ಗಾದೆ ಮಾತು ಚಿತ್ರದ ಶೀರ್ಷಿಕೆ
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದು ಹಿರಿಯರು ಹೇಳಿದ್ದಾರೆ. ‘ಉದ್ಯೋಗಂ ಪುರುಷ ಲಕ್ಷಣಂ’ ಎನ್ನುವ ಗಾದೆಯು ಈಗ ಸಿನಿಮಾ ಶೀರ್ಷಿಕೆಯಾಗಿದ್ದು ಬಿಡುಗಡೆಗೆ ಸಿದ್ದವಾಗಿದೆ. ಅತೃಪ್ತಿ ಜೀವನ. ಉದ್ಯೋಗ ಎಲ್ಲರಿಗೂ ಇರುತ್ತದೆ. ಕೆಲಸ ಅಂತ ಸಿಕ್ಕಮೇಲೆ ನೆಮ್ಮದಿ ಸಿಗುತ್ತದೆ. ಆಗ ಶೇಕಡ ನೂರರಷ್ಟು ಕನಸುಗಳು ಈಡೇರುತ್ತದೆ. ಕತೆಯಲ್ಲಿ ನಾಲ್ಕು ಜನ ಯುವಕರು ಏನು ಮಾಡದೆ ಉಡಾಫೆಯಾಗಿರುತ್ತಾರೆ. ಇವರ ಸುತ್ತಲಿನ ಜನರು ಇವರುಗಳನ್ನು ಹೇಗೆ ತೀರ್ಮಾನಿಸಿರುತ್ತಾರೆ. ಒಂದು ಹಂತದಲ್ಲಿ ಹುಡುಗರು ಅರ್ಥಪೂರ್ಣ ತೀರ್ಪು ಕೊಟ್ಟಾಗ ಕಾಲ, ಸಮಾಜವು ಇವರೇನೋ ಮಾಡಿದ್ದಾರೆಂದು ಗೌರವದಿಂದ ಕಾಣುತ್ತಾರೆ. ಪ್ರೀತಿ ಅಷ್ಟೇ ಅಲ್ಲ, ಉದ್ಯೋಗ ಕೂಡ ಜೀವನದಲ್ಲಿ ಮುಖ್ಯವಾದುದೆಂದು ಹೇಳಲಾಗಿದೆ. ಟೆಂಟ್ ಶಾಲೆಯಲ್ಲಿ ತರಭೇತಿ ಹಾಗೂ ನಾಗತ್ತಿಹಳ್ಳಿ ಚಂದ್ರಶೇಖರ ಬಳಿ ಕೆಲಸ ಮಾಡಿರುವ ಸುಜಿತ್‌ಕುಮಾರ್.ಕೆ.ಎಂ. ಕತೆ,ಚಿತ್ರಕತೆ,ಸಂಭಾಷಣೆ, ಸಾಹಿತ್ಯ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. ಇವರನ್ನು ನಂಬಿಕೊಂಡು ರಾಕೇಶ್‌ಚೆಲುವರಾಜ್ ಹಣ ಹೂಡಿದರೆ, ಸಚ್ಚಿನ್.ವೈ.ಸಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಲವರ್‌ಬಾಯ್, ವಿಲಾಸಿ ಪಾತ್ರದಲ್ಲಿ ರಾಜ್‌ಚರಣ್ ನಾಯಕ. ಮುಗ್ದ ಹುಡುಗನಾಗಿ ಸಾವನ್‌ಸಿಂಗ್‌ಠಾಕೂರ್ ಉಪನಾಯಕ. ಭೂಮಿ ಹೇಗೆ ಭಾರ ಹೊತ್ತುಕೊಳ್ಳುತ್ತೋ, ಅದೇ ರೀತಿ ಪೃಥ್ವಿ ಹೆಸರಿನಲ್ಲಿ ಇಬ್ಬರ ಹುಡುಗರ ಬದುಕಿನ ಭಾರವನ್ನು ಹೊತ್ತುಕೊಂಡಿರುತ್ತಾಳೆ. ಅವರಿಗೆ ಧೈರ್ಯ ತುಂಬಿ ಕೆಲಸ ಮಾಡುವಂತೆ ಪ್ರೇರೆಪಿಸುತ್ತಾಳೆ. ಅಂತಿಮದಲ್ಲಿ ಯಾರನ್ನು ಮೆಚ್ಚಿಕೊಳ್ಳುತ್ತಾಳೆ ಎನ್ನುವ ರಿಧಿರಾಯ್ ನಾಯಕಿಯಾಗಿ ಹೊಸ ಅನುಭವ. ಸತ್ಯರಾಧಕೃಷ್ಣ ಎರಡು ಹಾಡಿಗೆ ಸಾಹಿತ್ಯ ಮತ್ತು ಸಂಗೀತ ಒದಗಿಸಿದ್ದು, ಒಂದು ಗೀತೆಗೆ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಸಾಂಕೇತ್-ಮಂಜು, ನೃತ್ಯ ವಿಜಯ್, ಸಂಕಲನ ರಾಮ್‌ಶೆಟ್ಟಿಪವನ್ ಅವರದಾಗಿದೆ.