ಪವನ್ವೆಂಕಟೇಶ್ ನಿರ್ದೇಶನದ ರಾಮ ಜನ್ಮಭೂಮಿ
ಚಂದನವನದ ಹೆಸರಾಂತ ಪ್ರಚಾರ ಸಂಸ್ಥೆ ಶ್ರೀ ರಾಘವೇಂದ್ರ ಚಿತ್ರವಾಣಿಯನ್ನು ಸ್ಥಾಪಿಸಿ ಬೆಳೆಸಿದ ಡಿ.ವಿ.ಸುಧೀಂದ್ರ ನಂತರ ಸುಧೀಂದ್ರವೆಂಕಟೇಶ್ ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರ ಪುತ್ರ ಪವನ್‌ವೆಂಕಟೇಶ್ ಈ ಹಿಂದೆ ‘ಸುಧೀಂದ್ರ ಸಿನಿಪಯಣ’, ‘ಕರೋನ-ಕರಾಳ ರೋಗನಾಶ’ ಕಿರುಚಿತ್ರಗಳನ್ನು ನಿರ್ದೇಶಿಸಿ ತಾನೊಬ್ಬ ಉತ್ತಮ ತಂತ್ರಜ್ಘನೆಂದು ನಿರೂಪಿಸಿಕೊಂಡಿದ್ದರು. ಇದೆಲ್ಲಾದರಿಂದ ಪ್ರೇರಿತರಾಗಿ ಈಗ ಅಯೋಧ್ಯೆ ಕುರಿತಾದ ‘ಶ್ರೀ ರಾಮಜನ್ಮ ಭೂಮಿ’ ಸಾಕ್ಷ್ಯ ಚಿತ್ರವನ್ನು ಸಿದ್ದಪಡಿಸಿದ್ದಾರೆ. ವಿಡಿಯೋದಲ್ಲಿ ಗ್ರಾಫಿಕ್ಸ್, ವಿಎಫ್‌ಎಕ್ಸ್ ಕಲೆಯನ್ನು ಪ್ರಧಾನವಾಗಿ ಬಳಸಲಾಗಿದೆ.
ಹಿನ್ನಲೆ ಧ್ವನಿಯ ಮೂಲಕ ಪುಣ್ಯಭೂಮಿಯ ಪರಿಚಯ ಮಾಡಿಕೊಡಲಾಗಿದೆ. ಸಹೋದರಿ ಚಂದನಾವೆಂಕಟೇಶ, ಸ್ನೇಹಿತರಾದ ಮನೋಜ್.ಹೆಚ್.ಎನ್, ಮಲ್ಲೇಶ್, ರಕ್ಷಿತ್‌ರನ್ನು ಒಳಗೊಂಡ ತಂಡವನ್ನು ಕಟ್ಟಿಕೊಂಡಿರುವ ಪವನ್ ಒಂದಾದ ಮೇಲೊಂದು ಪ್ರಯತ್ನಗಳನ್ನು ಮಾಡುತ್ತಿರುವುದು ಭವಿಷ್ಯದಲ್ಲಿ ಚಿತ್ರನಿರ್ದೇಶಕ ಆಗುವ ಲಕ್ಷಣಗಳು ಗೋಚರಿಸುತ್ತಿದೆ. ಮೂರು ನಿಮಿಷದ ಚಿತ್ರವನ್ನು ಪವನ್ ಎಂಟರ್‌ಟೈನ್‌ಮೆಂಟ್ ಯೂ ಟ್ಯೂಬ್ ಚಾನಲ್‌ದಲ್ಲಿ ವೀಕ್ಷಿಸಬಹುದಾಗಿದೆ.