ಕಬ್ಜ ಚಿತ್ರದ ವೆಬ್ಸೈಟ್ ಲೋಕಾರ್ಪಣೆ
ಫ್ಯಾನ್ ಇಂಡಿಯಾದಲ್ಲಿ ಸಿದ್ದಗೊಳ್ಳುತ್ತಿರುವ ಅದ್ದೂರಿ ‘ಕಬ್ಜ’ ಚಿತ್ರದ ಮಾಹಿತಿ ಕುರಿತ ವೆಬ್ಸೈಟ್ ಬಿಡುಗಡೆ ಕಾರ್ಯಕ್ರಮ ಸೆವನ್ ಸ್ಟಾರ್ ಶೆರ್ಟಾನ್ ಹೋಟೆಲ್ದಲ್ಲಿ ನಡೆಯಿತು. ಶಿವಣ್ಣ ಯಾವತ್ತು ಲಕ್ಕಿ ಹ್ಯಾಂಡ್. ಕಬ್ಜ ಅವರ ಕೈಯಿಂದಲೇ ಅನಾವರಣಗೊಂಡಿದೆ ಎಂದು ಹೊಗಳಿಕೆಗೆ ಮಾತನ್ನು ಕೆ.ಪಿ.ಶ್ರೀಕಾಂತ್ ಮೀಸಲಿಟ್ಟರು.
ಆರ್.ಚಂದ್ರು ಅವರ ನಿಷ್ಟೆ, ಅದ್ದೂರಿತನ ಪ್ರತಿ ಹಂತದಲ್ಲಿ ಕಾಣಬಹುದು. ಇಂತಹ ನಿರ್ದೇಶಕ ಇರುವುದರಿಂದಲೇ ನಮ್ಮ ಚಿತ್ರರಂಗವು ದೇಶದ ಗಮನ ಸೆಳೆಯುತ್ತಿದೆ. ನಿರೀಕ್ಷೆಯ ಪಟ್ಟಿಯಲ್ಲಿ ಹತ್ತರಲ್ಲಿ ಮೂರರೊಳಗಿದೆ. ಮೇಕಿಂಗ್ ನೋಡಿದರೆ ಗೊತ್ತಾಗುತ್ತದೆ. ಮುಂದೆ ನಾನು, ಉಪೇಂದ್ರ, ಚಂದ್ರು ಸೇರಿದಂತೆ ಒಟ್ಟಿಗೆ ಕೂಡುವ ಸಮಯ ಬರಲಿದೆ ಅಂತ ಶಿವರಾಜ್ಕುಮಾರ್ ಖುಷಿ ಸುದ್ದಿ ನೀಡಿದರು.
ಚಂದ್ರು ಏನೇ ಮಾಡಿದರೂ ಅವರ ಸಿನಿಮಾದಲ್ಲಿ ವೈಭವ ಕಾಣಬಹುದು. ಇದನ್ನು ಐ ಲವ್ ಯುದಲ್ಲಿ ಅನುಭವಿಸಿದ್ದೇನೆ. ಅದು ಇದರಲ್ಲೂ ಮುಂದುವರೆಯಲಿದೆ. ನನಗೆ ಉತ್ತಮ ಕಾಸ್ಟ್ಯೂಮ್ದಲ್ಲಿ ತೋರಿಸಲು ಅರು ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ಇದೆಲ್ಲ ಅವರು ಇಟ್ಟಿರುವ ಸಿನಿಮಾ ಪ್ರೀತಿ ಎಂಬುದಾಗಿ ನಾಯಕ ಉಪೇಂದ್ರ ಹೇಳಿದರು.
ಇದು ನನ್ನ ಹನ್ನರೆಡನೇ ಸಿನಿಮಾ ಆಗಿದೆ. ಇಷ್ಟು ಚಿತ್ರಕ್ಕಿಂತ ಇದು ಭಿನ್ನವಾಗಿದ್ದು ಮೇಕಿಂಗ್ದಲ್ಲಿ ಕಾಣಬಹುದು. ಏಳು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ನೇರವಾಗಿ ಸಿದ್ದಗೊಳ್ಳಲಿದೆ. ಶೇಕಡ ೨೦ರಷ್ಟು ಚಿತ್ರೀಕರಣ ಮುಗಿದಿದೆ. ಕರೋನ ಬಂದಿದ್ದರಿಂದ ಮಿನರ್ವ ಮಿಲ್ದಲ್ಲಿ ಹಾಕಲಾಗಿದ್ದ ಒಂದೂವರೆ ಕೋಟಿ ಸೆಟ್ ಉಪಯೋಗಕ್ಕೆ ಬಂದಿಲ್ಲ. ಈಗ ಅದೇ ಜಾUದಲ್ಲಿ ಸೆಟ್ನ್ನು ನಿರ್ಮಿಸಿ ಕೆಲಸ ಮುಂದುವರೆಸಲಾಗುತ್ತದೆ. ಇದೇ ಇಪ್ಪತ್ತರಿಂದ ಶೂಟಿಂಗ್ ಶುರುವಾಗಲಿದೆ. ಜನಪ್ರಿಯ ನಾಯಕಿ ನಟಿಸುತ್ತಾರೆ. ಅದು ಯಾರು ಎಂಬುದು ಇಲ್ಲಿಗೆ ಬಂದಾಗಲೆ ತಿಳಿಯಲಿದೆ ಎಂದು ನಿರ್ಮಾಪಕ, ನಿರ್ದೇಶಕ ಆರ್.ಚಂದ್ರು ಒಂದಷ್ಟು ಸುದ್ದಿಗಳನ್ನು ಹರಿಬಿಟ್ಟರು.
ನೂತನ ಎಂಎಲ್ಸಿ ಎಂಟಿಬಿ.ನಾಗರಾಜ್ ಹಾಜರಿದ್ದುದು ವಿಶೇಷವಾಗಿತ್ತು. ಅವರು ಮಾತನಾಡುತ್ತಾ ಚಂದ್ರ್ರು ನನ್ನ ತಾಲ್ಲೋಕಿನವರು. ಅವರ ಸಾಹಸ, ಕ್ರಿಯಾಶೀಲತೆ ಗೊತ್ತಿದೆ. ಎಲ್ಲಾ ರೀತಿಯ ಸಹಕಾರ ನೀಡುತ್ತೇನೆಂದು ಭರವಸೆ ಕೊಟ್ಟರು. ಡಾ.ಸೌಜನ್ಯ, ವಿತರಕ ಮೋಹನ್ ಮತ್ತು ಸಿನಿಪಂಡಿತರು ಹಾಜರಿದ್ದರು.