90 Vadi Mane Nadi.Film News.

Saturday, October 10, 2020

391

 

ಅಮ್ಮಾ ಟಾಕೀಸ್ ಬಾಗಲಕೋಟೆ ಲಾಂಛನದಲ್ಲಿ, ರತ್ನಮಾಲಾ ಬಾದರದಿನ್ನಿ ನಿರ್ಮಾಣದಲ್ಲಿ ತಯಾರಾಗುತ್ತಿರುವ  ಹಾಸ್ಯ ನಟ *ಬಿರಾದಾರ್ ಮುಖ್ಯ ಭೂಮಿಕೆಯ*

*ನೈಂಟಿ ಹೊಡಿ ಮನೀಗ್ ನಡಿ* ಚಿತ್ರದ *ಟೈಟಲ್ ಸಾಂಗ್* ಚಿತ್ರೀಕರಣವು ಇತ್ತೀಚೆಗೆ ಬೆಂಗಳೂರಿನ *ಎಚ್ ಎಮ್ ಟಿ* ಯಲ್ಲಿ  ನೆರವೇರಿತು.  ಕಿರಣ್ ಶಂಕರ್ ಸಂಗೀತದ ಈ  ಹಾಡಿಗೆ ಸಾಹಿತ್ಯ ಚತುರ ಡಾ// ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದಾರೆ. ಇನ್ನು  ಚುಟು-ಚುಟು ಖ್ಯಾತಿಯ ಭೂಷಣ್  ಕೊರಿಯೋಗ್ರಫಿ ಮಾಡಿದ್ದು,  ಕೃಷ್ಣ ನಾಯ್ಕರ್ ಛಾಯಾಗ್ರಹಣ ಮಾಡಿದ್ದಾರೆ.

ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು

ಟೈಟಲ್ ಸಾಂಗ್ ಸೇರಿದಂತೆ ಚಿತ್ರದ  ಮುಕ್ಕಾಲುಪಾಲು ಚಿತ್ರೀಕರಣ ಮುಗಿಸಲಾಗಿದೆ.  ಮುಂದಿನ ಹಂತದ  ಚಿತ್ರೀಕರಣ ಬಾಗಲಕೋಟೆ ಯಲ್ಲಿ ನಡೆಯಲಿದ್ದು ಚಿತ್ರತಂಡ ಸಜ್ಜಾಗುತ್ತಿದೆ ಎನ್ನುತ್ತಾರೆ ನಿರ್ದೇಶಕರು.

ಅದ್ಧೂರಿ ಸೆಟ್ ನಲ್ಲಿ ಇತ್ತೀಚೆಗೆ ಚಿತ್ರೀಕರಣ ನಡೆದ  ಈ ಎಣ್ಣೆ ಹಾಡಿಗೆ  ಬಿರಾದಾರ್ ಜೊತೆ ಹಿರಿಯ ನಟ ಕರಿಸುಬ್ಬು, ಹಾಸ್ಯ ನಟ ಪ್ರಶಾಂತ್ ಸಿದ್ಧಿ,  ಆರ್. ಡಿ ಬಾಬು, ವಿವೇಕ್ ಜಂಬಗಿ ಹೆಜ್ಜೆ ಹಾಕಿದ್ದಾರೆ.  *ನೈಂಟಿ ಹೊಡಿ ಮನೀಗ್ ನಡಿ* ಇದೊಂದು  ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು, *ಹೇ.. ಒಲವಿನ ಚೆಲುವಿನ ಕುಡುಕರೆ ಕೇಳೀ.. ಈ ಕವಿತೆಯು ಸಮರ್ಪಣೆ ನಿಮಗೆ...* ಎಂದು ಶುರುವಾಗುವ ಈ ಹಾಡನ್ನು ಅಪರೂಪ ಎಂಬಂತೆ ಈವರೆಗೂ ಕನ್ನಡದಲ್ಲಿ ಐದು ಸಾವಿರಕ್ಕೂ ಹೆಚ್ಚು ಹಾಡಿಗೆ ಧ್ವನಿಯಾಗಿರುವ  ಗಾಯಕ ರಾಜೇಶ್ ಕೃಷ್ಣನ್  ಟ್ರ್ಯಾಕ್ ಕೇಳಿ ಖುಷಿ ಪಟ್ಟು, ಸ್ವ-  ಇಚ್ಛೆಯಿಂದ  ಬಂದು ಧ್ವನಿ ನೀಡಿರುವುದು ಈ ಹಾಡಿನ ಹೆಗ್ಗಳಿಕೆಯಾಗಿದೆ. ವಿಶೇಷವಾಗಿ ಸುಪ್ರಭಾತದ ರೇಂಜಿಗೆ ಪ್ರತಿ ಬಾರುಗಳಲ್ಲೂ ಸ್ವರ ಮೊಳಗ ಬೇಕೆಂಬ ಆಶಯವಿರುವ ಈ ಹಾಡು ಮದ್ಯಪ್ರೀಯರ   ಎಣ್ಣೆ ಮೇಲಿನ ಅಭಿಮಾನ ಮತ್ತು ಎಣ್ಣೆಯ ಹೆಚ್ಚುಗಾರಿಕೆ ಹೇಳುವ  ಹಾಡಾಗಿದ್ದು, ಪ್ರೇಕ್ಷಕ ಪ್ರಭುಗಳಿಗೆ ನಶೆ ಹತ್ತಿಸೋದು ಪಕ್ಕಾ ಅನ್ನೋದು ಚಿತ್ರತಂಡದ ನಂಬಿಕೆ.

Copyright@2018 Chitralahari | All Rights Reserved. Photo Journalist K.S. Mokshendra,