ಆಕ್ಟ್ ೧೯೭೮ ಟ್ರೈಲರ್ ಬಿಡುಗಡೆ ಮಾಡಿದ ಪುನೀತ್ರಾಜ್ಕುಮಾರ್
ಒಳ್ಳೆಯ ಚಿತ್ರಗಳಿಗೆ ಸದಾ ಪ್ರೋತ್ಸಾಹ ಕೊಡುವ ಪುನೀತ್‌ರಾಜ್‌ಕುಮಾರ್ ‘ಆಕ್ಟ್ ೧೯೭೮’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಆಗಮಿಸಿದ್ದು, ಕಾರ್ಯಕ್ರಮಕ್ಕೆ ಕಳೆ ಬಂದಿತ್ತು. ಅವರು ಮಾತನಾಡುತ್ತಾ ತುಣುಕುಗಳನ್ನು ನೋಡಿದಾಗ ಒಂದಷ್ಟು ಪ್ರಶ್ನೆ ಕಾಡುತ್ತದೆ. ಸ್ವಲ್ಪ ರಾ ಕಂಟೆಂಟ್ ಆದರೂ ಚಿತ್ರಕತೆಯಲ್ಲಿ ಹೊಸತನವಿದೆ. ಮೈಸೂರಿನಲ್ಲಿ ‘ಯುವರತ್ನ’ ಶೂಟಿಂಗ್ ನಡೆಯುತ್ತಿದ್ದಾಗ ಪಕ್ಕದಲ್ಲೆ ಇವರದು ಚಿತ್ರೀಕರಣವಾಗುತ್ತಿತ್ತು. ಸೆಟ್‌ಗೆ ಭೇಟಿ ನೀಡಿದಾಗ ನಿರ್ದೇಶಕರು ಒನ್ ಲೈನ್ ಹೇಳಿದರು. ಒಳ್ಳೆ ಕಲಾವಿದರು ಇದ್ದಾರೆ. ಟೆಕ್ನಿಕಲಿ ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ನನ್ನ ಕೈಲಿ ಸಾದ್ಯವಾದಷ್ಟು ಪ್ರಮೋಟ್ ಮಾಡುತ್ತನೆಂದು ತಂಡಕ್ಕೆ ಶುಭ ಹಾರೈಸಿದರು.
ಇದಕ್ಕೂ ಮುನ್ನ ಮೈಕ್ ತೆಗೆದುಕೊಂಡ ನಿರ್ದೇಶಕ ಮಂಸೋರೆ ನಾಯಕಿ ಯಜ್ಘಾಶೆಟ್ಟಿ ಈ ನಡುವೆ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ನಾನು ಹೇಳಿದ ಕತೆಗೆ ಮನಸೋತು ನಟಿಸಿದ್ದಾರೆ. ಒಬ್ಬ ಗರ್ಭಿಣಿ ಹೆಣ್ಣು ಮಗಳು, ಒಂದು ಗನ್, ವಾಕಿಟಾಕಿ ಮತ್ತು ಬಾಂಬ್ ಈ ನಾಲ್ಕು ಪ್ರಮುಖ ಅಂಶಗಳಿಂದ ಕತೆ ಸಾಗುತ್ತದೆ. ಮೂರು ಟ್ರ್ಯಾಕ್‌ಗಳಲ್ಲಿ ಸನ್ನಿವೇಶಗಳು ಬರುತ್ತದೆ. ೫೨ ಪಾತ್ರಧಾರಿಗಳು ಇದ್ದರೂ, ಪಕ್ಕಾ ಯೋಜನೆ ಹಾಕಿಕೊಂಡು ಕಡಿಮೆ ಅವಧಿಯಲ್ಲಿ ಚಿತ್ರೀಕರಣ ಮುಗಿಸಿದ್ದೇವೆ. ಬಿಲ್ಡಿಂಗ್ ಒಳಗಡೆ ೧೫ ದಿನ, ಉಳಿದವನ್ನು ಹೊರಾಂಗಣದಲ್ಲಿ ಶೂಟ್ ಮಾಡಲಾಗಿದೆ. ಹಿಂದಿನ ಎರಡು ಸಿನಿಮಾಗಳಿಂತ ಇದು ಸಮಾಜದ ಲೂಪ್‌ಹೋಲ್‌ಗಳನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ ಅಂತ ಮಾಹಿತಿ ಬಿಚ್ಚಿಟ್ಟರು.
ನನ್ನ ೨೫ ವರ್ಷದ ಅನುಭವದಲ್ಲಿ ಇಂಥ ದೊಡ್ಡ ಗ್ಯಾಪ್ ಕಂಡಿರಲಿಲ್ಲ. ಥಿಯೇಟರ್ ಸ್ಟಾರ್ಟ್ ಆದರೂ ಹೊಸ ಚಿತ್ರಗಳು ಬರೋವರೆಗೂ ಜನರನ್ನು ಟಾಕೀಸ್‌ಗೆ ಕರೆತರಲು ಸಾಧ್ಯವಿಲ್ಲ. ನನ್ನದು ಚಿಕ್ಕ ಪಾತ್ರವಾದರೂ ಸಹಜವಾಗಿ ಅಭಿನಯಿಸಲು ಅವಕಾಶ ಸಿಕ್ಕಿತ್ತು ಅಂತಾರೆ ಶೃತಿ.
ತಾರಗಣದಲ್ಲಿ ಪ್ರಮೋದ್‌ಶೆಟ್ಟಿ, ಸಂಚಾರಿವಿಜಯ್, ಬಿ.ಸುರೇಶ್, ಅಚ್ಯುತಕುಮಾರ್, ಕೃಷ್ಣಾಹೆಬ್ಬಾಳೆ, ದತ್ತಣ್ಣ, ಶರಣ್ಯ, ಶೋಭರಾಜ್, ಅವಿನಾಶ್,ರಾಘುಶಿವಮೊಗ್ಗ ಮುಂತಾದವರು ನಟಿಸಿದಾರೆ. ರೋನಾಡಬಕ್ಕೇಶ್-ರಾಹುಲ್‌ಶಿವಕುಮಾರ್ ಸಂಗೀತ, ಸತ್ಯಹೆಗಡೆ ಛಾಯಾಗ್ರಹಣ, ಟಿ.ಕೆ.ದಯಾನಂದ್ ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ಉದ್ಗರ್ಷ ನಿರ್ಮಾಣ ಮಾಡಿದ್ದ ಆರ್.ದೇವರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.