Kanntheredu Nodu.Film News

Tuesday, November 10, 2020

339

 

"ಕಣ್ತೆರೆದು ನೋಡು" ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೆ ಸಿದ್ಧ...

 

ಕಲಾ ಸೇವೆ ಮಾಡಲು ಹಲವಾರು ಮಂದಿ ಆಸಕ್ತರು ಬರುವುದು ಸರ್ವೇಸಾಮಾನ್ಯ. ಆ ನಿಟ್ಟಿನಲ್ಲಿ ಇಲ್ಲೊಂದು ತಂಡ ಬಹಳಷ್ಟು ಕನಸುಗಳನ್ನು ಹೊತ್ತುಕೊಂಡು ಸಿನಿಮಾ ಮಾಡಲು ಮುಂದಾಗಿದೆ. ಕುಶಿಲ ಸಿನಿ ಪ್ರೊಡಕ್ಷನ್ಸ್ ರವರ ಪ್ರಥಮ ಕಾಣಿಕೆಯಾಗಿಶ್ರೀ ಸಿದ್ದು ಸಾಹುಕಾರ ಕಬಾಡಗಿ ಮದಭಾವಿ, ವಿಜಯಪುರ

ಇವರು ವಿಜಯಪುರ ಜಿಲ್ಲೆ ಮದಭಾವಿ ಗ್ರಾಮದವರು, ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಹಾಗೂ ಕಲಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಗತಿಪರ ರೈತರು, ದ್ರಾಕ್ಷಿ ಬೆಳೆಗಾರರು ಹಾಗೂ ರಾಜಕೀಯ ದುರೀಣರು ಹಾಗೂ

ಶ್ರೀ ಹರೀಶ್ ಹೆಬ್ಬಗೋಡಿ ಆನೇಕಲ್ ತಲೂಕು

ಇವರು ಆನೇಕಲ್ ತಾಲೂಕು ಹೆಬ್ಬಗೋಡಿಯವರು, ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಹಾಗೂ ಕಲಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಉದ್ಯಮಿಗಳು, ಕನ್ನಡ ಪರ ಹೋರಾಟಗಾರರು ಹಾಗೂ ರಾಜಕೀಯ ದುರೀಣರು. ಇವರು ಅರ್ಪಿಸುವ ಈ "ಕಣ್ತೆರೆದು ನೋಡು" ಚಿತಕ್ಕೆ

ಡಾ. ಸಿ.ಬಿ.ಶಶಿಧರ್

ಕಾರ್ಯಕಾರಿ ನಿರ್ಮಾಪಕರು

ಬೊಮ್ಮಸಂದ್ರ ಆನೇಕಲ್ ತಾಲೂಕು. ಇವರು ಆನೇಕಲ್ ತಾಲೂಕು ಬೊಮ್ಮಸಂದ್ರ ದವರು, ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಕಲಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.           ಶ್ರೀ ಶಿವಕುಮಾರ್ ಜೇವರಗಿ.

ನಟರು, ನಿರ್ಮಾಪಕರು.

ಇವರು ವಿಜಯಪುರ ಜಿಲ್ಲೆ ಮದಭಾವಿ ಗ್ರಾಮದವರು, ಇವರು ಸ್ವತಃ ಸಿನೆಮಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಿಸಿಕೊಂಡವರು.     ಕಣ್ತೆರೆದು ನೋಡು ಎಂಬ ಸದಭಿರುಚಿಯ ಚಿತ್ರವನ್ನು ನಿರ್ಮಿಸಲು ಮುಂದಾದವರು         

