ಶಕೀಲಾ ನೋಡ್ತಾರೆ ಎನ್ನುವ ನಂಬಿಕೆ ಇದೆ – ಇಂದ್ರಜಿತ್ ಲಂಕೇಶ್
೯೦ರ ದಶಕದ ಹಾಟ್ ತಾರೆ ಅನಿಸಿಕೊಂಡಿದ್ದ ಶಕೀಲಾ ಅವರ ಬಯೋಪಿಕ್ ಚಿತ್ರ ‘ಶಕೀಲಾ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ ನಾವು ಬೆಕ್ಕಿಗೆ ಗಂಟೆ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಗೆದ್ರೆ ಟ್ರೆಂಡ್ ಸೆಟ್ಟರ್ ಆಗ್ತೀವಿ. ದಕ್ಷಿಣ ಭಾರತದ ನಟಿಯ ಬದುಕಿನ ಘಟನೆಗಳನ್ನು ತೋರಿಸಲಾಗಿದೆ. ಹಾಗಂತ ಎಲ್ಲಿಯೂ ವೈಭವಿಕರಿಸದೆ, ನೈಜ ಘಟನೆಯ ಒಂದಷ್ಟು ಅಂಶಗಳನ್ನು ಹೆಕ್ಕಿ ತೋರಿಸುವ ಪ್ರಯತ್ನ ಮಾಡಲಾಗಿದೆ. ವಿಶ್ವದಾದ್ಯಂತ ೨೦೦೦ ಪರದೆಗಳಲ್ಲಿ ತೆರೆ ಕಾಣುತ್ತಿದೆ. ಇವರ ಸಿನಿಮಾಗೆ ಜನ ಬರದಿದ್ರೆ ಮತ್ಯಾವುದಕ್ಕೆ ಬರ‍್ತಾರೆಂದು ಹೀಗೊಂದು ಓಪನ್ ಛಾಲೆಂಜ್ ಹಾಕಿದರು.
ರಿಚಾಚಡ್ಡಾ ಇವರ ಹೆಸರಿನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೋಂದು ಮುಖ್ಯ ಪಾತ್ರದಲ್ಲಿ ಪಂಕಜ್‌ತ್ರಿಪಾಠಿ ಇವರೊಂದಿಗೆ ಸುಚೇಂದ್ರಪ್ರಸಾದ್, ಎಸ್ತರ್‌ನರೋನಾ, ಮುಂತಾದವರು ನಟಿಸಿದ್ದಾರೆ. ಹಿಂದಿ ಹೊರತುಪಡಿಸಿ ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಿಗೆ ಡಬ್ ಮಾಡಲಾಗಿದೆ. ಸಂಗೀತ ವೀರ್‌ಸಮರ್ಥ್-ಮೀಟ್‌ಬ್ರದರ‍್ಸ್, ಛಾಯಾಗ್ರಹಣ ಸಂತೋಷ್‌ರೈಪಾತಾಜೆ, ಸಂಕಲನ ಬಲ್ಲುಸಲುಜ ಅವರದು. ಸಾಮಿನಾನ್‌ವಣಿ ಮತ್ತು ಶರವಣಪ್ರಸಾದ್ ನಿರ್ಮಾಣ ಮಾಡಿರುವ ಚಿತ್ರವು ಕ್ರಿಸ್‌ಮಸ್ ಹಬ್ಬದಂದು ಚಿತ್ರಮಂದಿರಗಳಲ್ಲಿ ರಾರಾಜಿಸಲಿದೆ.