ಚಿತ್ರಮಂದಿರದಲ್ಲಿ ಮುಖವಾಡ ಇಲ್ಲದವನು ೮೪
ಹೊಬರ ‘ಮುಖವಾಡ ಇಲ್ಲದವನು ೮೪’ ಚಿತ್ರವು ಸದ್ದು ಮಾಡುತ್ತಿದೆ. ಬೆಂಗಳೂರು, ಕೆಮ್ಮಣ್ಣುಗುಂಡಿ, ಬನ್ನೇರುಘಟ್ಟದ ಸುವರ್ಣಮುಖಿ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಒಬ್ಬ ಮನುಷ್ಯ ತಾನು ಹುಟ್ಟಿದಾಗಿನಿಂದ ಸಾಯುವ ತನಕ ಯಾವ ಯಾವ ರೀತಿ ಮುಖವಾಡ ಹಾಕುತ್ತಾನೆ ಎಂಬುದು ಸೆಸ್ಪೆನ್ಸ್ ಚಿತ್ರದ ಕಥಾಹಂದರವಾಗಿದೆ. ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಜೊತೆಗೆ ಮುಖ್ಯ ಪಾತ್ರದಲ್ಲಿ ಶಿವಕುಮಾರ್(ಕಡೂರ್) ಕಾಣಿಸಿಕೊಂಡಿದ್ದಾರೆ. ಮಧುಆರ್ಯ-ವಿನಯ್‌ಗೌಡ-ಗಿರೀಶ್ ಛಾಯಾಗ್ರಹಣ, ಎರಡು ಹಾಡುಗಳಿಗೆ ಸಂಗೀತ ದುರ್ಗಪ್ರಸಾದ್, ಹಿನ್ನಲೆ ಶಬ್ದ ಮಹಾರಾಜ್ ಹಾಗೂ ರುದ್ರೇಶ್‌ಲಕ್ಕ ಸಂಕಲನವಿದೆ.
ತಾರಗಣದಲ್ಲಿ ರಚನಾಅಂಬಲೆ, ಅನುಶ್ರೀ, ಕಾವ್ಯಗೌಡ, ಸಿ.ಎಸ್.ಪಾಟೀಲ್, ಹರೀಶ್.ಸಾರಾ, ಸಿತಾರಾ, ಮಾಲತೇಶ, ರಾಜನೀನಾಸಂ, ಜಗದೀಶ್‌ಜಾಲಾ, ರಂಗಸ್ವಾಮಿ, ಶಂಕರಶೆಟ್ಟಿ, ವೈಷ್ಣವಿ, ಆನಂದ್‌ಕೋರಾ, ಜಯಸೂರ್ಯ ಮುಂತಾದವರು ನಟಿಸಿದ್ದಾರೆ. ಮತ್ತು ಕೊಲ್ಲಾಪುರ ಮೂಲದ ಸೋನಾಲಿರೈ ಕೊರವಂಜಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಓಂ ನಮ: ಶಿವಾಯ ಮೂವೀಸ್ ಲಾಂಛನದಲ್ಲಿ ಗಣಪತಿಪಾಟೀಲ್‌ಬೆಳಗಾವಿ ನಿರ್ಮಾಣ ಮತ್ತು ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಎ’ ಪ್ರಮಾಣಪತ್ರ ಪಡೆದುಕೊಂಡಿರುವ ಸಿನಿಮಾವು ಇದೇ ಶುಕ್ರವಾರದಂದು ರಾಜ್ಯದ್ಯಂತ ತೆರೆಕಾಣುತ್ತಿದೆ.