ಮಾರ್ಗ ಚಿತ್ರಕ್ಕೆ ಪುನೀತ್ರಾಜ್ಕುಮಾರ್ ಕ್ಲಾಪ್
ಕ್ರೈಮ್ ಥ್ರಿಲ್ಲರ್ ಕತೆ ಹೊಂದಿರುವ ‘ಮಾರ್ಗ’ ಚಿತ್ರದ ಮಹೂರ್ತ ಸಮಾರಂಭವು ಬನಶಂಕರಿಯ ಬನಗಿರಿ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಪ್ರಥಮ ದೃಶ್ಯಕ್ಕೆ ಪುನೀತ್‌ರಾಜ್‌ಕುಮರ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ರಚನೆ,ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವ ಮೋಹನ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಮಾರ್ಗ ಇರುತ್ತದೆ. ಅದನ್ನು ತಲುಪುವ ಹಾದಿಯಲ್ಲಿ ಹಲವಾರು ತೊಂದರೆ, ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯ ಪಾತ್ರಧಾರಿಗಳು ತಮ್ಮ ಗುರಿಯನ್ನು ತಲುಪಲು ಹೊರಟಾಗ ಅದನ್ನೆಲ್ಲ ಅವರು ಹೇಗೆ ಫೇಸ್ ಮಾಡಿದರು. ಕೊನೆಗೆ ಅವರುಗಳು ತಮ್ಮ ಗುರಿಯನ್ನು ತಲುಪಿದರ? ಎನ್ನುವುದು ಒನ್ ಲೈನ್ ಸ್ಟೋರಿಯಾಗಿದೆ ಎಂದರು.
ನಾಯಕ ಚೇತನ್ ಮಾತನಾಡಿ ನಿರ್ದೇಶಕರು ಸುಮಾರು ಆರೇಳು ವμಗಳಿಂದ ಪರಿಚಯ. ಅವರು ಮಾಡಿಕೊಂಡು ಬಂದಿದ್ದ ಸ್ಕ್ರಿಪ್ಟ್ ತುಂಬಾ ಖುಷಿ ಕೊಡ್ತು. ಆಕಾಶ್ ಪಾತ್ರಕ್ಕೆ ಬೇರೆ ಬೇರೆ ಶೇಡ್ಸ್ ಇದೆ. ಟೈಟಲ್ ಮಾರ್ಗ ಅಂತಿದ್ದರೂ, ರೋಡ್ ಕಾನ್ಸೆಪ್ಟ್ ಅಲ್ಲ, ಟೆಕ್ನಿಕಲ್ ವರ್ಕ್ ಪ್ರಮುಖ ಪಾತ್ರ ವಹಿಸುತ್ತದೆ. ನಾನು ಯಾವ ಮಾರ್ಗ ಹಿಡಿಯುತ್ತಾನೆ, ಏಕೆ ಎನ್ನುವುದೇ ಚಿತ್ರದ ಕಂಟೆಂಟ್. ಇಲ್ಲಿ ಯಾವುದೇ ಹೋರಾಟ ಇರೋದಿಲ್ಲ ಎಂದು ಹೇಳಿದರು.
ನಕ್ಷತ್ರ ಹೆಸರಿನಲ್ಲಿ ದಿಯಾ ಖ್ಯಾತಿಯ ಖುಷಿ ಅಭಿನಯಿಸುತ್ತಿದ್ದು ಆಶ್ರಮದಲ್ಲಿ ಬೆಳದಂತ ಸರಳ ಹುಡುಗಿ. ಸಹಾಯ ಮಾಡುವ ಗುಣವಿರುತ್ತದೆ ಅಂತಾರೆ. ಮತ್ತೋಬ್ಬ ನಾಯಕಿ ಗ್ರೀಷ್ಮಾನಾಣಯ್ಯ ಲವ್ವೇಬಲ್ ಕ್ಯಾರಕ್ಟರ್ ಆಗಿದ್ದೇನೆ ಎಂಬುದು ಅವರ ನುಡಿ. ೯೦ರಷ್ಟು ಚಿತ್ರೀಕರಣವನ್ನು ಬೆಂಗಳೂರು ಉಳಿದುದನ್ನು ಚಿಕ್ಕಮಗಳೂರು ಕಡೆಗಳಲ್ಲಿ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸಂಗೀತ ಅಜನೀಶ್‌ಲೋಕನಾಥ್, ಛಾಯಾಗ್ರಹಣ ಎಸ್.ಕೆ.ರಾವ್, ಸಾಹಸ ವಿಕ್ರಂಮೋರ್, ಸಂಭಾಷಣೆ ಶಂಕರ್‌ರಾಮನ್, ನೃತ್ಯ ಕಲೈ ಅವರದಾಗಿದೆ. ನಿರ್ಮಾಪಕ ಮೈಸೂರಿನ ಗೌತಮ್ ಅನುಪಸ್ಥಿತಿಯಲ್ಲಿ ಸುಂದರ ಸಮಾರಂಭವು ಜರುಗಿತು.