ಹೊಸ ಕಸ್ತೂರಿ ನಿವಾಸದಲ್ಲಿ ವಿನೂತನಕಥೆ
೭೦ರ ದಶಕದಲ್ಲಿ ಬಿಡುಗಡೆಗೊಂಡು ಹಿಟ್‌ಆಗಿದ್ದಡಾ.ರಾಜ್‌ಕುಮಾರ್‌ಅಭಿನಯದ ‘ಕಸ್ತೂರಿ ನಿವಾಸ’ ಚಿತ್ರವು ಮತ್ತೆ ಬರಲಿದೆ.ಅಂದರೆಇದೇ ಹೆಸರಿನಲ್ಲಿ ಸಿನಿಮಾವೊಂದು ಶುಕ್ರವಾರ ಸೆಟ್ಟೇರಿದೆ. ಸದಭಿರುಚಿಯ ಸಿನಿಮಾಗಳನ್ನು ನೀಡಿರುವ ದಿನೇಶ್‌ಬಾಬುಅವರ ೫೦ನೇ ನಿರ್ದೇಶನಎಂಬುದುವಿಶೇಷ. ಶೀರ್ಷಿಕೆ ಅನಾವರಣ ಸಂದರ್ಭದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಚಿತಾರಾಮ್ ಮಾತನಾಡಿ ನಿರ್ದೇಶಕರು ಸಾಕಷ್ಟು ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಅವರ ೫೦ನೇ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ಸುಕೃತಎನ್ನಬಹುದು.ಲಾಕ್‌ಡೌನ್ ನಂತರ ನನ್ನ ಪಾಲಿಗೆ ಮೊದಲ ಸುದ್ದಿಗೋಷ್ಟಿ. ಇದು ಸಹ ಮತ್ತೋಂದು ಯಶಸ್ಸಿನ ಸಾಲಿಗೆ ಸೇರುತ್ತದೆಂಬ ನಂಬಿಕೆ ಇದೆ.ಡ್ರೆಸ್ ನೋಡಿದಾಗ ಹಳ್ಳಿ ಹುಡುಗಿಅಂತ ಅನಿಸಬಹುದು.ಆದರೆ ನನ್ನ ಪಾತ್ರಕ್ಕೆತುಂಬಾ ಗೆಟಪ್‌ಗಳಿವೆ. ಅದನ್ನು ಈಗಲೇ ಹೇಳಲು ಆಗುವುದಿಲ್ಲಎಂದರು.
ಮಹಿಳಾ ಪ್ರಧಾನಕತೆಯಲ್ಲಿಅತೀತ ಶಕ್ತಿಯ ಸುತ್ತಚಿತ್ರವು ಸಾಗುತ್ತದೆ.ಪ್ಯಾರಾ ನಾರ್ಮಲ್‌ಆಕ್ಟಿವಿಟಿಇದ್ದರೂ, ದೆವ್ವ, ಭೂತಇರುವುದಿಲ್ಲ.ಸ್ಪಿರಿಟ್ ಇರಲಿದ್ದು, ಅದು ಸಕರಾತ್ಮಕ, ನಕರಾತ್ಮಕಇರಬಹುದು.ಅದರಿಂದೇನಾಗುತ್ತದೆಎನ್ನುವುದುಚಿತ್ರದಲ್ಲಿ ನೋಡಬೇಕುಎನ್ನುತ್ತಾರೆ ನಿರ್ದೇಶಕರು. ಮತ್ತೋಂದು ಪ್ರಮುಖ ಪಾತ್ರದಲ್ಲಿ ಸ್ಕಂದ ಮತ್ತು ಶ್ರುತಿಪ್ರಕಾಶ್ ನಟಿಸುತ್ತಿದ್ದಾರೆ.ವಿದೇಶದಲ್ಲಿ ಸಾಕಷ್ಟು ಇವೆಂಟ್‌ಗಳನ್ನು ಮಾಡಿದಅನುಭವವಿದೆ.ಮೊದಲನಿಂದಲೂ ನಿರ್ಮಾಣದ ಬಗ್ಗೆ ಆಸಕ್ತಿ ಇತ್ತು.ರಚಿತಾರಾವ್ ವಾಸಿಸುವ ಮನೆ ಹೆಸರುಇದೇಆಗಿರುತ್ತದೆ ಎಂಬ ಕಾರಣಕ್ಕೆಟೈಟಲ್‌ನ್ನುಇಡಲಾಗಿದೆ. ಹಾಗೇನಾದರೂಆಕ್ಷೇಪ ಬಂದರೆ ಬೇರೆ ಶೀರ್ಷಿಕೆಯನ್ನು ಇಡಲಾಗುವುದುಎನ್ನುತ್ತಾರೆ ನಿರ್ಮಾಪಕರಲ್ಲಿಒಬ್ಬರಾದರುಬಿನ್‌ರಾಜ್.
ಒಂದುಗೀತೆಗೆ ಗುಮ್ಮಿನೇನಿವಿಜಯ್ ಸಂಗೀತ ಸಂಯೋಜಿಸುತ್ತಿದ್ದಾರೆ.ಛಾಯಾಗ್ರಹಣ ಪಿ.ಕೆ.ಹೆಚ್.ದಾಸ್, ಸಂಕಲನ ಪಿ.ಆರ್.ಸೌಂದರ್‌ರಾಜ್‌ಅವರದು. ಬೆಟ್ಟಕಾಡಿನಂತ ಸ್ಥಳಗಳಿಗಾಗಿ ಮಲೆನಾಡಿದಲ್ಲಿ ಹುಟುಕಾಟ ನಡೆಸಿದ್ದು, ಸೆಪ್ಟಂಬರ್‌ಕೊನೆವಾರದಿಂದಚಿತ್ರೀಕರಣ ಶುರುವಾಗಲಿದೆ.ಶ್ರೀ ಭವಾನಿ ಆರ್ಟ್ಸ್ ಮತ್ತುರುಬಿನ್‌ರಾಜ್ ಪ್ರೊಡಕ್ಷನ್‌ಅಡಿಯಲ್ಲಿ ರವೀಶ್.ಆರ್.ಸಿ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.