ನವೆಂಬರ್ ನಲ್ಲಿ ’ಸ್ಪೂಕಿ ಕಾಲೇಜ್’ ಆರಂಭ.
'ರಂಗಿತರಂಗ’, ’ಅವನೇ ಶ್ರೀ ಮನ್ನಾರಾಯಣ’ ನಿರ್ಮಾಪಕರಿಂದ ಮತ್ತೊಂದು ವಿಭಿನ್ನ ಚಿತ್ರ.
'ರಂಗಿತರಂಗ’ ಹಾಗೂ ’ಅವನೇ ಶ್ರೀಮನ್ನಾರಯಣ’ ಭರ್ಜರಿ ಯಶಸ್ಸು ಕಂಡ ಚಿತ್ರಗಳು. ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಚಿತ್ರಗಳನ್ನು ನಿರ್ಮಿಸಿದ್ದ ಹೆಚ್.ಕೆ.ಪ್ರಕಾಶ್ ಅವರು ’ಸ್ಪೂಕಿ ಕಾಲೇಜ್’ ಎಂಬ ಮತ್ತೊಂದು ವಿಭಿನ್ನ ಚಿತ್ರ ನಿರ್ಮಿಸುತ್ತಿದ್ದಾರೆ ತಮ್ಮದೇ ಆದ ಶ್ರೀದೇವಿ ಎಂಟರ್ ಟೈನರ್ ಸಂಸ್ಥೆ ಮೂಲಕ.
ಈ ಚಿತ್ರದ ಚಿತ್ರೀಕರಣ ನವೆಂಬರ್ ಮೊದಲವಾರದಲ್ಲಿ ಧಾರವಾಡದ ೧೦೩ ವರ್ಷಗಳ ಇತಿಹಾಸವಿರುವ ಕಾಲೇಜೊಂದರಲ್ಲಿ ಆರಂಭವಾಗಲಿದೆ.
ದ್ವಿತೀಯ ಹಂತದ ಚಿತ್ರವು ದಾಂಡೇಲಿ ದಟ್ಟ ಅರಣ್ಯ ಪ್ರದೇಶದಲ್ಲಿ ನಡೆಯಲಿದೆ.
ಹಾರಾರ್, ಕಾಮಿಡಿ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಭರತ್ ಜಿ ನಿರ್ದೇಶಿಸುತ್ತಿದ್ದಾರೆ. ಯೋಗರಾಜ್ ಭಟ್, ರಮೇಶ್ ಅರವಿಂದ್ ಮೊದಲಾದವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವ ಭರತ್ ಅವರಿಗಿದೆ.ರೆಡಿಯೋ ಹಾಗೂ ಪ್ರಚಾರ ವಿಭಾಗದಲ್ಲೂ ಭರತ್ ಕಾರ್ಯ ನಿರ್ವಹಿಸಿದ್ದಾರೆ
ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಭರತ್ ಅವರೆ ಬರೆದಿದ್ದಾರೆ. .
ಹಾರಾರ್, ಸೈಕಲಾಜಿಕಲ್ ಕಥಾಹಂದರ ಹೊಂದಿರುವ ಚಿತ್ರವಾಗಿರುವುದರಿಂದ ಚಿತ್ರ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರುತ್ತದೆ. ಹಾಗಾಗಿ ಅದಕ್ಕೆ ಸಂಬಂಧಿಸಿದ ಕೆಲವು ಸಾಮಗ್ರಿಗಳನ್ನು ಮುಂಬೈನಿಂದ ತರಿಸಿಕೊಳುತ್ತಿರುವುದಾಗಿ ತಿಳಿಸಿರುವ ನಿರ್ದೇಶಕರು ವಸ್ತ್ರ ವಿನ್ಯಾಸ ಕೂಡ ವಿಶೇಷವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ, ವಿಶ್ವಾಸ್ ಕಲಾ ನಿರ್ದೇಶನ ಹಾಗೂ ಚೇತನ್ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.
'ಪ್ರಿಮಿಯರ್ ಪದ್ಮಿನಿ’ ಚಿತ್ರದಲ್ಲಿ ಅಭಿನಯಿಸಿದ್ದ ವಿವೇಕ್ ಸಿಂಹ, ’ದಿಯಾ’ ಖ್ಯಾತಿಯ ಖುಷಿ ರವಿ ಹಾಗೂ ಪೃಥ್ವಿ ರಾಷ್ಟಕೂಟ ಈ ಚಿತ್ರದ ಪ್ರಮುಖಪಾತ್ರ ದಲ್ಲಿ ನಟಿಸುತ್ತಿದ್ದಾರೆ. ಪ್ರಕಾಶ್ ಬೆಳವಾಡಿ, ಹನುಮಂತೇ ಗೌಡ, ರಘು ರಮಣಕೊಪ್ಪ, ಅರವಿಂದ್ ಬೋಳಾರ್, ವಿಜಯ್ ಚೆಂಡೂರ್, ಎಂ.ಕೆ.ಮಠ, ಅಶ್ವಿನ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.