ಯಕ್ರಮ:* ಪ್ಲಶ್​ ಅಕಾಡೆಮಿ ತೆರೆಯುತ್ತಿರುವ ಹಿನ್ನೆಲೆಯಲ್ಲಿ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿರುವ ಸಾಕಷ್ಟು ಯುವತಿಯರು, ಪುಟಾಣಿಗಳು ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು. ಒಬ್ಬರಿಗಿಂತ ಒಬ್ಬರು ಚೆಂದವಾಗಿ ಅಲಂಕಾರ ಮಾಡಿಕೊಂಡು, ವೇದಿಕೆ ಮೇಲೆ ರ್ಯಾಂಪ್​ ವಾಕ್​ ಮಾಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.  ಇನ್ನು ವೇದಿಕೆ ಮೇಲೆ ಕೋನ ನಾರಾಯಣ್​ ಸಾಮಿ ಮತ್ತು ಲಕ್ಷ್ಮೀ ರಾಜಶೇಖರ್​ ಉಪಸ್ಥಿತರಿದ್ದರು.

 

ಬೈಟ್​...........

*ನಾನು ಎಲ್ಲಿಯೂ ಮೇಕಪ್​ ಬಗ್ಗೆ ಕೋರ್ಸ್​ ಮಾಡಿಲ್ಲ. ಆದರೂ, ಮೊದಲಿಂದಲೂ ಸೌಂದರ್ಯ ಕ್ಷೇತ್ರ ಮತ್ತು ಸಿನಿಮಾ ಎರಡಕ್ಕೂ ನಂಟಿರುವಂಥ ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂಬ ಬಯಕೆ ಇತ್ತು. ಅದರಂತೆ 6 ವರ್ಷದ ಹಿಂದೆಯೇ ಫ್ಲಶ್​ ಅಕಾಡೆಮಿ ಶುರು ಮಾಡಿದ್ದೆ. ಇದೀಗ ಬೆಂಗಳೂರಿನಲ್ಲಿಯೂ ಅದರ ಶಾಖೆ ತೆರೆಯುತ್ತಿದ್ದೇವೆ.*

*ಸಂತೋಷಿ ಶ್ರೀಕರ್​, ಪ್ಲಶ್​ ಸಂಸ್ಥಾಪಕಿ*

Copyright@2018 Chitralahari | All Rights Reserved. Photo Journalist K.S. Mokshendra,