Meghanaraj.Son Thotlu Shastra

Thursday, November 12, 2020

448

ಮೇಘನಾರಾಜ್ ಮನೆಯಲ್ಲಿ ಸಂತಸದ ವಾತವರಣ

      ದಿವಂಗತ ಚಿರಂಜೀವಿಸರ್ಜಾ ಮತ್ತು ಮೇಘನಾರಾಜ್ ದಂಪತಿಯ ಗಂಡು ಮಗುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರವು  ಕುಟಂಬಸ್ಥರು ಮತ್ತು ಬಂಧುಬಳಗದವರ ಸಮ್ಮುಖದಲ್ಲಿ ನಡೆಯಿತು. ಬಣ್ಣಬಣ್ಣದ ಕರಕುಶಲ ತೊಟ್ಟಿಲ್ಲನ್ನು ಗದಗದ ಮಹಿಳಾ ಸಂಘವೊಂದು ಉಡುಗೊರೆ ನೀಡಿದೆ. ಇದನ್ನು ಸಿದ್ದಪಡಿಸಲು ಐದು ತಿಂಗಳು ಸಮಯ ತೆಗೆದುಕೊಂಡಿದ್ದು, ಅಂದಾಜು ೧.೧೦ ಲಕ್ಷ ಬೆಲೆ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಉಮೇಶ್‌ಬಣಕಾರ್ ಮೂಲಕ ಮಹಿಳಾ ಸಂಘದ ಸದಸ್ಯರು ತೊಟ್ಟಿಲ್ಲನ್ನು ತಲುಪಿಸಿದರು. ನಂತರ ಮಾದ್ಯಮದೊಂದಿಗೆ ಮಾತನಾಡಿದ ಮೇಘನರಾಜ್, ಈ ಶಾಸ್ತ್ರವು ಕೇವಲ ಒಂದು ಟ್ರೈಲರ್. ತವರು ಮನೆಯಲ್ಲಿ ನಡೆಯುವ ಶಾಸ್ತ್ರಕ್ಕೆ ವನಿತಾ ನೀಡಿರುವ ತೊಟ್ಟಿಲ್ಲನ್ನು ಬಳಸಿಕೊಂಡಿದ್ದೇವೆ. ಧ್ರುವಸರ್ಜಾ ತಂದಿರುವ ಬೆಳ್ಳಿಯ ತೊಟ್ಟಲ್ಲಿನಲ್ಲಿ ಇನ್ನೊಮ್ಮೆ ಶಾಸ್ತ್ರ ನಡೆಯಲಿದೆ. ಚಿರು ಮಗನಿಗೆ ಜನವರಿಯಲ್ಲಿ ನಾಮಕರಣ ನಡೆಯಲಿದೆ. ಜಾತಕ ನೋಡಿಕೊಂಡು ಸ್ಪೆಷಲ್ ಹೆಸರು ಇಡಬೇಕು ಎಂಬ ಆಸೆ ಇದೆ. ನಾವು ಇಡುವ ಹೆಸರು ಅವರಿಗೆ ಒಳ್ಳೆಯದಾಗುವ ರೀತಿ ಇರಬೇಕು.

       ನನ್ನ ಮಗನನ್ನು ನೋಡಿದಾಗ ಚಿರು ಹೇಗೆ ನೋಡಿಕೊಳ್ಳುತ್ತಿದ್ದರೆಂದು ಅನ್ನೋದು ನೆನಪಿಗೆ ಬರುತ್ತದೆ. ಚಿರು ಎಂದರೆ ಸೆಲೆಬ್ರೇಷನ್. ಚಿರು ಎಂದರೆ ಅವರ ನಗು ಮುಖ, ಕಣ್ಣು ಮುಂದೆ ಬರುತ್ತದೆ. ಆ ಸಂಭ್ರಮವನ್ನು ನಾನು ಮುಂದುವರೆಸಬೇಕು. ಮಗ ಸ್ಟಾರ್ ಆಗುವುದಕ್ಕಿಂತ ಮುಂಚೆ ಚಿರು ತರಹ ಎಲ್ಲರೂ ಮೆಚ್ಚುವಂತಿರಬೇಕು. ಕಷ್ಟದ ಸಮಯವನ್ನು ಹೇಗೆ ಕಳೆಯಬೇಕೆಂದು ಅವರಿಂದ ಕಲಿತುಕೊಂಡಿದ್ದೇನೆ. ನನ್ನ ಬದುಕಿನಲ್ಲಿ ಮಗು ಬಂದಿರುವುದು ಎರಡರಷ್ಟು ಸಂಭ್ರಮ ತಂದಿದೆ ಎಂದು ಹೇಳಿದರು. ಒಮ್ಮೊಮ್ಮೆ ಮೇಘನಾರಾಜ್ ಭಾವುಕರಾಗಿದ್ದು ಉಂಟು. ಸುಂದರ್‌ರಾಜ್--ಪ್ರಮೀಳಾಜೋಷಾಯ್ ಮೊಮ್ಮಗನನ್ನು ನೋಡುತ್ತಲೆ ಖುಷಿಗೊಳ್ಳುತ್ತಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,