ಅವಳಿ ಸಹೋದರರಕೀಟಲೆ ಆಟ
‘ಬೈ ಒನ್‌ಗೆಟ್‌ಒನ್ ಫ್ರೀ’ ಎಂದು ಅಂಗಡಿಗಳ ಮುಂದೆ ಫಲಕಇರುತ್ತದೆ.ಒಂದುಕೊಂಡರೆ ಮತ್ತೋಂದುಉಚಿತವೆಂದುಅರ್ಥಕೊಡುತ್ತದೆ.ಇದೇ ಹೆಸರಿನಲ್ಲಿ ಸಿನಿಮಾವೊಂದು ಸದ್ದಿಲ್ಲದೆ ಮುಗಿಸಿದ್ದು, ಸುದ್ದಿ ಮಾಡುವ ಸಲುವಾಗಿ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಉಷಾ ಭಂಡಾರಿ ನಟನಾ ಶಾಲೆಯಲ್ಲಿಅಭಿನಯತರಭೇತಿ ಪಡೆದುಕೊಂಡಿರುವ ಅವಳಿ ಸಹೋದರರಾದಮಧುಮಿಥುನ್ ಹಾಗೂ ಮನುಮಿಲನ್ ನಾಯಕರಾಗಿ ನಟಿಸಿರುವುದು ಪ್ರಥಮಅನುಭವ. ಮತ್ತೋಂದು ಮುಖ್ಯ ಪಾತ್ರದಲ್ಲಿಕಿಶೋರ್‌ಇದ್ದಾರೆ. ರೋಷಿನಿತೇಲ್ಕರ್ ಮತ್ತುರಿಷಿತಾಮಲ್ನಾಡ್ ನಾಯಕಿಯರು.ಅಮ್ಮನಾಗಿಉಷಾಭಂಡಾರಿ ನಟಿಸಿದ್ದಾರೆ.ತಾಯಿ ಸೆಂಟಿಮೆಂಟ್‌ಇರುವಕಾರಣ ಗುರುಗಳಿಂದಲೇ ಟೀಸರ್‌ಅನಾವರಣ ಮಾಡಿಸಿಕೊಂಡಿದ್ದು ವಿಶೇಷವಾಗಿತ್ತು.ಎಸ್‌ಬಿಎಸ್‌ಸಿ ಕ್ರಿಯೇಶನ್ಸ್‌ಅಡಿಯಲ್ಲಿ ಮಧುರಾಜ್.ಸಿ.ನಿರ್ಮಾಣ ಮಾಡಿದ್ದಾರೆ.
ಕತೆಯಲ್ಲಿಇಬ್ಬರ ನಡವಳಿಕೆಗಳು ಒಂದೇಆದರೂಒಬ್ಬ ನಿಧಾನ, ಮತ್ತೋಬ್ಬ ವೇಗದವನು.ಸೆಸ್ಪನ್ಸ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ.ಮೈಸೂರಿನಿಂದ ಶುರುವಾಗುವ ಸಿನಿಮಾವು ಕರಾವಳಿ ಮಡಿಲಲ್ಲಿ ಕೊನೆಗೊಳ್ಳುತ್ತದೆ.ಇವರಿಬ್ಬರ ಆಟಗಳು ವಿರಾಮದ ನಂತರತಿರುವು ಪಡೆದುಕೊಳ್ಳುತ್ತದೆ.ಅದುಏನೆಂಬುದನ್ನುಚಿತ್ರಮಂದಿರದಲ್ಲಿ ನೋಡಬೇಕಂತೆ. ದಿನೇಶ್‌ಕುಮಾರ್ ಸಂಗೀತ, ಅನಿಲ್.ಸಿ.ಜೆ ಹಿನ್ನಲೆ ಶಬ್ದ, ಅಭಿಷೇಕ್‌ಮೃತ್ಯುಂಜಯಪಾಂಡೆ-ವಿಶ್ವಜಿತ್‌ರಾವ್‌ಛಾಯಗ್ರಹಣ, ಸಂಕಲನ ಸುರೇಶ್‌ಆರ್ಮುಗಂ, ಸಂಭಾಷಣೆ ತ್ರಿಭುವನ್‌ಶ್ರೀಕಾಂತ್-ಮಿಲನ್, ಸಾಹಸ ಥ್ರಿಲ್ಲರ್‌ಮಂಜು-ವೈಲೆಂಟ್‌ವೇಲು-ರಮೇಶ್‌ಅವರದಾಗಿದೆ. ಕಾರ್ಯಕ್ರಮದಲ್ಲಿಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಕೃಷ್ಣೇಗೌಡ, ನಿರ್ದೇಶಕರುಗಳಾದ ಮಹೇಶ್‌ಕುಮಾರ್, ಸತ್ಯಪ್ರಕಾಶ್ ಮುಂತಾದವರು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.