ಕಲಾವಿದರ ಇಂಡಿಯನ್ ಬೌಲಿಂಗ್ ಲೀಗ್ ಪಂದ್ಯ
ಕರೋನದಿಂದ ಸಂಕಷ್ಟಕ್ಕೆ ಒಳಗಾಗಿರುವ ಚಿತ್ರರಂಗದ ಕಲಾವಿzರುಗಳಿಗೆ ನೆರವು ನೀಡುವ ಉದ್ದೇಶದಿಂದ ನಟ,ನಿರ್ಮಾಪಕ ಕಮರ್ ಅವರು ‘ಕಮರ್ ಫಿಲಿಂ ಫ್ಯಾಕ್ಟರಿ’ ಮುಖಾಂತರ ನವೆಂಬರ್ ಕೊನೆವಾರದಲ್ಲಿ ‘ಇಂಡಿಯನ್ ಬೌಲಿಂಗ್ ಲೀಗ್’ ಪಂದ್ಯವನ್ನು ಆಯೋಜಿಸುತ್ತಿದ್ದಾರೆ. ಲೀಗ್‌ನ ೧೦ ತಂಡಗಳಲ್ಲಿ ನಾಲ್ವರು ಪುರುಷರು, ನಾಲ್ವರು ಮಹಿಳಾ ಆಟಗಾರರು ಸೇರಿ ಒಟ್ಟು ೮ ಮಂದಿ ಇರಲಿದ್ದಾರೆ. ನುರಿತ ಅಂಪೈರುಗಳು ಅಂಕ ಆಧಾರದಲ್ಲಿ ತಂಡಗಳ ಫಲಿತಾಂಶ ನಿರ್ಧರಿಸುವರು. ಇದರಲ್ಲಿ ಮಾಧ್ಯಮ ತಂಡದವರಿಗೆ ಒಂದು ಬಾರಿ ಆಡಲು ಅವಕಾಶವಿರುತ್ತದೆ. ಅಂತಿಮ ಹಂತದಲ್ಲಿ ಗೆಲ್ಲುವ ತಂಡಕ್ಕೆ ನಗದು ಬಹುಮಾ,ಟ್ರೋಫಿ ನೀಡಿ ಗೌರವಿಸಲಾಗುವುದು. ದ್ವಿತೀಯ ಮತ್ತು ತೃತೀಯ ತಂಡಗಳಿಗೂ ಬಹುಮಾನ ಇರುವುದಾಗಿ ಕೆಎಫ್‌ಎಫ್‌ನ ವ್ಯವಸ್ಥಾಪಕ ನಿರ್ದೇಶಕ ಕಮರ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಕೆಲ ಮಾನದಂಡಗಳ ಆಧಾರದ ಮೇಲೆ ಕಲಾವಿದರಗಳನ್ನು ಆಯ್ಕೆ ಮಾಡಲಾಗಿದೆ, ಕೆಲ ತಂಡಗಳನ್ನು ಮಾಲೀಕರು ಈಗಾಗಲೇ ಖರೀದಿಸಿದ್ದಾರೆ. ಶೀಘ್ರದಲ್ಲೆ ತಂಡದ ಲಾಂಛನ ಬಿಡುಗಡೆ ಮಾಡಲಾಗುವುದು. ಸಂಸ್ಥೆಯ ಅಧ್ಯಕ್ಷ ಕೆ.ಬಿ.ಬಾಬು, ಪ್ರಿಯಾಂಕಉಪೇಂದ್ರ, ದೀಪಿಕದಾಸ್, ನಿರಂಜನ್,ಬಿಗ್‌ಬಾಸ್ ಸೀಸನ್-೬ ವಿಜೇತ ಶಶಿಕುಮಾರ್, ಡಿಎಸ್‌ಮ್ಯಾಕ್ಸ್ ನಿರ್ದೇಶಕ ದಯಾನಂದ್ ಮುಂತಾದವರು ಉಪಸ್ತಿತರಿದ್ದು, ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.