Gajanooru.Film Muhurtha Press Meet.

Saturday, January 16, 2021

433

 

*ಇದು ತೀರ್ಥಹಳ್ಳಿ ಬಳಿಯ ಗಾಜನೂರಿನ ಕಥೆ.. ಅಣ್ಣಾವ್ರ ಗಾಜನೂರಿಗೂ ಇದಕ್ಕೂ ಸಂಬಂಧವಿಲ್ಲ..*

*-ನಟ ಧ್ರುವ ಸರ್ಜಾ, ನಿರ್ದೇಶಕ ನಂದಕಿಶೋರ್ ಸಮ್ಮುಖದಲ್ಲಿ ಚಿತ್ರಕ್ಕೆ ಮುಹೂರ್ತ*

*-ಅವತಾರ್- ಸೋನಲ್ ಕಾಂಬಿನೇಷನ್ ಚಿತ್ರಕ್ಕೆ ಫೆಬ್ರವರಿಯಿಂದ ಶೂಟಿಂಗ್*

ನಮ್ಮ ಗಾಜನೂರು ಶೀರ್ಷಿಕೆಯ ಚಿತ್ರಕ್ಕೂ ಅಣ್ಣಾವ್ರ ಹುಟ್ಟೂರು ಗಾಜನೂರಿಗೆ ಯಾವುದೇ ಸಂಬಂಧವಿಲ್ಲ- ಹೀಗೆ ಸ್ಪಷ್ಟನೆ ನೀಡಿಯೇ ಚಿತ್ರದ ಬಗ್ಗೆ ಮಾತು ಮುಂದುವರಿಸಿದರು ನಿರ್ದೇಶಕ ವಿಜಯ್. ಕೃತಿಕಾ ರಾಮ್ ಮೂವೀಸ್ ಲಾಂಛನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಅವಿನಾಶ್ ಕಲಬುರಗಿ ಬಂಡವಾಳ ಹೂಡುತ್ತಿದ್ದಾರೆ. ಕರೊನಾ ಹಾವಳಿ ಕಡಿಮೆ ಆದ ಬಳಿಕ ಸಿನಿಮಾ ಸರಳವಾಗಿಯೇ ಸಿನಿಮಾಗಳು ಮುಹೂರ್ತ ಮಾಡಿಕೊಳ್ಳುತ್ತಿವೆ. ಇದೀಗ ಅದಕ್ಕೆ ಅಪವಾದವೆಂಬಂತೆ ಅದ್ದೂರಿಯಾಗಿಯೇ ದೊಡ್ಡ ಮಟ್ಟದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ಮಾಡಿಕೊಂಡಿದೆ ಗಾಜನೂರು ಚಿತ್ರತಂಡ.

ಈ ಅದ್ದೂರಿ ಮುಹೂರ್ತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದ ಕಿಶೋರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚೇಂಬರ್ ಅಧ್ಯಕ್ಷ ಜೈರಾಜ್, ಕರಿಸುಬ್ಬು ಸೇರಿ ಹಲವರು ಮುಹೂರ್ತದಲ್ಲಿ ಪಾಲ್ಗೊಂಡಿದ್ದರು.

