ತ್ರಯಂಬಕೇಶ್ವರ ಸನ್ನಿಧಿಯಲ್ಲಿ ’ಮೃಗ’ ಚಿತ್ರ ಆರಂಭ.
ಶ್ರಾವಣ ಮಾಸದ ಕೊನೆಯ ಶುಕ್ರವಾರದ ಶುಭದಿನದಂದು ’ಮೃಗ’ ಚಿತ್ರದ ಮುಹೂರ್ತ ಸಮಾರಂಭ ರಾಜಾಜಿನಗರದ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ನೆರವೇರಿತು.
ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ನಿರ್ದೇಶಕ ದೊರೆ ಭಗವಾನ್ ಆರಂಭ ಫಲಕ ತೋರಿದರು. ನಟ ಧರ್ಮ ಕ್ಯಾಮೆರಾ ಚಾಲನೆ ಮಾಡಿದರು.
ನಾನೊಬ್ನೆ ಒಳ್ಳೆವ್ನು ಖ್ಯಾತಿಯ ವಿಜಯ್ ಮಹೇಶ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನಿಖಿತಸ್ವಾಮಿ ಈ ಚಿತ್ರದ ನಾಯಕಿ .
ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವಿರುವ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದ್ದು, ಬೆಂಗಳೂರು ಹಾಗು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
ಹೆಚ್ ಮಾಣಿಕ್ಯ ಫಿಲಂ ಸಿಟಿ ಅರ್ಪಿಸುವ, ಡಿ.ಎಂ.ಎನ್.ಆರ್.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಆರ್ ಶಶಿಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಹೆಚ್.ಎಂ.ಮಾರುತಿ ನಿರ್ದೇಶಿಸುತ್ತಿದ್ದಾರೆ. ಮಾರುತಿ ಅವರಿಗೆ ’ಮೃಗ’ ಮೊದಲ ನಿರ್ದೇಶನದ ಚಿತ್ರ. ಅನಿಲ್ ಕುಮಾರ್ ಛಾಯಾಗ್ರಹಣ ಹಾಗೂ ಮನೀಶ್ ಸಂಕಲನ ಈ ಚಿತ್ರಕ್ಕಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ನಿರ್ದೇಶಕ ಮಾರುತಿ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ವಾಗಿದ್ದು, ಇದರಲ್ಲಿ ನಡೆಯುವ ಕ್ರ್ರೈಂಗಳಿಗೆ ಕಾರಣವೇನು? ಅದರ ಹಿಂದೆ ಯಾರಿದ್ದಾರೆ? ಎನ್ನುವುದು ಚಿತ್ರದ ಒನ್ ಲೈನ್ ಸ್ಟೋರಿ ಎನ್ನುತ್ತಾರೆ.
'ಈವರೆಗೂ ನಾನು ನನ್ನ ಬ್ಯಾನರ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೆ. ಈ ಕಥೆ ಕೇಳಿ ಇಷ್ಟ ಆಯಿತು ಎನ್ನುವುದು ನಾಯಕ ವಿಜಯ್ ಮಹೇಶ್ ಅವರ ಅನಿಸಿಕೆ.
ಮೂಲತಃ ಉದ್ಯಮಿಯಾಗಿ, ರಾಜಕೀಯ ದಲ್ಲೂ ಸಕ್ರಿಯ ವಾಗಿರುವ ನಿರ್ಮಾಪಕ ಶಶಿಕುಮಾರ್ ಮಾತನಾಡಿ ನಿರ್ದೇಶಕ ಮಾರುತಿ ನನಗೆ ಬಹಳ ದಿನಗಳ ಪರಿಚಯ. ಅವರು ಹೇಳಿದ ಕಥೆ ನನಗೆ ಇಷ್ಟವಾಯಿತು ಹಾಗಾಗಿ ನಿರ್ಮಾಣಕ್ಕೆ ಮುಂದಾದೆ ಎಂದು ತಿಳಿಸಿದರು.
ಚಿತ್ರದಲ್ಲಿ ಟ್ರಡಿಷನಲ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿರುವ ನಾಯಕಿ ನಿಖಿತಾ ಸ್ವಾಮಿ ಅವರು ಎಮೋಷನ್ಸ್ ಗೆ ಹೆಚ್ಚು ಬೆಲೆ ಕೊಡುವ ಪಾತ್ರ ನನ್ನದು ಎಂದು ತಮ್ಮ ಪಾತ್ರದ ಪರಿಚಯ ಮಾಡಿಕೊಂಡರು.