ಸ್ಪೂರ್ತಿಯ ಸೆಲೆಯಾದ ಆಲ್ಬಂ ಗೀತೆ
'ನೀನು ಇನ್ನೊಬ್ಬರಿಗೋಸ್ಕರ ಬದುಕಿದರೆ ಅದಕ್ಕೆ ಬದುಕು ಅಂತಾರೆ , ಇಲ್ಲಾಂದ್ರೆ ನೀನು ಬದುಕಿದ್ದೂ ಸತ್ತಂತೆಯೇ ’ ಇದು ಮಹಾ ಚೇತನ ಸ್ವಾಮಿ ವಿವೇಕಾನಂದರ ಮಾತುಗಳು. ಇಡೀ ವಿಶ್ವಕ್ಕೆ ಅವರು ಸಾರಿದ ಇಂತಹ ನುಡಿಗಳು ಯುವಕರ ಎದೆಯಲ್ಲಿ ಹಚ್ಚ ಹಸಿರಾಗಿದೆ. ಎಲ್ಲರ ಪಾಲಿಗೆ ಅವರು ಒಂದು ಸ್ಪೂರ್ತಿಯ ಸೆಲೆ. ಅವರಾಡಿದ ನುಡಿಗಳನ್ನೇ ದಾರಿದೀಪವಾಗಿಸಿ , ಅವರು ಬದುಕಿ ನಡೆದು ತೋರಿಸಿದ ದಾರಿಯನ್ನೇ ಅನುಸರಿಸಿ , ಅವರನ್ನು ಬದುಕಿನ ದಿವ್ಯ ಚೇತನವನ್ನಾಗಿಸಿ ಆರಾಧಿಸಿಕೊಂಡು ಬಂದಂತಹ ಯುವಕರ ತಂಡ ’ಜೈ ಜೈ ಸ್ವಾಮಿ ವಿವೇಕಾನಂದ ’ ಎಂಬ ಲಿರಿಕಲ್ ವಿಡಿಯೋ ವನ್ನು ಹೊರತಂದಿದ್ದಾರೆ. ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ತುಳು ಹೀಗೆ ನಾಲ್ಕು ಭಾಷೆಗಳಲ್ಲಿ ತಯಾರಾಗಿರುವುದು ಈ ಆಲ್ಬಂ ವಿಶೇಷ.
ಚೌಕಿ ರಂಗಿನ ಮನೆ’ ಎಂಬ ಕಲಾತ್ಮಕ ಹಾಗೂ ಪ್ರಯೋಗಾತ್ಮಕ ಚಲನಚಿತ್ರ ವನ್ನು ನಿರ್ದೇಶಿಸಿ , ನಿರ್ಮಿಸಿದ ಸಿ. ಜಯಪ್ರಕಾಶ್ ಈ ಪ್ರಯತ್ನ ಕ್ಕೆ
ಮುಂದಾಗಿದ್ದು ಅದರಲ್ಲಿ ಯಶಸ್ವಿಯಾಗಿದ್ದಾರೆ. ಸ್ವಾಮಿ ವಿವೇಕಾನಂದ ಜಯಪ್ರಕಾಶ್ ಅವರ ಕನಸಿನ ಕೂಸು. ಇದಕ್ಕೆ ಎರಡು ವರ್ಷಗಳಿಂದಲೂ ತನ್ನನ್ನು ತಾನು ತೊಡಗಿಸಿಕೊಂಡು ಇದೀಗ ಬಿಡುಗಡೆಗೆ ಮಾಡಿದ್ದಾರೆ.
ಇದರ ಮೂಲ ಇಂಗ್ಲಿಷ್ ಸಾಹಿತ್ಯವನ್ನು ಜಯಪ್ರಕಾಶ್ ಬರೆದು, ನಿರ್ದೇಶನ ಮಾಡಿದ್ದಾರೆ. ಹಿಂದಿಯ ಸಾಹಿತ್ಯ ಮೆಲ್ವಿನ್ ಅಂತೋನಿ ಡಿಸೋಜಾ ಅವರದ್ದಾದರೆ ತುಳು ಹಾಗು ಕನ್ನಡ ಸಾಹಿತ್ಯ ವಿಜೇಶ್ ಮಂಗಳಾದೇವಿ ಬರೆದ್ದಿದ್ದಾರೆ.
ಗಾಯಕಿ ಐರಾ ಉಡುಪಿ ಅವರ ಸುಮಧುರ ದನಿಯಲ್ಲಿ ನಾಲ್ಕು ಭಾಷೆಯ ಹಾಡುಗಳು ಮೂಡಿಬಂದಿವೆ. ಸುರೇಶ್ ಬಾಬು ಸಂಗೀತ, ಸುಹಾಸ್ ಸಂಕಲನ ಹಾಗೂ ದೇರಳಕಟ್ಟೆ ಸುರೇಶ್ ಅವರ ಛಾಯಾಗ್ರಹಣವಿದೆ.