ಮಾಲಾಶ್ರೀರನ್ನು ನೆನಪಿಸಿಕೊಂಡ ಉಪೇಂದ್ರ
ತುಣುಕುಗಳನ್ನು ನೋಡುತ್ತಿದ್ದರೆ ಮಾಲಾಶ್ರೀ ಸಿನಿಮಾಗಳು ನೆನಪಿಗೆ ಬರುತ್ತದೆಂದುರಿಯಲ್ಸ್ಟಾರ್ಉಪೇಂದ್ರ ಹೇಳಿದರು. ‘ಉಗ್ರಾವತಾರ’ ಚಿತ್ರದ ಮೋಷನ್ ಪೋಸ್ಟರ್ನ್ನು ಅನಾವರಣಗೊಳಿಸಿ, ಪ್ರಿಯಾಂಕಉಪೇಂದ್ರಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದರ ಕುರಿತಂತೆ ಮಾತನಾಡಿ, ತಂಡಕ್ಕೆ ಶುಭ ಹಾರೈಸಿ, ನಂತರತುಂಡುಕೇಕ್ನ್ನು ಪತ್ನಿಗೆತಿನ್ನಿಸಿದರು.
ಕಳೆದ ಹುಟ್ಟುಹಬ್ಬದಂದುಇದೇಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು.ಈ ವರ್ಷ ಮೋಷನ್ ಪಿಕ್ಚರ್ ಸಿದ್ದಗೊಂಡಿದ್ದು ಸಂತಸತಂದಿದೆ.ನಿರ್ದೇಶಕರುಕತೆ ಹೇಳಿದಾಗ ಇದನ್ನು ಮಾಡಬಹುದಾಎಂಬುದಾಗಿ ಪ್ರಶ್ನೆಕಾಡಿತ್ತು.ಆದರೆ ನಿರ್ಮಾಪಕರು, ನಿರ್ದೇಶಕರು ಮತ್ತುಛಾಯಾಗ್ರಾಹಕರು ಸಾಥ್ ನೀಡಿದ್ದರಿಂದಎಲ್ಲವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಯಿತು. ಪ್ರಸಕ್ತ ಸಾಮಾಜಿಕ ವಿಷಯಗಳು, ಮಹಿಳೆಯರ ಮೇಲಿನ ಶೋಷಣೆ, ಅಪರಾಧಇದರಜೊತೆಗೆಒಂದಷ್ಟುಗಂಭೀರ ವಿಷಯಗಳನ್ನು ಕಮರ್ಷಿಯಲ್ ಅಂಶಗಳೊಂದಿಗೆ ತೋರಿಸುವ ಪ್ರಯತ್ನ ಮಾಡಲಾಗಿದೆ.ಸಾಹಸ ದೃಶ್ಯಗಳು ನೈಜವಾಗಿ ಬರಲೆಂದುಡ್ಯೂಪ್ ಬಳಸದೆ ಇರುವುದರಿಂದಒಂದಷ್ಟುತರಭೇತಿ ಪಡೆಯುತ್ತಿದ್ದೇನೆ.ಐಪಿಎಸ್ಅಧಿಕಾರಿರೂಪ ನನಗೆ ಪ್ರೇರಣೆಯಾಗಿದ್ದಾರೆ. ಅಮ್ಮ, ತಮ್ಮ ಆಕಸ್ಮಿಕವಾಗಿ ಬಂದಿರುವುದುಆಶ್ಚರ್ಯವಾಗಿದೆಎಂದು ಪ್ರಿಯಾಂಕಉಪೇಂದ್ರ ಖುಷಿ ಹಂಚಿಕೊಂಡರು.
ಮೇಡಂರವರು ಸೆಟ್ದಲ್ಲಿತುಂಬಾ ಆಸಕ್ತಿ ತೋರಿಸುತ್ತಾರೆ.ನಾವು ಇಷ್ಟು ಬೇಕು ಅಂದರೆ, ಅದಕ್ಕಿಂತಲೂ ಹೆಚ್ಚಿಗೆಕೊಡುತ್ತಾರೆ.ಅವರ ಪ್ರೋತ್ಸಾಹದಿಂದಲೇ ಶೇಕಡ ೩೦ ರಷ್ಟುಚಿತ್ರೀಕರಣ ಮುಗಿದಿದೆ.ಮೂರು ಫೈಟ್ ಬಾಕಿ ಇದೆ.ರಸ್ತೆಯಲ್ಲಿ ಹೆಣ್ಣುಮಕ್ಕಳು ಹೋಗುತ್ತಿದ್ದಾರೆಅವರನ್ನುಗೌರವದಿಂದಕಾಣಬೇಕು.ಏನಾದರೂ ಮಾಡಬೇಕುಅನ್ನಿಸಬಾರದು.ಅದನ್ನೆಇದರಲ್ಲಿ ಹೇಳ ಹೊರಟಿದ್ದೇವೆ. ಸತ್ಯಪ್ರಕಾಶ್, ಸುಮನ್ ಮುಂತಾದವರು ನಟಿಸುತ್ತಿದ್ದಾರೆ.ಪೋಸ್ಟರ್ ನೋಡಿದವರೆಲ್ಲರೂ ವಾಹ್ಎನ್ನುತ್ತಿದ್ದಾರೆ.ಇಷ್ಟುದಿವಸ ಮೇಡಂಗ್ಲಾಮರ್ ಆಗಿ ಕಾಣಿಸಿಕೊಂಡಿದ್ದರು. ಮೊದಲಬಾರಿಆಕ್ಷನ್ ಮಾಡಿದ್ದಾರೆ,ಡಿಸೆಂಬರ್ ಒಳಗೆ ಮುಗಿಸಿ, ಸಂಕ್ರಾಂತಿ ಹಬ್ಬದಂದುಜನರಿಗೆತೋರಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂಬುದು ನಿರ್ದೇಶಕಗುರುಮೂರ್ತಿ ಮಾಹಿತಿಯಾಗಿತ್ತು.
ನಿರ್ಮಾಪಕ ಎಸ್.ಜಿ.ಸತೀಶ ಹೆಚ್ಚೇನು ಮಾತನಾಡಲಿಲ್ಲ. ಶುಭಸಂದರ್ಭದಲ್ಲಿ ಸಂಭಾಷಣೆ, ಸಾಹಿತ್ಯ ರಚಿಸಿರುವ ಕಿನ್ನಾಳ್ರಾಜ್, ಛಾಯಾಗ್ರಾಹಕ ವೀಣಾನಂದಕುಮಾರ್ಮುಂತಾದವರು ಹಾಜರಿದ್ದರು.ಮತ್ತೋಂದುಕಡೆ ಅಭಿಮಾನಿಗಳು ಕೇಕ್, ಹೂ, ಉಡುಗೊರೆಗಳನ್ನು ಮೇಡಂಅವರಿಗೆಕೊಡಲುಕಾತುರರಾಗಿದ್ದರು.