ಪುಷ್ಪಲತಾ ಕುಡ್ಲೂರು. ಇವರು ಮೂಲತಹ ಚಿಕ್ಕ ಮಂಗಳೂರಿನವರು ಇವರು ಬೆಂಗಳೂರಿನಲ್ಲಿ ಕೈಗಾರಿಕಾ ಕಾರ್ಖಾನೆ ನಡೆಸುತ್ತಿದ್ದು.ಇವರಿಗೆ  ಚಿತ್ರ ನಿರ್ಮಾಣ ಮಾಡುವ ಕನಸಿತ್ತು. ನಿರ್ದೇಶಕ  ಕಪಿಲ್ ರವರು ಒಂದು ಉತ್ತಮವಾದ ಅಂದರ ಕಥೆ ಹೇಳಿದಾಗ ಆ ಕಥೆ ಪುಷ್ಪಲತಾರವರಿಗೆ ಮೆಚ್ಚುಗೆಯಾಗಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ.ಈ ಚಿತ್ರಕ್ಕೆ "ಕಣ್ತೆರೆದು ನೋಡು" ಎಂದು ನಾಮಕರಣ ಮಾಡಿದ್ದಾರೆ. ಮೊಟ್ಟಮೊದಲ ಬಾರಿಗೆ ನಾಯಕ ನಟರಾಗಿ  ಶಿವಪ್ಪ ಕುಡ್ಲೂರು ನಾಯಕ ನಟರಾಗಿ ಅಭಿನಯಿಸದ್ದಾರೆ. ಕಥೆ, ನೃತ್ಯ, ನಿರ್ದೇಶನ ಎಂ.ಆರ್.ಕಪಿಲ್ ರವರಾಗಿರುತ್ತದೆ. ಈ ಚಿತ್ರದಲ್ಲಿ6 ಎಂಟು ಹಾಡುಗಳಿದ್ದು ಅಂದರ ಗಾಯಕರೇ ಹಾಡಲಿದ್ದಾರೆ. ಸಂಗೀತ ದಿನೇಶ್‌ಈಶ್ವರ್ ಮಾಡಲಿದ್ದಾರೆ.  ಶಿವಪ್ಪ ಕುಡ್ಲೂರು ಇವರು ಮೂಲತಹ ಚಿಕ್ಕಮಗಳೂರಿನವರು ಬಾಲ್ಯದಿಂದಲೇ ಇವರಿಗೆ ನಟನೆಯಲ್ಲಿ ಹೆಚ್ಚು ಆಸಕ್ತಿಯಿದ್ದು ಶಾಲ,ಕಾಲೇಜು ದಿನಗಳಲ್ಲಿ ನಾಟಕ,ಬೀದಿ ನಾಟಕ ಗಳಲ್ಲಿ ಭಾಗವಹಿಸುತ್ತಿದ್ದರು. ಇಪ್ಪತ್ತು ವರ್ಷಗಳ ಹಿಂದೆಯೇ ಇವರು ಇಪ್ಪತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರಿಗೇ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ರವರು ಅವಕಾಶ ನೀಡಿದ್ದರು ಕಾರಾಣಾ ತರಗಳಿಂದ ಇಪ್ಪತ್ತು ವರ್ಷದಗಳಿಂದ ಚಿತ್ರರಂಗದಿಂದ ದೂರ ಉಳಿದು ಕೈಗಾರಿಕಾ ಉದ್ಯಮಿಯಾಗಿರುತ್ತಾರೆ. ಕಲೆಯಲ್ಲಿ ನೆಲೆ ಕಾಣಲು ಇಪ್ಪತ್ತು ವರ್ಷದ ಬಳಕ ಕಣ್ತೆರೆದು ನೋಡು ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಲಿದ್ದಾರೆ. ಈ ಚಿತ್ರದ ಬಹುಮುಖ್ಯ ವಿಶೇಷ ಏನೆಂದರೆ , ಇದೇ 14ನೇ ತಾರೀಖು ನಿರ್ದೇಶಕ ಎಂ.ಆರ್.  ಕಪಿಲ್ ರವರ ಜನ್ಮ ದಿನ ಆಗಿದ್ದು  , ಅಂದೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಹೊರತರಲು ತಂಡ ಸಿದ್ಧವಾಗಿದೆ.

Copyright@2018 Chitralahari | All Rights Reserved. Photo Journalist K.S. Mokshendra,