Naanonthara.Film Press Meet.

Friday, December 04, 2020

274

ತೆರೆಗೆ ಸಿದ್ದ ನಾನೊಂಥರ

       ‘ನಾನೊಂಥರ’ ಗುಣದವರು ಮೇಲಿನಂತೆ ಹೇಳುತ್ತಿರುತ್ತಾರೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಕತೆಯಲ್ಲಿ ಅಪ್ಪನನ್ನು ಇಷ್ಟಪಟ್ಟರೆ ಪ್ರೀತಿ ಮಾಡುತ್ತಾನೆ. ಹುಡುಗಿಯನ್ನು ಲವ್ ಮಾಡಬೇಕು ಅನಿಸಿದರೆ ಅದರಲ್ಲೆ ಮುಂದುವರೆಯುತ್ತಾನೆ. ಕುಡಿಬೇಕು ಎಂದುಕೊಂಡರೆ ಬಾರ್‌ಗೆ ಹೋಗುತ್ತಾನೆ. ಸಿಗರೇಟ್ ಸೇದಬೇಕೆಂಬ ಅಸೆ ಬಂದರೆ ದಂ ಎಳೆಯುತ್ತಾನೆ. ಇಂತಹ ವಿಶೇಷ ಗುಣ  ಕಥಾನಾಯಕನಲ್ಲಿ ಇರುತ್ತದೆ. ಎಲ್ಲಾ ಚಿತ್ರದಲ್ಲಿ ಪ್ರಿಯತಮೆ ಸಿಗದೆ ಇದ್ದಾಗ  ದೇವದಾಸ ಆಗುತ್ತಾನೆ. ಆದರೆ ಇದರಲ್ಲಿ ಕುಡುಕ ಆದ ನಂತರ ಹುಡುಗಿ ಬಂದರೆ ಹೆಂಗಿರುತ್ತೆ. ರೌಡಿಯಾಗ ಬೇಕಾದ ಹುಡುಗ ಇದ್ದಕ್ಕಿದ ಹಾಗೆ ಎಣ್ಣೆ ಚಟಕೆ ಬರಲು ಕಾರಣವಾದರೂ ಏನು? ನೋಡುಗರಿಗೆ ಈತನು ಒಳ್ಳೆಯವನಾ?  ಕೆಟ್ಟವನಾ ಅಂತ ಗೊಂದಲ ಹುಟ್ಟಿಸುತ್ತಾ ಕ್ಲೈಮಾಕ್ಸ್‌ದಲ್ಲಿ ಎಲ್ಲದಕ್ಕೂ ಸಮರ್ಥನೆ ಉತ್ತರವನ್ನು ನೀಡಲಾಗಿದೆ. ಜೊತೆಗೆ ಆತನು ಪ್ರತಿಯೊಂದರಲ್ಲಿ ಬದಲಾವಣೆಗೊಂಡಾಗ ಅದಕ್ಕೆ ಅನುಗುಣವಾಗಿ ಸಂದೇಶವನ್ನು ಹೇಳಲಾಗಿದೆ.

       ಯು.ರಮೇಶ್‌ಕಗ್ಗಲ್ಲು ರಚಿಸಿ ನಿರ್ದೇಶನ ಮಾಡಿರುವುದು ಎರಡನೇ ಅವಕಾಶ.  ವೃತ್ತಿಯಲ್ಲಿ ಡಾಕ್ಟರ್ ಆಗಿರುವ ತಾರಕ್.ವಿ.ಶರಣಪ್ಪ  ನಾಯಕನಾಗಿ ಎರಡನೆ ಚಿತ್ರ. ಈತನ ತಂದೆಯಾಗಿ ದೇವರಾಜ್ ಬ್ಯಾಂಕ್ ಮ್ಯಾನೇಜರ್ ಪಾತ್ರ. ಶಕ್ತಿಶಾಲಿ ಮಹಿಳೆ, ನಾಯಕನನ್ನು ಸರಿದಾರಿಗೆ ಕರೆತರುವ ರಕ್ಷಿಕ ನಾಯಕಿ. ಎಸ್‌ಎನ್‌ಜೆ.ಸುನಿರಾಜ್ ಸಾಹಿತ್ಯದ ಆರು ಹಾಡುಗಳಿಗೆ ಸುನಿಲ್‌ಸ್ಯಾಮ್ಯುಲ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸುದೀಪ್‌ಫೆಬ್ರಿಕ್, ಸಂಕಲನ ಸತೀಶ್‌ಚಂದ್ರಯ್ಯ ನಿರ್ವಹಿಸಿದ್ದಾರೆ. ಬೆಂಗಳೂರು ಮತ್ತು ದೇವದುರ್ಗ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಡಾ.ರಾಜ್‌ಕುಮಾರ್ ಅಭಿನಯದ ‘ಧ್ರುವತಾರೆ’ ಚಿತ್ರದಲ್ಲಿ ಪ್ರೌಡಶಾಲೆ ವಿದ್ಯಾರ್ಥಿ. ಸದ್ಯ ಕಂಪರ್ಟ್ ಹಾಸ್ಪಿಟಲ್ ಎಂಡಿ ಆಗಿರುವ ಡಾ.ಜಾಕ್ಲಿನ್ ಫ್ರಾನ್ಸಿಸ್ ಮೊದಲ ಅನುಭವ ಎನ್ನುವಂತೆ ಚಿತ್ರಕ್ಕೆ ಆರ್ಥಿಕ ಇಂದನ ಒದಗಿಸಿದ್ದಾರೆ. ಜೊತೆಗೆ ಇವರ ಸುಪುತ್ರ ಜೈಸನ್ ನಾಯಕನ ತಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಇದೇ ಡಿಸೆಂಬರ್ ೧೮ರಂದು ಚಿತ್ರವು ರಾಜ್ಯಾದ್ಯಂತ ತೆರೆಕಾಣುತ್ತಿದೆ.  

 

Copyright@2018 Chitralahari | All Rights Reserved. Photo Journalist K.S. Mokshendra,