ಪೈರಸಿ ಕಾಟ ಪುರುಸೋತ್‌ರಾಮನಿಗೂ ತಟ್ಟಿದೆ
ಕಳೆದ ಶುಕ್ರವಾರ ರಿಲೀಸ್ ಆಗಿದ್ದ ಹಾಸ್ಯ ಚಿತ್ರ ‘ಪುರ್‌ಸೋತ್ ರಾಮ’ನಿಗೆ ಪೈರಸಿ ಕಾಟದಿಂದ ಗಳಿಕೆ ಕಡಿಮೆ ಆಗಿದೆ ಎಂದು ನಾಯಕಿ,ನಿರ್ಮಾಪಕಿ ಮಾನಸಾ ಮಾದ್ಯಮದ ಎದುರು ಬೇಸರ ವ್ಯಕ್ತಪಡಿಸಿದರು. ಸೋಮವಾರ ತುರ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ನಮ್ಮ ಚಿತ್ರವನ್ನು ಕಷ್ಟಪಟ್ಟು ಕೋವಿಡ್ ಸಮಯದಲ್ಲೂ ಬಿಡುಗಡೆ ಮಾಡಿದ್ದೇವೆ. ಆದರೆ ಚಿತ್ರಮಂದಿರದಲ್ಲಿ ದುರುಳನೊಬ್ಬ ರೆಕಾರ್ಡ್ ಮಾಡಿಕೊಂಡು ಯೂಟ್ಯೂಬ್, ಟೆಲಿಗ್ರಾಮ್‌ಗಳಲ್ಲಿ ಹರಿಯಬಿಟ್ಟಿದ್ದಾನೆ. ಇದರಿಂದ ಸುಮಾರು ೮೦೦೦ ಮಂದಿ ಡೌನ್‌ಲೋಡ್ ಮಾಡಿದ್ದಾರೆ. ಈ ಸಂಬಂದ ಸೈಬರ್ ಪೋಲೀಸ್ ಠಾಣೆಗೂ ದೂರು ದಾಖಲಿಸಲಾಗಿದೆ. ಪೈರಸಿ ಕಾಪಿಯನ್ನು ಅಳಿಸಲು ಸೈಬರ್ ಅಪರಾಧ ಪತ್ತೆ ವಿಭಾಗದವರು ಕ್ರಮ ತೆಗೆದುಕೊಂಡಿದ್ದಾರೆ. ಇದನ್ನು ಸಂಪೂರ್ಣ ಅಳಿಸಿ ಹಾಕದಿದ್ದರೆ ಚಿತ್ರವು ಟಾಕೀಸ್‌ದಲ್ಲಿ ಇದ್ದರೂ ಪ್ರಯೋಜವಾಗಲ್ಲ.
ನಿರ್ಮಾಪಕರು ಇದರ ಸಮಸ್ಯೆಯಿಂದಾಗಿ ಠಾಣೆ, ಕೋರ್ಟ್‌ಗೆ ಅಲೆಯುವ ಪರಿಸ್ಥಿತಿ ಬಂದಿದೆ. ನಿರ್ಮಾಣ ಮಾಡುವುದೇ ಒಂದು ಸವಾಲು. ಅದರ ನಡುವೆ ಚಿತ್ರೋದ್ಯಮಿಗಳು ಇಂತಹ ಕಷ್ಟಗಳನ್ನು ಎದುರಿಸಬೇಕಿದೆ. ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ಕನಿಷ್ಟ ಹತ್ತು ವರ್ಷವಾದರೂ ಜೈಲು ಶಿಕ್ಷೆ ವಿಧಿಸುವಂತಹ ಕಠಿಣ ಕಾಯ್ದೆ ಬಂದರೆ, ಕಿಡಿಗೇಡಿಗಳು ಇದನ್ನು ಮಾಡಲು ಹೆದರುತ್ತಾರೆ. ಆಗ ನಮ್ಮಂತವರು ಉಸಿರಾಡಬಹುದು ಎಂದರು. ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್‌ಬಣಕಾರ್, ಬಾ.ಮ.ಹರೀಶ್, ಕರಿಸುಬ್ಬು, ವೆಂಕಟೇಶ್, ಬಾ.ಮ.ಗಿರೀಶ್, ರಾಜೇಶ್‌ಬ್ರಹ್ಮಾವರ್ ಮುಂತಾದವರು ಉಪಸ್ತಿತರಿದ್ದರು. ರವಿಶಂಕರ್‌ಗೌಡ, ಶಿವರಾಜ್.ಕೆ.ಆರ್.ಪೇಟೆ ಮತ್ತು ನವಪ್ರತಿಭೆ ರಿತಿಕ್‌ಶುರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.