ಗಜಾನನ ಗ್ಯಾಂಗ್ದಲ್ಲಿ ಅದಿತಿಪ್ರಭುದೇವ
ಇಲ್ಲಿಯವರೆಗೂ ಎಲ್ಲಾ ಸಿನಿಮಾಗಳಲ್ಲಿ ಕಲರ್‌ಫುಲ್ ಕಾಲೇಜ್ ಸ್ಟೋರಿಯನ್ನು ತೋರಿಸಲಾಗಿತ್ತು. ಮೊಟ್ಟ ಮೊದಲು ಎನ್ನುವಂತೆ ಮಧ್ಯಮ ವರ್ಗದ ಕಾಲೇಜು ಪ್ರೀತಿ ಕಥನವನ್ನು ‘ಗಜಾನನ ಅಂಡ್ ಗ್ಯಾಂಗ್’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ೨೦೧೪ ರಿಂದ ೨೧ರ ವರೆಗೆ ನಡೆಯುವ ಗಾಥೆ ಇರುವುದು ವಿಶೇಷ. ಚಿತ್ರವು ೨೦೨೧ರಿಂದ ಶುರುವಾಗಿ ಫ್ಲ್ಯಾಶ್‌ಬ್ಯಾಕ್‌ದಲ್ಲಿ ೨೦೧೪ರ ವರೆವಿಗೂ ಸಾಗುತ್ತದೆ. ಜೊತೆಗೆ ಗೆಳೆತನ ಹಾಗೂ ಇತರೆ ಅರ್ಥಪೂರ್ಣ ಅಂಶಗಳು ಸನ್ನಿವೇಶಗಳಲ್ಲಿ ಬರುತ್ತವೆ. ‘ಇರುವುದೆಲ್ಲವ ಬಿಟ್ಟು’ ದಲ್ಲಿ ನಟಿಸಿದ್ದ ಶ್ರೀಮಹದೇವ ನಾಯಕ. ಇವರಿಗೆ ಜೋಡಿಯಾಗಿ ಅದಿತಿಪ್ರಭುದೇವ ನಾಯಕಿ. ಇಬ್ಬರು ವಿದ್ಯಾರ್ಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನಮ್ ಗಣಿ ಬಿ.ಕಾಂ ಪಾಸ್’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಅಭಿಷೇಕ್‌ಶೆಟ್ಟಿ ಕತೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಗೆಳಯನಾಗಿ ನಾಟ್ಯರಂಗ ಉಳಿದಂತೆ ತಾರಾಗಣದ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೆ ಮುಗಿಯಲಿದೆ. ಮೈಸೂರು, ಮಡಕೇರಿ, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ. ಮೂರು ಹಾಡುಗಳಿಗೆ ಪ್ರದ್ಯುತ್ತನ್ ಸಂಗೀತ, ಉದಯಲೀಲಾ ಛಾಯಾಗ್ರಹಣ, ವಿಜೇತ್‌ಚಂದ್ರ ಸಂಕಲನ, ಥ್ರಿಲ್ಲರ್‌ಮಂಜು ಸಾಹಸ ಇರಲಿದೆ. ಬೃಂದಾವನ್ ಎಂಟರ್‌ಪ್ರೈಸಸ್ ಮುಖಾಂತರ ಯು.ಎಸ್.ನಾಗೇಶ್‌ಕುಮಾರ್ ನಿರ್ಮಾಪಕರಾಗಿ ಮೂರನೇ ಅನುಭವ. ಪ್ರಚಾರದ ಮೊದಲ ಹಂತವಾಗಿ ಪೋಸ್ಟರ್‌ನ್ನು ಗೌರಿ-ಗಣೇಶ ಹಬ್ಬದಂದು ಬಿಡುಗಡೆ ಮಾಡಿದ್ದಾರೆ.