ಮೊದಲಿಗೆ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವಿಜಯ್, ಈ ಸಿನಿಮಾಕ್ಕೂ ಅಣ್ಣಾವ್ರಿಗೂ ಯಾವುದೇ ಸಂಬಂಧವಿಲ್ಲ. ಚಿತ್ರಕ್ಕೆ ಹೊಂದಿಕೆ ಆಗುತ್ತದೆ ಎಂಬ ಕಾರಣಕ್ಕೆ ಇಟ್ಟಿದ್ದೇವೆ. ಈ ಊರಿಗೂ ಈ ಊರಿಗೂ ಸಂಬಂಧವಿಲ್ಲ.. ಇದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಗಾಜನೂರಿನಲ್ಲಿ ನಡೆದ ನೈ ಘಟನೆ ಆಧರಿತ ಕಥೆ. ಪೊಲೀಸ್ ಠಾಣೆಯೊಂದರಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿರುತ್ತದೆ. ಅದರ ಹಿನ್ನೆಲೆಯಲ್ಲಿ ತನಿಖೆಯ ಹಾದಿಯಲ್ಲಿ ಸಿನಿಮಾ ಸಾಗಲಿದೆ. ಗಾನೂರು, ಚಿಕ್ಕಮಗಳೂರು, ಬೆಂಗಳೂರಿನಲ್ಲಿ 40 ದಿನ ಚಿತ್ರೀಕರಣ ಮಾಡಲಿದ್ದೇವೆ. ಫೆಬ್ರವರಿ ಮೊದಲ ವಾರದಲ್ಲಿ ಶೂಟಿಂಗ್ ಶುರುವಾಗಲಿದೆ. ವಿದೇಶದಲ್ಲಿಯೂ ಹಾಡಿನ ಚಿತ್ರೀಕರಣ ಮಾಡುವ ಪ್ಲಾನ್ ಇದೆ ಎಂದರು ನಿರ್ದೇಶಕರು.

ಅದೇ ರೀತಿ ಚಿತ್ರದ ನಾಯಕ ಅವತಾರ್ ಈಗಾಗಲೇ ಕನ್ನಡ, ತೆಲುಗು, ತಮಿಳು, ತುಳು ಸೇರಿ ಒಟ್ಟು ಏಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಗಾಜನೂರು ಚಿತ್ರದಲ್ಲಿಯೂ ನಾಯಕನಾಗಿದ್ದಾರೆ. ಈ ವರೆಗೂ ಏಳೆಂಟು ಸಿನಿಮಾ ಮಾಡಿದ್ದೇನೆ. ಆದರೆ, ಯಾವುದೂ ಅಷ್ಟಾಗಿ ಹೆಸರು ತಂದುಕೊಡಲಿಲ್ಲ. ಎರಡು ವರ್ಷ ಸುಮ್ಮನೆ ಇದ್ದೆ. ಒಳ್ಳೇ ಕಥೆಗಾಗಿ ಕಾಯುತ್ತಿದ್ದೆ. ಇದೀಗ ಆ ಸಮಯ ಗಾಜನೂರು ಮೂಲಕ ಬಂದಿದೆ. ಅದ್ದೂರಿಯಾಗಿಯೇ ಮುಹೂರ್ತ ನೆರೆವೇರಿದೆ. ನಾನಿಲ್ಲಿ ಒಬ್ಬ ನಾರ್ಮಲ್ ಹುಡುಗನಾಗಿ ಕಾಣಿಸಿಕೊಳ್ಳಲಿದ್ದೇನೆ. ನಾನು ಹೋಗುವ ಊರೊಂದರಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ. ಆ ಘಟನೆಯ ಹಿನ್ನೆಲೆಯಲ್ಲಿ ನನ್ನ ಪಾತ್ರ ತೆರೆದುಕೊಳ್ಳಲಿದೆ. ಪಾತ್ರಕ್ಕಾಗಿ ಡಾನ್ಸ್ ಮತ್ತು ಆ್ಯಕ್ಱನ್ ಸಹ ಕಲಿಯುತ್ತಿದ್ದೇನೆ ಎಂದರು ಅವತಾರ್.

ಇನ್ನು ಚಿತ್ರದ ನಾಯಕಿಯಾಗಿ ಸೋನಲ್ ಮೊಂತೆರೋ ಆಯ್ಕೆಯಾಗಿದ್ದಾರೆ. ಕಳೆದ ಒಂದು ವಾರದಿಂದ ಈಚೆಗೆ ನಾಯಕಿಯ ಆಯ್ಕೆ ಅಂತಿಮವಾಗಿದೆ. ‘ಈಗಷ್ಟೇ ಈ ತಂಡಕ್ಕೆ ಸೇರ್ಪಡೆಯಾಗಿದ್ದೇನೆ. ಒಳ್ಳೇ ಪಾತ್ರವೇ ಸಿಕ್ಕಿದೆ. ಶೀಘ್ರದಲ್ಲಿ ಶೂಟಿಂಗ್ ನಲ್ಲಿಯೂ ಪಾಲ್ಗೊಳ್ಳಲಿದ್ದೇನೆ’ ಎಂದರು ಸೋನಲ್.

