ಜನರು ಒಪ್ಪಿಕೊಂಡ ೫ ಅಡಿ ೭ ಅಂಗುಲ ಚಿತ್ರ
ಕಲಾವಿದರು, ತಂತ್ರಜ್ಘರು ಹೊಸಬರು, ಹಳಬರು ಎಂದು ನೋಡದೆ ಕತೆ ಚೆನ್ನಾಗಿದ್ದರೆ ಸಾಕು ಜನರು ಚಿತ್ರಮಂದಿರಕ್ಕೆ ಬರುವುದು ಖಾತರಿ ಎಂಬುದಕ್ಕೆ ಸಾಕ್ಷಿ ‘೫ ಅಡಿ ೭ ಅಂಗುಲ’ ಚಿತ್ರ. ಲಾಕ್‌ಡೌನ್ ಕಾರಣದಿಂದ ಸ್ಥಗಿತಗೊಂಡಿದ್ದ ಸಿನಿಮಾವು ಎರಡನೇ ಬಾರಿ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದರನ್ವಯ ನಿರ್ಮಾಪಕರು ಸಣ್ಣದಾದ ಸಂತೋಷಕೂಟವನ್ನು ಏರ್ಪಡಿಸಿದ್ದರು. ಇಂದು ಖುಷಿಯಾದ ದಿನ ನನಗಾಗಿದೆ. ಏಳು ತಿಂಗಳು ನಂತರ ತೆರೆಕಂಡು ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಾ ಇದೆ. ಮೊzಲು ೩೮ ಕೇಂದ್ರಗಳಲ್ಲಿ ಬಿಡುಗಡೆಯಾಗಿ, ಮೂರು ಪ್ರದರ್ಶನ ನಂತರ ನಿಂತುಹೋಗಿತ್ತು. ಖಿನ್ನತೆಗೆ ಒಳಗಾಗಿದ್ದನ್ನು ಕಂಡ ಅಪ್ಪ ನಂದಳಿಕೆ ಚಂದ್ರಶೇಖರಪ್ರಭು ಧೈರ್ಯ ತುಂಬಿದರು.
ರಂಗಿತರಂಗ, ಯೂಟರ್ನ್‌ದಂತೆ ಹಲವು ತಿರುವುಗಳು ಇರುವುದು ಪ್ಲಸ್ ಪಾಯಿಂಟ್ ಆಗಿದೆ. ವಾಣಿಜ್ಯ ಮಂಡಳಿ ಶಿಪಾರಸ್ಸಿನಿಂದ ತ್ರಿವೇಣಿ ಚಿತ್ರಮಂದಿರ ಸಿಕ್ಕಿತು. ಚಿತ್ರನೋಡಿ ಹೊರಬಂದ ಪ್ರೇಕ್ಷPನೊಬ್ಬ ತಂಬಾ ಚೆನ್ನಾಗಿದೆ ಅಂತ ಹೆಚ್ಚಿನ ನೂರು ರೂಪಾಯಿ ಕೊಡಲು ಮುಂದಾದಾಗ ನಯವಾಗಿ ಬೇಡವೆಂದು ಹೇಳಲಾಯಿತು. ಇದೆಲ್ಲಾರಿಂದ ನೆಮ್ಮದಿ ತಂದಿದೆ ಎಂದು ನಿರ್ದೇಶಕ ಮತ್ತು ನಿರ್ಮಾಪಕ ನಂದಳಿಕೆ ನಿತ್ಯಾನಂದ ಪ್ರಭು ಸಂತಸ ಹಂಚಿಕೊಂಡರು.
ಮಾದ್ಯಮ ಸಹಕಾರದಿಂದ ಪಾಸಿಟೀವ್ ಆಗಿ ಸುದ್ದಿ ಹರಿದಾಡುತ್ತಿದೆ. ನೋಡುಗರಿಗೆ ಎಲ್ಲೂ ಬೇಜಾರು ತಂದಿಲ್ಲ. ಇದಕ್ಕೆ ನಿರ್ದೇಶಕ, ನಿರ್ಮಾಪಕರ ಶ್ರದ್ದೆ ಕಾರಣವಾಗಿದೆ ಅಂತಾರೆ ನಾಯಕಿ ಅದಿತಿ. ಚಿತ್ರ ನೋಡಲು ಬರುವವರು ಜಾಗ್ರತೆಯಾಗಿ ಬನ್ನಿರೆಂದು ನಾಯಕ ಭುವನ್ ಅಹ್ವಾನವಿತ್ತರು. ಮಾದ್ಯಮ, ಚಿತ್ರರಂಗ ಸಹಕಾರದಿಂದ ಎರಡನೇ ವಾರಕ್ಕೆ ಹೋಗುತ್ತಿದೆ ಎಂಬುದು ಮತ್ತೋಬ್ಬ ನಾಯಕ ರಿಶಿಕ್‌ಕುಮಾರ್ ನುಡಿ. ವಾಣಿಜ್ಯ ಮಂಡಳಿಯೊಂದಿಗೆ ಚಿತ್ರ ನೋಡಿದೆವು. ತುಂಬಾ ಚೆನ್ನಾಗಿದೆ. ತಂಡದ ಕೆಲಸ ಎಲ್ಲೂ ಕೆಳಗಿಳಿದಿಲ್ಲ ಅಂತ ಬಾ.ಮಾ.ಹರೀಶ್ ಶ್ಲಾಘಿಸಿದರು. ಸಂಗೀತ ನಿರ್ದೇಶಕ ಆರ್.ಎಸ್.ನಾರಾಯಣ್ ಚಿತ್ರಕತೆಯೇ ಜೀವಾಳ ಎಂದರು.