Akila Karnataka Laghu Sangeetha Assn.News

Thursday, August 06, 2020

713

ಸಾಂಸ್ಕ್ರತಿಕಕಾರ್ಯಕ್ರಮ  ನಡೆಸಲುಅನುಮತಿಗಾಗಿ ಸರ್ಕಾರಕ್ಕೆ ಮನವಿ

ಕೊರೊನಾ ಮಹಾಮಾರಿಯಿಂದ ವಿಶ್ವಕ್ಕೆತೊಂದರೆಯಾದಂತೆ, ಲಘು ಸಂಗೀತ ಮತ್ತು ಸಾಂಸ್ಕ್ರತಿಕ ಕಲಾವಿದರುಗಳು ಕಷ್ಟ ಅನುಭವಿಸುತ್ತಿದ್ದಾರೆಂದು ಸಂಘದ ಪದಾಧಿಕಾರಿಗುರುರಾಜ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಅವರು ಮಾತನಾಡುತ್ತಾ ನಮ್ಮಂಥ ಲಘು ಸಂಗೀತ ಕಲಾವಿದರುಗಳಿಗೆ ಸಾಂಸ್ಕ್ರತಿಕಕಾರ್ಯಕ್ರಮ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಹಬ್ಬ, ಮದುವೆ, ಕನ್ನಡರಾಜ್ಯೋತ್ಸವ ಮುಂತಾದ ಕಡೆಗಳಲ್ಲಿ ಕೆಲಸ ಸಿಗುತ್ತದೆ.ಆದರೆ ಈ ಬಾರಿಯಾವುದೇಚೌತಿ, ಸಮಾರಂಭಗಳನ್ನು ಮಾಡಬಾರದಾಗಿ ಸರ್ಕಾರವುಆದೇಶ ಹೊರಡಿಸಿರುವುದರಿಂದ ಇದನ್ನೆ ನಂಬಿಕೊಂಡು ಬದುಕು ಸಾಗಿಸುತ್ತಿರುವ ಸುಮಾರು ೧೨೦೦೦ ಮಂದಿ ಬೀದಿಗೆ ಬರುವಂತಾಗಿದೆ.ವಾರ್ತಾ, ಸಂಸ್ಕ್ರತಿ ಇಲಾಖೆಗೆ ಪತ್ರ ನೀಡಿ ಸಹಾಯ ಕೇಳಿದರೆ ಅಲ್ಲಿಂದಲೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. 

ಸರ್ಕಾರವುಆಯಾ ವಿಭಾಗದವರಿಗೆ ಸಹಾಯ ಮಾಡಿ ನಮ್ಮಂತ ಬಡಕಲಾವಿದರನ್ನು ಮರೆತಿದೆ.ಈಗಲಾದರೂಕಾರ್ಯಕ್ರಮ ನಡೆಸಿಕೊಂಡು ಹೋಗಲು ಅನುಮತಿ ನೀಡಿಇಲ್ಲವೆ ಮಾಸಾಶನರೂಪದಲ್ಲಿ ಪರಿಹಾರಕೊಡಬೇಕುಎಂದರು.

ಇವರ ಮಾತಿಗೆ ಧ್ವನಿಗೂಡಿಸಿದ ಮದನ್‌ಮಲ್ಲುಎಂಟು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದರೂ, ಪ್ರಯೋಜನವಾಗಿಲ್ಲ. ಬೇರೆಯವರಿಗೆ ಅವಕಾಶ ಕೊಟ್ಟಂತೆ,  ನಮಗೂ ನೀಡಿದಲ್ಲಿ ಎಚ್ಚರವಹಿಸಿ ನಮ್ಮ ಕೆಲಸವನ್ನು ಮಾಡಿಕೊಂಡು ಹೋಗುತ್ತೇವೆ. ಆಗಿಯೂ ನಮ್ಮ ಮನವಿಗೆ ಪರಿಗಣಿಸದಿದ್ದಲ್ಲಿ ಮುಖ್ಯ ಮಂತ್ರಿಗಳ ಮನೆ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು. ತಡಮಾಡದೆ ಸರ್ಕಾರವುಇದರ ಬಗ್ಗೆ ಗಮನ ಹರಿಸಬೇಕೆಂದುಒತ್ತಾಯ ಮಾಡಿದರು.

ಅಧ್ಯಕ್ಷರಾದ ಶಂಕರ್ ಮಾತನಾಡಿಇಬ್ಬರು ಶಾಸಕರು ಹೂರತುಪಡಿಸಿದರೆ ಬೇರೆಯಾರು ಸಹಾಯ ಮಾಡಿಲ್ಲ. ಜೀವನ ಸಾಗಿಸಲು ಆಗದೆ ನಾಲ್ಕು ಕಲಾವಿದರುಆತ್ಮಹತ್ಯಗೆ ಶರಣಾಗಿದ್ದಾರೆ.ನಮಗೆ ಇದು ಬಿಟ್ಟರೆ ಬೇರೆ ವೃತ್ತಿಗೊತ್ತಿಲ್ಲ. ದುಡಿಮೆಗೆ ಅವಕಾಶ ಇಲ್ಲವೆಧನಸಹಾಯ ಮಾಡಲು ಸರ್ಕಾರವನ್ನುಒತ್ತಾಯಿಸಲಾಗುವುದು.ಇದಕ್ಕೆಉತ್ತರ ಸಿಗದಿದ್ದಲ್ಲಿ ಕುಟುಂಬ ಸಮೇತ ಸಿಎಂ ಮನೆ ಮುಂದೆಧರಣಿಕೂಡುವುದು ಸತ್ಯವೆಂದು ಹೇಳಿದರು.ಪದಾಧಿಕಾರಿಗಳಾದ ಘನಶ್ಯಾಂ, ಮಂಜು, ಈಶ್ವರ್ ಉಪಸ್ತಿತರಿದ್ದರು.

 

 

 

 

Copyright@2018 Chitralahari | All Rights Reserved. Photo Journalist K.S. Mokshendra,