ಚಿತ್ರದ ಮುಖ್ಯ ಪಾತ್ರದಲ್ಲಿ ನಟ ತಬಲಾ ನಾಣಿ ಸಹ ನಟಿಸುತ್ತಿದ್ದಾರೆ. ಹೊಸ ಟೀಮ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುವ ಅವರು, ಯುವ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಒಳ್ಳೆಯದಾಗಲಿ ಎಂದರು. ಇನ್ನುಳಿದಂತೆ ರವಿಶಂಕರ್, ಕುರಿ ಪ್ರತಾಪ್, ತರಂಗ್ ವಿಶ್ವ ಕಾಮಿಡಿ ಆರ್ಟಿಸ್ಟ್ ಸಂಗಮ ಈ ಸಿನಿಮಾದಲ್ಲಿ ಆಗಲಿರುವುದು ವಿಶೇಷ.

ಚಿತ್ರದ ನಿರ್ಮಾಪಕ ಅವಿನಾಶ್ ತಮ್ಮ ಮೊದಲ ಸಿನಿಮಾ ನಿರ್ಮಾಣದ ಅನುಭವ ಹಂಚಿಕೊಂಡರು. ನಾನು ಮೂಲತಃ ಕಲಬುರಗಿಯವನು. ಕೇಟರಿಂಗ್ ನಮ್ಮ ಉದ್ಯಮ. ಸಿನಿಮಾ ಮಾಡಬೇಕೆಂಬ ಕ್ರೇಝ್ ಮೊದಲಿಂದಲೂ  ಇತ್ತು. ಅದನ್ನೀಗ ನೆರವೇರಿಸಿಕೊಂಡಿದ್ದೇನೆ. ಒಟ್ಟು ಎರಡೂವರೆ ಕೋಟಿ ಬಜೆಟ್ನಲ್ಲಿ ಸಿನಿಮಾ ಸಿದ್ಧವಾಗಲಿದೆ. ವಿದೇಶದಲ್ಲಿಯೂ ಶೂಟ್ ಮಾಡುವ ಯೋಜನೆ ಇದೆ ಎಂದರು. ಇನ್ನು ಚಿತ್ರಕ್ಕೆ ಕಥೆ ಚಿತ್ರ ಕತೆ ಬರೆದಿರುವ ಕೀರ್ತಿ ಮಾತನಾಡಿ, ಈ ಕಥೆ ಒಂದು ವರ್ಷದ ಹಿಂದೆಯೇ ಕಥೆ ಹೇಳಿದ್ದೆ.  ಅದೇ ಸಿನಿಮಾ ಮಾಡೋಣ ಎಂದು ಹೇಳಿದ್ದರು. ಇದೀಗ ಗಾಜನೂರು ಸಿನಿಮಾ ಸೆಟ್ಟೇರಿದೆ, ಈ ಚಿತ್ರದ ಶೀರ್ಷಿಕೆಗೂ ಅಣ್ಣಾವ್ರಿಗೆ ಯಾವುದೇ ಸಂಬಂಧವಿಲ್ಲ ಎಂದರು.

ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಲಿದ್ದು, ತನ್ವಿಕ್ ಛಾಯಾಗ್ರಹಣ, ಅಮಿತ್ ಜಾವಲ್ಕರ್ ಸಂಕಲನ, ಕಥೆ, ಚಿತ್ರಕಥೆ ಕೀರ್ತಿ, ಭೂಷಣ್ ನೃತ್ಯ ನಿರ್ದೇಶನ, ಕ್ರಾಂತಿ ಕುಮಾರ್ ಸಂಭಾಷಣೆ ಬರೆದಿದ್ದಾರೆ.

 

 

Copyright@2018 Chitralahari | All Rights Reserved. Photo Journalist K.S. Mokshendra,