ಚಿತ್ರರೂಪದಲ್ಲಿ ಭಗತ್ಸಿಂಗ್ ಜೀವನ ಚರಿತ್ರೆ
ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲಬಾರಿ ಎನ್ನುವಂತೆ ಭಗತ್‌ಸಿಂಗ್ ಜೀವನ ಚರಿತ್ರೆಯನ್ನು ‘ಕ್ರಾಂತಿಕಾರಿ’ ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡುಲಾಗುತ್ತಿದೆ. ಆದತ್.ಎಂ.ಪಿ. ನಿರ್ದೇಶಕರಾಗಿ ಎರಡನೇ ಅನುಭವ. ಅಜಿತ್‌ಜಯರಾಜ್ ಅವರು ಭಗತ್‌ಸಿಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್‌ಕ್ವಿಲಾಬ್ ಜಿಂದಾಬಾದ್ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ೧೯೦೭ರಲ್ಲಿ ಜರನವಾಲಾ ತಾಲ್ಲೊಕಿನ ಬಂಗಾ ಎಂಬ ಹಳ್ಳಿಯಲ್ಲಿ ಜನಸಿ, ಕಿರುವಯಸ್ಸಿನಲ್ಲಿಯೇ ರೈತಪರ ಹೋರಾಟಗಾರರಾಗಿದ್ದರು. ಈತನ ಕ್ರಾಂತಿಕಾರಿ ಬೆಳವಣಿಗೆಗಳನ್ನು ಸಹಿಸದ ಬ್ರಿಟಿಷ್ ಸರ್ಕಾರವು ೧೯೩೧ರಲ್ಲಿ ಗಲ್ಲಿಗೇರಿಸಿದಾಗ ವಯಸ್ಸು ಕೇವಲ ೨೪ ಆಗಿತ್ತು. ಮೊನ್ನೆ ಇವರ ಹುಟ್ಟಹಬ್ಬದ ಪ್ರಯುಕ್ತ ಚಿತ್ರದ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಗಿದೆ.
ಪೋಷಕರಾಗಿ ಜೋಸೈಮನ್-ಭವಾನಿಪ್ರಕಾಶ್, ಚಂದ್ರಶೇಖರಅಜಾದ್ ಆಗಿ ಪ್ರಮೋದ್‌ಶೆಟ್ಟಿ, ಲಾಲಾಲಜಪತ್‌ರಾಯ್ ಪಾತ್ರದಲ್ಲಿ ಸಾಹಿತಿ.ಡಾ.ನಾಗೇಂದ್ರಪ್ರಸಾದ್, ಹೊಸ ಪ್ರತಿಭೆ ಲಕ್ಷಣ ಮುಂತಾದವರು ನಟಿಸಿದ್ದಾರೆ. ಕೆಜಿಎಫ್, ಹುಬ್ಬಳ್ಳಿ, ಬಾಗಲಕೋಟೆ, ಶಿವಮೊಗ್ಗ ಜೈಲ್, ಕಂಠೀರವ ಸ್ಟುಡಿಯೋ ಕಡೆಗಳಲ್ಲಿ ಚಿತ್ರೀಕರಣ ನಡೆಸಿ, ಎರಡು ದಿವಸದ ಕೆಲಸ ಬಾಕಿ ಉಳಿಸಿಕೊಂಡಿದೆ. ಸಂಗೀತ ಪ್ರತಾಪ್.ಎಸ್, ಸಂಕಲನ ಕೆ.ಎಂ.ಪ್ರಕಾಶ್, ನೃತ್ಯ ಆರ್‌ಕೆ ನಿರ್ವಹಿಸಿದ್ದಾರೆ. ಚಂದ್ರಕಲಾ.ಟಿ.ರಾಠೋಡ್,ಮಂಜುನಾಥ್.ಹೆಚ್.ನಾಯಕ್ ಮತ್ತು ಆರ್ಜೂರಾಜ್ ನಿರ್ಮಾಪಕರು. ತ್ರಿವಿಕ್ರಮಸಾಪಲ್ಯ, ಪ್ರಶಾಂತ್‌ಕಲ್ಲೂರು, ಲೇಟ್ ಗೌರಿರಮನಾಥ್ ಸಹ ನಿರ್ಮಾಪಕರುಗಳಾಗಿ ಕೈ ಜೋಡಿಸಿದ್ದಾರೆ.