ದಿಗಂತ್ ಹರಿಪ್ರಿಯಾ ಜೋಡಿಯಲ್ಲಿ ಹೊಸ ಚಿತ್ರ
ಯಾವುದೇ ಭಾಷೆಯ ಚಿತ್ರದ ಕತೆ ಚೆನ್ನಾಗಿದ್ದರೆ ಅದು ಇತರೆ ಭಾಷೆಗಳಿಗೆ ರಿಮೇಕ್ ಆಗುವುದು ಹಿಂದಿನಿಂದಲೂ ನಡೆದುಕೊಂಡು ಬರುವ ಸಂಪ್ರದಾಯವಾಗಿದೆ. ಅದರಂತೆ ಕಳೆದ ವರ್ಷ ಬಿಡುಗಡೆಗೊಂಡು ಯಶಸ್ವಿಯಾದ ‘ಎವುರು’ ಚಿತ್ರವು ಈಗ ಕನ್ನಡದಲ್ಲಿ ಬರುತ್ತಿದೆ. ಅದರಲ್ಲಿ ನಿರ್ವಹಿಸಿದ್ದ ರೆಜಿನಾ ಪಾತ್ರವನ್ನು ಹರಿಪ್ರಿಯಾ, ಅದ್ವಿಶೇಷ್ ಪಾತ್ರದಲ್ಲಿ ದಿಗಂತ್ ಮತ್ತು ವಸಿಷ್ಟಸಿಂಹ ಕೂಡ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಪ್ಯಾನಿಷ್ ಕಾದಂಬರಿಯು ‘ ದಿ ಇನ್ವಿಸಿಬಲ್ ಗೆಸ್ಟ್’ ಹೆಸರಿನೊಂದಿಗೆ ಇಂಗ್ಲೀಷ್ದಲ್ಲಿ ತೆರೆಕಂಡಿತ್ತು. ನಂತರ ಹಿಂದಿಯಲ್ಲಿ ನಿರ್ಮಾಣವಾಗಿತ್ತು. ಮರ್ಡರ್ ಮಿಸ್ಟ್ರಿ ಜೊತೆಗೆ ಸೆಸ್ಪನ್ಸ್ ಕ್ರೈಮ್ ಥ್ರಿಲ್ಲರ್ ಕಥಾಹಂದರ ಇರುವ ಚಿತ್ರಕ್ಕೆ ಟಾಲಿವುಡ್ನ ಅಶೋಕ್ತೇಜ ನಿರ್ದೇಶನ ಮಾಡುತ್ತಿದ್ದಾರೆ. ಹೈದರಾಬಾದ್, ಬೆಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ.
ತನ್ನ ತಂದೆಯನ್ನು ಕೊಂದವರನ್ನು ರೋಗಿಷ್ಟ ಮಗ ಹೇಗೆ ಕಂಡು ಹಿಡಿಯುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಇಡೀ ಚಿತ್ರವು ಕೊಲೆಗಾರರನ್ನು ಪತ್ತೆ ಹಚ್ಚುವುದೇ ಕುತೂಹಲವಾಗಿದೆ. ತಾರಗಣದಲ್ಲಿ ಅವಿನಾಶ್, ಸ್ವಾತಿ, ಮಂಜುಪಾವಗಡ, ಗೌತಂ ಮುಂತಾದವರು ನಟಿಸುತ್ತಿದ್ದಾರೆ. ಎರಡು ಹಾಡುಗಳಿಗೆ ಶ್ರೀಚರಣ್ ಸಂಗೀತ, ಯೋಗಿ ಛಾಯಾಗ್ರಹಣ, ಸುಬ್ರಮಣ್ಯ-ಸುಕೃತ್ ಸಂಭಾಷಣೆ ಇದೆ. ಪಂಚಮುಖಿ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭದಲ್ಲಿ ಮೊದಲ ದೃಶ್ಯಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲಾಪ್ ಮಾಡಿದರೆ, ಸುದ್ದಿಗೋಷ್ಟಿಯಲ್ಲಿ ಯೋಗರಾಜಭಟ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಆಂದ್ರದ ಉದ್ಯಮಿಗಳಾದ ರಾಜೇಶ್ಅಗರ್ವಾಲ್ ಮತ್ತು ಡಿ.ಜಯಪ್ರಕಾಶ್ರಾವ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಚಿತ್ರಕ್ಕೆ ಸೂಕ್ತ ಶೀರ್ಷಿಕೆಯನ್ನು ಇಡಲಾಗುವುದೆಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.