ಬಿಡುಗಡೆ ಮುಂಚೆ ಸದ್ದು ಮಾಡುತ್ತಾ ಸುದ್ದಿಯಾಗುತ್ತಿದೆ
‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಇದನ್ನು ಬ್ಯಾಂಕ್‌ದಲ್ಲಿ ವ್ಯವಸ್ಥಾಪಕರು ಹೇಳುವುದುಂಟು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಶೇಕಡ ೯೦ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡವು ಮಾದ್ಯಮದವರನ್ನು ಭೇಟಿ ಮಾಡಿದ್ದರು.
ಮೊದಲು ಮೈಕ್ ತೆಗದುಕೊಂಡ ನಿರ್ದೇಶಕ ವಿನಾಯಕ ಕೋಡ್ಸರ ಮಾತನಾಡಿ ಎರಡೂವರೆ ವರ್ಷದ ಪಯಣ ಇಲ್ಲಿಯತನಕ ತಂದು ನಿಲ್ಲಿಸಿದೆ. ಪ್ರಜ್ವಲ್‌ಪೈ ಮೂರು ಚೆಂದದ ಹಾಡುಗಳನ್ನು ನೀಡಿದ್ದಾರೆ. ಮಲೆನಾಡಿನ ಜನಜೀವನವನ್ನು ಬಿಂಬಿಸಲಾಗಿದೆ. ದಿಗಂತ್‌ರವರು ಶಂಕರನಾಗಿ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಉಳಿದಂತೆ ಉಮಾಶ್ರೀ, ವಿದ್ಯಾಮೂರ್ತಿ, ರವಿಕಿರಣ್, ಯಶ್‌ವಂತ್‌ಸರ್‌ದೇಶಪಾಂಡೆ, ಕಾಸರಗೂಡುಚಿನ್ನ ಹಾಗೂ ನೀನಾಸಂ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಟೈಟಲ್ ಏತಕ್ಕೆ ಇಡಲಾಗಿದೆ ಎಂದು ಚಿತ್ರ ನೋಡಿದರೆ ತಿಳಿಯುತ್ತದೆ. ಸಾಗರ, ಸಿಗಂದೂರು ಮತ್ತು ಬೆಂಗಳೂರು ಕಡೆಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಶೇಕಡ ಐವತ್ತರಷ್ಟು ಡಬ್ಬಿಂಗ್ ಮುಗಿದಿದೆ ಎಂದರು.
ಒನ್ ಲೈನ್ ಹೇಳಿದ್ದು ಕುತೂಹಲ ಮೂಡಿಸಿತು. ಅದರಿಂದಲೇ ಧೀರ್ಘ ಕಾಲದ ನಂತರ ಬಂಡವಾಳ ಹೂಡಿರುವುದು ನೆಮ್ಮದಿ ಸಿಕ್ಕಿದೆ. ಸದ್ಯದಲ್ಲೆ ಮತ್ತೋಂದು ಚಿತ್ರವನ್ನು ಮಾಡುವುದಾಗಿ ನಿರ್ಮಾಪಕ ಸಿಲ್ಕ್‌ಮಂಜು ಮಾಹಿತಿ ನೀಡಿದರು.
ಟಿಪಿಕಲ್ ಮಲೆನಾಡು ಹುಡುಗನಾಗಿ ಹಳೇ ಮೋಟರ್‌ಬೈಕ್, ಮಾರುತಿ ೮೦೦ ಚಲಾಯಿಸುವೆ. ಏಳು ವರ್ಷದ ನಂತರ ಐಂದ್ರಿತಾರೈ ಅವರೊಂದಿಗೆ ನಟಿಸಿದ್ದು ಸಂತಸ ತಂದುಕೊಟ್ಟಿತು. ಛಾಯಾಗ್ರಹಕರು ನಿಟ್ಟೂರನ್ನು ಚೆನ್ನಾಗಿ ತೋರಿಸಿದ್ದಾರೆ. ಥ್ಯಾಂಕ್ಸ್ ಅಂತ ನಾಯಕ ದಿಗಂತ್ ಮಾತಿಗೆ ವಿರಾಮ ಹಾಕಿದರು. ನಾಯಕಿಯರಾದ ಐಂದ್ರಿತರೈ ಮತ್ತು ರಂಜನಿರಾಘವನ್ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಸಂಗೀತ ನಿರ್ದೇಶಕ ಮತ್ತು ಸಹ ನಿರ್ಮಾಪಕರಾಗಿರುವ ಪ್ರಜ್ವಲ್‌ಪೈ, ಕಾರ್ಯಕಾರಿ ನಿರ್ಮಾಪ ರವೀಂದ್ರಜೋಷಿ, ಛಾಯಾಗ್ರಹಕ ನಂದಕಿಶೋರ್, ಸಂಭಾಷಣೆಗಾರ ವೇಣುಹಸ್ರಾಳಿ, ಸಂಕಲನಕಾರ ರಾಹುಲ್ ಮತ್ತು ತಂಡಕ್ಕೆ ಶುಭ ಹಾರೈಸಲು ಆಗಮಿಸಿದ್ದ ನಿರ್ಮಾಪಕ ದೇವೇಂದ್ರರೆಡ್ಡಿ ಸುದ್ದಿಗೋಷ್ಟಿಯಲ್ಲಿ ಉಪಸ್ತಿತರಿದ್ದರು. ಉಪ್ಪಿ ಎಂಟರ್‌ಟೈನರ್ ಮೂಲಕ ಸಿದ್ದಗೊಳ್ಳುತ್ತಿರುವ ಚಿತ್ರವು ಮೇ ತಿಂಗಳಲ್ಲಿ ತೆರೆಗೆ ಬರುವ ಸಾದ್ಯತೆ ಇದೆ.