Karnataka Film Chamber.News

Wednesday, September 02, 2020

312

ಚಂದನವನದಲ್ಲಿಡ್ರಗ್ಸ್ ನಂಟು - ಫಿಲಿಂಚೇಂಬರ್ ಬೇಸರ

ಚಿತ್ರರಂಗದಲ್ಲಿಕಲಾವಿದರು, ತಂತ್ರಜ್ಗರುಗಳಿಗೆ ಡ್ರಗ್ಸ್ ಮಾಫಿಯ ನಂಟುಇದೆಎಂಬುದಕ್ಕೆಯಾವುದೇರೀತಿಯ ಸಾಕ್ಷ್ಯಗಳು ಇಲ್ಲ. ಪ್ರಕರಣಇನ್ನುತನಿಖೆ ಹಂತದಲ್ಲಿರುವಾಗಲೇಎಲ್ಲರನ್ನುದೋಷಿಸುವುದು ಸರಿಯಲ್ಲ. ಆರೋಪ ಸಾಬೀತಾದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಂಥಕಲಾವಿದರವಿರುದ್ದ ಮಂಡಳಿಯು ಕಠಿಣಕ್ರಮ ತೆಗೆದುಕೊಳ್ಳುತ್ತದೆ ಎಂದುಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಜೈರಾಜ್‌ಎಚ್ಚರಿಕೆ ನೀಡಿದರು.ಮಾತು ಮುಂದುವರೆಸುತ್ತ ಕಳೆದ ೬ ತಿಂಗಳಿಂದ ಚಿತ್ರರಂಗದಲ್ಲಿ ಉಸಿರುಗಟ್ಟಿದ ವಾತವರಣವಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿಇದ್ದೇವೆ. ಇದರ ಮಧ್ಯೆಡ್ರಗ್ಸ್ ಸುದ್ದಿ ಹರಡಿರುವುದು ಬೇಸರ ತರಿಸಿದೆ.ಇಂದ್ರಜಿತ್ ಲಂಕೇಶ್‌ತಾವು ಮಾಡುತ್ತಿರುವಆರೋಪವನ್ನು ನಮ್ಮ ಗಮನಕ್ಕೆ ತಂದಿಲ್ಲ. ಅಲ್ಲದೆ ಬೇರೆಯಾವ ನಿರ್ಮಾಪಕರು, ನಿರ್ದೇಶಕರು ಈ ಕುರಿತು ಮಾತಾಡಿಲ್ಲವೆಂದುಅಧ್ಯಕ್ಷರು ಸ್ಪಷ್ಟಪಡಿಸಿದರು.

ದೊಡ್ಡಣ್ಣ ಮಾತನಾಡಿಗಾಂಧಿನಗರವನ್ನುಗಾಂಜಾನಗರವೆಂದು ಹೇಳಿರುವುದು ತುಂಬಾ ನೋವುಂಟು ಮಾಡಿದೆ. ಗಾಂಧಿನಗರಖಂಡಿತವಾಗಿಯೂಗಾಂಜನಗರವಾಗಿಲ್ಲ. ಕೊರೊನಾ ಪರಿಸ್ಥಿತಿಯಲ್ಲಿ ಹಲವರು ನಿರುದ್ಯೋಗಿಗಳಾಗಿದ್ದಾರೆ.ಚಿತ್ರೀಕರಣ ಶುರು ಮಾಡಿರೆಂದು ಬೇಡಿ ಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿಇದನ್ನು ಪ್ರಸ್ತಾಪ ಮಾಡುತ್ತಿರುವುದುದು:ಖವಾಗುತ್ತಿದೆ. ಕಳೆದ ತಿಂಗಳು ನಿಧನರಾದಚಿರಂಜೀವಿಸರ್ಜಾ ಬಗ್ಗೆ ಮಾತನಾಡಬಾರದಿತ್ತು.ಪತ್ನಿ ಮೇಘನಾರಾಜ್‌ಅವರಿತುಂಬಾ ನೋವಿಗಿದೆಎಂದರು.

ಚಿತ್ರರಂಗ ನಮಗೆ ದೇವಸ್ಥಾನಇದ್ದಂತೆ. ನಟನೆಯನ್ನೆ ನಂಬಿಕೊಂಡು ಬಂದಿರುವಕಲಾವಿದರುತಪ್ಪುದಾರಿಗೆ ಇಳಿದಿಲ್ಲ. ಆದರೆತೆವಲಿಗಾಗಿ ಹೊಸದಾಗಿ ಬಂದವರಿಂದಚಿತ್ರರಂಗಕ್ಕೆಕೆಟ್ಟ ಹೆಸರು ಬರುತ್ತಿದೆಎಂದುಕಟುವಾಗಿ ಸಾರಾ.ಗೋವಿಂದು ಟೀಕಿಸಿದರು.ನಿರ್ಮಾಪಕರ ಸಂಘದಅಧ್ಯಕ್ಷ ಪ್ರವೀಣ್‌ಕುಮಾರ್, ಸಿನಿಪಂಡಿತರುಗಳಾದ ಉಮೇಶ್‌ಬಣಕಾರ್, ಎನ್.ಎಂ.ಸುರೇಶ್, ಎ.ಗಣೇಶ್ ಮುಂತಾದವರು ಹಾಜರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,