ಸಾಮಾಜಿಕ ಕಳಕಳಿಯ ರಸಂ
ಹೊಸಬರ ‘ರಸಂ’ ಚಿತ್ರದಲ್ಲಿಒಂದುಕಡೆಕೈಯಲ್ಲಿ ಸಿಗರೇಟು,ಎಣ್ಣೆ ಗ್ಲಾಸು ಮತ್ತೋಂದುಕಡೆ ಸೀರೆ,ತಾಳಿ ಮತ್ತುಕಾಲುಂಗುರಇರುವ ಪೋಸ್ಟರ್‌ನ್ನು ಶಿವರಾಜ್‌ಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಗೌರವ್‌ರಾಜೇಶ್ ನೋಡಿರುವ, ಕೇಳಿರುವ ಅಂಶಗಳನ್ನು ಹೆಕ್ಕಿಕೊಂಡು ಸಿನಿಮಾಕ್ಕೆಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿ ಇರುವ ಘಟನೆಗಳು ಪ್ರತಿಯೊಬ್ಬರ ಮನೆಯಲ್ಲಿ ನಡೆಯುತ್ತಿರುತ್ತದೆ.ವಯಸ್ಸುಮೀರಿದಯುವಕನೊಬ್ಬ ಹಿರಿಯರು ನಿಶ್ವಿಯಿಸಿದ ಹುಡುಗಿಯನ್ನು ಮದುವೆ ಮಾಡಿಕೊಳ್ಳುತ್ತಾನೆ.
ಆದರೆಆಕೆಯು ಪ್ರಿಯಕರನಜೊತೆ ಸೇರಿಕೊಂಡು ಮೋಸ ಮಾಡಿದಾಗಆತನ ಪರಿಸ್ಥಿತಿ ಹೇಗಿರುತ್ತೆಎಂಬುದನ್ನು ಹಾಸ್ಯಕುತೂಹಲದ ಮೂಲಕ ಹೇಳಲಾಗುತ್ತಿದೆ.ಇದರಲ್ಲಿಒಂದಷ್ಟುಥ್ರಿಲ್ಲರ್ ಸನ್ನಿವೇಶಗಳು ಬರುತ್ತದಂತೆ.ಬೆಂಗಳೂರು, ಮಂಗಳೂರು ಹಾಗೂ ಮಂಡ್ಯಾ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಅಂಬರೀಷ್‌ಸಾರಂಗಿ, ಎಂ.ವಿಘ್ನೇಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ನಾಯಕಿಗಾಗಿ ಶೋಧ ನಡೆಯುತ್ತಿದೆ.ಉಳಿದಂತೆ ತುಳು ನಟ ಅರವಿಂದ್‌ಬೋಳಾರ್ ಮುಂತಾದವರು ನಟಿಸುತ್ತಿದ್ದಾರೆ. ಜೆ.ಎಂ.ಪ್ರಹ್ಲಾದ್-ಅಭಿ-ಚಿರಾಗ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಆರ್.ಡಿ.ವರ್ಮ-ಸಂದೇಶ್‌ಬಾಬುಜಂಟಿಯಾಗಿ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ವಿನಯ್‌ಹೊಸಗೌಡರ್‌ಅವರದಾಗಿದೆ. ಸತೀಶ್‌ರಾಜ್-ಭರತ್ ಮಾತುಗಳಿಗೆ ಪದಗಳನ್ನು ಪೋಣಿಸುತ್ತಿದ್ದಾರೆ.ಅನುಗ್ರಹ ಫಿಲಿಂಸ್ ಮೂಲಕ ಮಂಗಳೂರು ಉದ್ಯಮಿ ನಿರ್ಮಾಣ ಮಾಡುತ್ತಿರುವ ಸಿನಿಮಾವುಡಿಸೆಂಬರ್‌ದಿಂದ ಚಾಲನೆ ಸಿಗಲಿದೆ.