ಸೆಟ್ಟೇರಿತು ಎಂಆರ್ ಚಿತ್ರ
‘ಎಂಆರ್’ ಅಂದರೆ ಮುತ್ತಪ್ಪರೈ ಬಯೋಪಿಕ್ ಕುರಿತಾದ ಚಿತ್ರದ ಫೋಟೋ ಶೂಟ್ ರಾಮನಗರದಲ್ಲಿ ಶ್ರೀಮಂತವಾಗಿ ನಡೆದಿತ್ತು. ಶುಕ್ರವಾರ ಬೆಸ್ಟ್ ಕ್ಲಬ್‌ದಲ್ಲಿ ಮಹೂರ್ತ ಆಚರಿಸಿಕೊಂಡಿದೆ. ನಿರ್ದೇಶಕ ರವಿಶ್ರೀವತ್ಸ ಮೂರು ವರ್ಷದ ನಂತರ ಕಮರ್ಷಿಯಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಂತರ ನಿರ್ದೇಶಕರು ಮಾದ್ಯಮದೊಂದಿಗೆ ಮಾತನಾಡಿ ಒಂದಷ್ಟು ಮಾಹಿತಿಗಳನ್ನು ತೆರೆದಿಟ್ಟರು. ಕಳೆದ ಇಪ್ಪತ್ತು ವರ್ಷಗಳಿಂದ ಹಲವರು ಸರ್ ಅವರ ಚಿತ್ರ ಮಾಡಬೇಕೆಂದು ಯೋಚಿಸಿದ್ದರು. ನಿರ್ಮಾಪಕರುಗಳಾದ ರಾಮು, ಧೀರಜ್ ಹಾಗೂ ದಿನೇಶ್‌ಬಾಬು ಸಾರಥ್ಯದಲ್ಲಿ ಉಪೇಂದ್ರ ನಟಿಸಲಿದ್ದಾರೆಂದು ಹೇಳಲಾಗಿತ್ತು. ಕಳೆದ ವರ್ಷ ಆರ್‌ಜಿವಿ ಅದ್ದೂರಿಯಾಗಿ ಕಾರ್ಯಕ್ರಮ ಏರ್ಪಡಿಸಿ ರೈ ಸಿನಿಮಾ ಮಾಡುವುದಾಗಿ ಸುದೀಪ್ ಅಥವಾ ವಿವೇಕ್‌ಓಬಿರಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆಂದು ಹೇಳಿಕೊಂಡಿದ್ದರು. ಆದರೆ ಎಲ್ಲವು ಮುಂದಕ್ಕೆ ಹೋಗದೆ ಸ್ಥಗಿತಗೊಂಡಿತ್ತು. ಕೊನೆಯದಾಗಿ ಚೆಂಡು ನನ್ನ ಬಳಿ ಬಂದಿದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದೇನೆ. ಒಮ್ಮೆ ರೈ ಸರ್ ಅವರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಲಾಗಿತ್ತು. ಮೂವತ್ತೇಳು ವರ್ಷದಿಂದ ಫೀಲ್ಡ್‌ದಲ್ಲಿ ಇರುವ ಡಾನ್‌ಗಳು ತೆರೆ ಮೇಲೆ ಬರಲಿದ್ದಾರೆ.
೧೯೫೨ರಿಂದ ೧೯೮೯ರ ವರೆಗಿನ ಘಟನೆಗಳನ್ನು ಭಾಗ-೧ರಲ್ಲಿ ತೋರಿಸಲಾಗುವುದು. ೧೯೮೯-೨೦೦೪ ಎರಡನೇ ಭಾಗ, ಉಳಿದವು ಭಾಗ-೩ರಲ್ಲಿ ಬರಲಿದೆ. ಕಾನೂನು ಮೂಲಕ ಹೇಗೆ ಹೋಗಬೇಕೆಂದು ತಿಳಿಸಲು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ಸಂಬರಗಿ ಸಲಹೆ ನೀಡುವುದರ ಜೊತೆಗೆ ಆಯಿಲ್‌ಕುಮಾರ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಬೆಕ್ಕಿನ ಕಣ್ಣು ರಾಜೇಂದ್ರನಾಗಿ ಅರವಿಂದ್‌ರಾವ್, ಜಯರಾಜ್ ಪಾತ್ರದಲ್ಲಿ ನಟನರಾಜೇಶ್, ಎಸಿಪಿ ಪ್ರವೀಣ್‌ರಾಗಿ ಚಕ್ರವರ್ತಿಚಂದ್ರಚೂಡ್ ಇರುತ್ತಾರೆ. ಮೊದಲ ಭಾಗದಲ್ಲಿ ನಿರ್ಮಾಪಕರ ಪುತ್ರ ದೀಕ್ಷಿತ್ ಯುವಮುತ್ತಪ್ಪರೈ ಆಗಿ ಕಾಣಿಸಿಕೊಂಡರೆ, ಕೇರಳದ ಚೆಲುವೆ ಸೌಮ್ಯಮೆನನ್ ನಾಯಕಿ. ಸಂಗೀತ ಗುರುಕಿರಣ್, ಛಾಯಾಗ್ರಹಣ ಮಾಥ್ಯೂರಾಜನ್.ಎಂ.ಆರ್. ಮೊದಲ ಹಂತವಾಗಿ ದುಬೈದಲ್ಲಿ ಇಪ್ಪತ್ತೋಂದು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಶೋಭರಾಜಣ್ಣ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.