December 24.Film News

Tuesday, August 18, 2020

418

ಮೆಡಿಸನ್ ರಿಸರರ್ಚ್ ಸುತ್ತಲಿನ ಡಿಸೆಂಬರ್ 24 ಮೊದಲ ಹಂತದ ಚಿತ್ರೀಕರಣ ಮುಕ್ತಾಯ

 

ನಾಗರಾಜ್ ಎಂಜಿ ಗೌಡ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರ ಡಿಸೆಂಬರ್ 24. ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಈಗಾಗಲೇ ಮುಕ್ತಾಯವಾಗಿದೆ. ಎರಡನೇ ಹಂತದ ಶೂಟಿಂಗ್ನ್ನು ಯಲ್ಲಾಪುರ ಹಾಗೂ ದಾಂಡೇಲಿಯಲ್ಲಿ ನಡೆಸುವ ಪ್ಲಾನ್ ಚಿತ್ರತಂಡಕ್ಕಿದೆ.

ಈ ಚಿತ್ರದಲ್ಲಿ 4 ಹಾಡುಗಳಿದ್ದು ಪ್ರವೀಣ್ ನಿಕೇತನ್ ಸಂಗೀತ ನೀಡಿದ್ದಾರೆ. ಡಾ. ವಿ.ನಾಗೇಂದ್ರಪ್ರಸಾದ್ ಹಾಗೂ ಗೀತಾ ಆನಂದ್ ಪಾಟೀಲï ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರದಲ್ಲಿ ನಾಯಕ ನಟರಾಗಿ ಅಪ್ಪು ಬಡಿಗೇರ, ರವಿ ಕೆ.ಆರ್.ಪೇಟೆ ಕಾಡುಮೆಣಸ, ರಘು ಶೆಟ್ಟಿ, ಜಗದೀಶ್ ಹೆಚ್. ದೊಡ್ಡಿ ಅಭಿನಯಿಸುತ್ತಿದ್ದಾರೆ ಆನಂದ್ ಪಟೇಲ್ ಹುಲಿಕಟ್ಟೆ ಅವರು ಒಬ್ಬ ಖಡಕ್ ಪೋಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸ್ಟಾರ್ ನಟರೊಬ್ಬರು ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ ಎಂಬುದು ನಿರ್ದೇಶಕರ ಮಾತು. ಎಂ.ಜಿ.ಎನ್. ಪ್ರೊಡಕ್ಷನ್ ಲಾಂಛನದಲ್ಲಿ ದೇವು ಹಾಸನ್, ವಿ.ಬೆಟ್ಟೇಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಈಗಿನ ಕಾಲಘಟ್ಟದಲ್ಲಿ ನಡೆಯುವಂತಹ ಘಟನೆಗಳನ್ನಿಟ್ಟುಕೊಂಡು ಮಾಡೋದಿಕ್ಕೆ ಹೊರಟಿರುವಂತಹ ಚಿತ್ರ ಇದಾಗಿದ್ದು, ಭಾರತದಲ್ಲಿ ಪ್ರತಿದಿನ ಹುಟ್ಟುವ ನೂರರಲ್ಲಿ ಮೂರು ಮಕ್ಕಳು ಬ್ರೀತಿಂಗ್ ಪ್ರಾಬ್ಲಮ್ನಿಂದ ಸಾಯ್ತಿದಾರೆ. ಅದಕ್ಕೆ ಇಂಡಿಯನ್ ಮೆಡಿಸನ್ ರಿಸರ್ಚ್ನಿಂದ ಈವರೆಗೆ ಯಾವುದೇ ಮೆಡಿಸಿನ್ ಕಂಡು ಹಿಡಿದಿಲ್ಲ, ಕಂಡುಹಿಡಿದಿದ್ದರೂ ಕೂಡ ಅದರಿಂದ ಪ್ರಯೋಜನವಾಗಿಲ್ಲ. ಈ ತೊಂದರೆಯಿಂದ ಸಾಯುತ್ತಿರುವ ಮಕ್ಕಳಿಗೋಸ್ಕರ ಮೆಡಿಕಲ್ ವಿದ್ಯಾರ್ಥಿಯಾದ ನಾಯಕ ರಿಸರ್ಚ್ ಮಾಡಿ ಬ್ರೀತಿಂಗ್ ಪ್ರಾಬ್ಲಮ್ಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮೆಡಿಸನ್ ಕಂಡುಹಿಡಿಯುತ್ತಾನೆ. 2015ರಿಂದ 2019ರೊಳಗೆ ನಡೆದ ಕೆಲ ನೈಜ ಘಟನೆಗಳನ್ನಿಟ್ಟುಕೊಂಡು ಮಾಡಿಕೊಂಡಿರುವಂತಹ ಕಥೆ ಇದಾಗಿದ್ದು, ಪಕ್ಕಾ ಫ್ಯಾಮಿಲಿ ಲವ್, ಫ್ರೆಂಡ್ಷಿಪ್, ಹಾರರ್, ಥ್ರಿಲ್ಲರ್ನಂಥ ಎಲಿಮೆಂಟ್ಸ್ ಇದರಲ್ಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,