ಕನ್ನಡ ದಿನದಂದು ಯುವ ರಣಧೀರ ಕಂಠೀರವ ಆಗಮನ
೬೦ರ ದಶಕದಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ‘ರಣಧೀರ ಕಂಠೀರವ’ ಚಿತ್ರವೊಂದು ತೆರೆಕಂಡು ಯಶಸ್ವ್ವಿಯಾಗಿತ್ತು. ಕಟ್ ಮಾಡಿದರೆ ಈಗ ಅಣ್ಣಾವ್ರರ ಮೊಮ್ಮಗ ಯುವ ರಾಜಕುಮಾರ್ ‘ಯುವ ರಣಧೀರ ಕಂಠೀರವ’ ಸಿನಿಮಾದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ರಾಜ್ಯೋತ್ಸವ ದಿನದಂದು ಪ್ರಸನ್ನ ಚಿತ್ರದಲ್ಲಿ ಶೀರ್ಷಿಕೆ ಮತ್ತು ಟೀಸರ್ ಬಿಡುಗಡೆ ಸಮಾರಂಭದಲ್ಲಿ ಪುನೀತ್‌ರಾಜ್‌ಕುಮಾರ್, ರಾಘವೇಂದ್ರರಾಜ್‌ಕುಮರ್ ಶ್ರೀಮುರಳಿ, ವಿಜಯರಾಘವೇಂದ್ರ ಸೇರಿದಂತೆ ಡಾ.ರಾಜ್ ಕುಟುಂಬದವರು ಹಾಗೂ ಸಿನಿಪಂಡಿತರು ಹಾಜರಿದ್ದು ಸಿನಿಮಾಕ್ಕೆ ಶುಭ ಹಾರೈಸಿದರು. ತುಣುಕುಗಳಲ್ಲಿ ಭರ್ಜರಿ ಡೈಲಾಗ್, ಸಾಹಗಳು ಕಂಡು ಬಂದಿರುವುದರಿಂದ ಇದೊಂದು ಐತಿಹಾಸಿಕ ಕಥಾಹಂದರ ಇರಬಹುದೆಂದು ಭಾವಿಸಲಾಗಿದೆ.
ಕೆಜಿಎಫ್‌ದಲ್ಲಿ ಕೆಲಸ ಮಾಡಿರುವ ಪುನೀತ್‌ರುದ್ರನಾಗ್ ಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕರ್ನಾಟಕದ ಊರೊಂದರಲ್ಲಿ ನಡೆದ ನೈಜ ಘಟನೆಯನ್ನು ಚಿತ್ರರೂಪಕ್ಕೆ ಬಳಸಲಾಗುತ್ತಿದೆ. ಅದು ಏನೆಂದು ತಂಡವು ಗೌಪ್ಯವಾಗಿಟ್ಟಿದೆ. ಯುವರಾಜ್‌ಕುಮಾರ್ ಬಣ್ಣ ಹಚ್ಚುವ ಮುಂಚೆ ನಾಲ್ಕು ವರ್ಷಗಳ ಕಾಲ ಡ್ಯಾನ್ಸ್, ಫೈಟ್, ನಟನಾ ತರಭೇತಿ ಪಡೆದುಕೊಂಡು ಕ್ಯಾಮಾರ ಮುಂದೆ ನಿಲ್ಲುತ್ತಿದ್ದಾರೆ. ನಾಯಕಿ ಇತರೆ ತಾರಗಣ ಎಲ್ಲವು ಸದ್ಯದಲ್ಲೆ ಫೈನಲ್ ಆಗಲಿದೆ. ಹಾಡುಗಳಿಗೆ ಸಂಗೀತ ರವಿಬಸ್ರೂರು, ಸಂಕೇಶ್ ಛಾಯಾಗ್ರಹಣ, ಸಾಹಸ ಚೇತನ್‌ಡಿಸೋಜ ಅವರದಾಗಿದೆ. ಪ್ರಿ ಪ್ರೊಡಕ್ಷನ್‌ದಲ್ಲಿ ಬ್ಯುಸಿ ಇದ್ದು, ಮಾರ್ಚ್ ತಿಂಗಳಿಂದ ಚಿತ್ರೀಕರಣ ಶುರುವಾಗುವ ಸಾದ್ಯತೆ ಇದೆ.