Avastantara.Film Launch Press Meet.

Friday, January 15, 2021

295

 ಸಂಚಾರಿ ವಿಜಯ್ ಅವಸ್ಥೆಗಳು

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿವಿಜಯ್ ‘ಅವಸ್ಥಾಂತರ’ ಚಿತ್ರಕ್ಕೆ ಸಹಿ ಹಾಕುವುದರ ಮೂಲಕ ಹೊಸಬರಿಗೆ ಪ್ರೋತ್ಸಾಹಕೊಡುತ್ತಿದ್ದಾರೆ. ‘ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆಒದೆಯಬೇಡಿ’ ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ಎನ್.ಆರ್.ಕಾಲೋನಿಯಲ್ಲಿರುವರಾಯರ ಮಠದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು.ಮಠಗುರುಪ್ರಸಾದ್‌ಗರಡಿಯಲ್ಲಿ ಪಳಗಿರುವ ತುಮಕೂರಿನಜಿ.ದೀಪಕ್‌ಕುಮಾರ್‌ಪ್ರತಿಷ್ಟಿತಹಣಕಾಸು ಸಂಸ್ಥೆಯಲ್ಲಿರಿಲೇಶನ್‌ಷಿಪ್ ಮ್ಯಾನೇಜರ್, ಅಲ್ಲದೆ ಸಾಕ್ಷ್ಯಚಿತ್ರ, ಜಾಹಿರಾತುಗಳಿಗೆ ಆಕ್ಷನ್‌ಕಟ್ ಹಾಗೂ ಕಾರ್ಪೋರೇಟ್ ಫಿಲಿಂ ಮೇಕರ್‌ಆಗಿದ್ದರು. 

ಇವೆಲ್ಲದರಅನುಭವದಿಂದಸಿನಿಮಾಕ್ಕೆಕತೆ,ಚಿತ್ರಕತೆ,ಸಂಭಾಷಣೆ ಬರೆದು ಹಿರಿತೆರೆಗೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮೂವೀ ವಾಕ್ಸ್ ನಿರ್ಮಾಣದಜವಬ್ದಾರಿಯನ್ನು ಹೊತ್ತುಕೊಂಡಿದೆ.

ಸಿನಿಮಾಕುರಿತು ಹೇಳುವುದಾದರೆ ಹದಿಹರೆಯದಯುವಕನೊಬ್ಬತನಗೆಅರಿವಿಲ್ಲದೆ ಬಯಕೆಗಳು, ಕಾಮನೆಗಳು ಹುಟ್ಟಿಕೊಂಡು, ಹೇಗೆ ಆತನನ್ನುಅತಂತ್ರ ಸ್ಥಿತಿಗೆ ತೆಗೆದುಕೊಂಡು ಹೋಗುತ್ತದೆ. ಹಾಗೆಯೇಅದರಿಂದಏನೆಲ್ಲಾ ಕಷ್ಟಗಳು, ಅವಸ್ಥೆ, ಅನಾಹುತಗಳು ನಡೆಯುತ್ತವೆಎಂಬುದನ್ನು ತಿಳಿ ಹಾಸ್ಯದ  ಮೂಲಕ ತೋರಿಸಲಾಗುತ್ತಿದೆ. ಜೊತೆಗೆಅರ್ಥಪೂರ್ಣ ಸಂದೇಶವನ್ನುಕಟ್ಟಿಕೊಡುವ ಪ್ರಯತ್ನ ಮಾಡಲಿದ್ದಾರೆ. ಪುಟ್ಟಗೌರಿ, ಕನ್ನಡತಿಧಾರವಾಹಿಗಳ ಖ್ಯಾತಿಯರಂಜನಿರಾಘವನ್‌ಗೆ ನಾಲ್ಕನೇ ಅವಕಾಶ. ಸಂಪ್ರದಾಯಸ್ಥ ಪ್ರೀತಿ ಹೆಸರಿನಲ್ಲಿಲವ್‌ಗೆ ಬಿದ್ದಾಗ ಆಗುವ ಅವಸ್ಥೆಗಳು, ಅವಾಂತgಗಳ ಬದುಕಿನಲ್ಲಿ ಬಂದಾಗ ಹೇಗೆ ನಿಭಾಯಿಸುತ್ತಾಳೆ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ.‘ಆಡುವಗೊಂಬೆ’ದಲ್ಲಿ ನಟಿಸಿದ್ದ ದಿಶಾಕೃಷ್ಣಯ್ಯಭೂತಕಾಲ, ವರ್ತಮಾನಕಾಲದಲ್ಲಿ ಬಂದು ಹೋಗುತ್ತಾರೆ.ತಾರಗಣದಲ್ಲಿ ಪ್ರದೀಪ್, ರೋಹಿಣಿ, ಲಕ್ಷಿಭಾಗವತಾರ್ ಮುಂತಾದವರು ನಟಿಸುತ್ತಿದ್ದಾರೆ.

ಬೆಂಗಳೂರು ಸುತ್ತಮುತ್ತಚಿತ್ರೀಕರಣ ನಡೆಸಲುತಂಡವುಯೋಜನೆ ಹಾಕಿಕೊಂಡಿದೆ.ಎರಡು ಹಾಡುಗಳಿಗೆ ಬಿಜೆ.ಭರತ್ ಸಂಗೀತ ಸಂಯೋಜಿಸತ್ತಿದ್ದಾರೆ.ಛಾಯಾಗ್ರಹಣ ನಂದಕಿಶೋರ್, ಸಂಕಲನ ಶೇಷು ಅವರದಾಗಿದೆ. ನಿರ್ದೇಶಕರು ವಿಭಿನ್ನ ಫೋಟೋ ಶೂಟ್ ನಡೆಸಿರುವುದರಿಂದ ಕಲಾವಿದರ ಫೋಟೋಗಳು ಪೋಸ್ಟರ್‌ದಲ್ಲಿಚೆಂದಕಾಣುತ್ತಿತ್ತು.

 

Copyright@2018 Chitralahari | All Rights Reserved. Photo Journalist K.S. Mokshendra,