‘ರಿಚ್ಚಿ’ ಚಿತ್ರದ ಸುಮಧುರವಾದ ಹಾಡು ಅನಾವರಣ – ಪಿ ಆರ್ ಒ – ವಿಜಯಕುಮಾರ್
‘ಸನಿಹ ನೀ ಇರುವಾಗ ಸಲುಗೆಯ ಅನುರಾಗ....ಸುಮಧುರವಾದ ‘ರಿಚ್ಚಿ’ ಚಿತ್ರದ ಗೀತೆಯೊಂದು
ಮೊನ್ನೆ ನರಕಚತುರ್ದಶಿ, ನವೆಂಬರ್ 14, 2020 ರಂದು ಪ್ರಸಾದ್ ಲ್ಯಾಬ್ ಥಿಯೇಟರ್ ಅಲ್ಲಿ
ಮಾಧ್ಯಮದ ಮುಂದೆ ಅನಾವರಣಗೊಂಡಿದೆ. ಸೋನು ನಿಗಂ ಹಾಡಿರುವ ಈ ಹಾಡಿಗೆ ನೃತ್ಯ ಸಂಯೋಜನೆ
ಮಾಡಿರುವವರು ಹೆಸರಾಂತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್. ಚಿತ್ರದ ನಾಯಕ ರಿಚ್ಚಿ
(ಮೂಲ ಹೆಸರು ಹೇಮಂತ್) ಹಾಗೂ ನಾಯಕಿ ನಿಷ್ಕಲ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ವಿನೋದ್ ರಚಿಸಿರುವ ಈ ಗೀತೆಗೆ ರಾಗ ಸಂಯೋಜನೆಯನ್ನು ಅಗಸ್ತ್ಯ ಸಂತೋಷ್ ಮಾಡಿದ್ದಾರೆ.
ಕೊಡಗಿನ ಕೋಟೆ ಬೆಟ್ಟ ಸುತ್ತ ಮುತ್ತ ಈ ಹಾಡಿನ ರಮ್ಯ ಮನೋಹರ ತಾಣಗಳನ್ನು ಛಾಯಾಗ್ರಾಹಕ
ವೀರೇಶ್ ಚಿತ್ರೀಕರಿಸಿದ್ದಾರೆ.
‘ರಿಚ್ಚಿ’ ಈ ಚಿತ್ರದ ಕಥಾ ನಾಯಕ, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ
ನಿರ್ಮಾಣ ಸಹ ಮಾಡಿ ಮೊದಲ ಬಾರಿಗೆ ಪತ್ರಕರ್ತನ ಪಾತ್ರ ಈ ಸಸ್ಪೆನ್ಸ್ ಥ್ರಿಲ್ಲರ್
ಸಿನಿಮಾದಲ್ಲಿ ನಿರ್ವಹಿಸಿದ್ದಾರೆ. ಇದು ಒಂದು ರೊಮ್ಯಾಂಟಿಕ್ ಲವ್ ಟ್ರಾಕ್ ಸಹ
ಹೊಂದಿದೆ. ಮುಂಬೈ ಮೂಲದ ಮನೋಜ್ ಮಿಶ್ರ ಸೈಕೋ ಚಟುವಟಿಕೆಯಲ್ಲಿ ನಾಯಕ ಸಿಲುಕಿ ಅದರಿಂದ
ಹೇಗೆ ಪಾರಾಗುತ್ತಾನೆ ಎಂಬುದು ಚಿತ್ರದ ಕಥಾ ಹಂದರ.
ರಿಚ್ಚಿ ಚಿತ್ರದ ಈ ಹಾಡು ‘ಸನಿಹ ನೀ ಇರುವಾಗ ಸಲುಗೆಯ ಅನುರಾಗ....ಈಗಾಗಲೇ ಸಾಮಾಜಿಕ
ಜಾಲತಾನದಲ್ಲಿ ಲಭ್ಯವಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.
ಈಗಾಗಲೆ 70 ರಷ್ಟು ಚಿತ್ರೀಕರಣ ಬೆಂಗಳೂರು ಹಾಗೂ ಕೊಡಗಿನಲ್ಲಿ ಮುಗಿಸಿರುವ ಈ ಚಿತ್ರದ
ಇನ್ನುಳಿದ ಭಾಗದ ಚಿತ್ರೀಕರಣ ಸಧ್ಯದಲ್ಲೇ ಪೂರ್ತಿಗೊಳಿಸಲಾಗುವುದು.
ಈ ಚಿತ್ರಕ್ಕೆ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿರುವ ಅಗಸ್ತ್ಯ ಸಂತೋಷ್ ಪ್ರಕಾರ
ನಿರ್ದೇಶಕ, ನಟ ಹಾಗೂ ನಿರ್ಮಾಪಕ ರಿಚ್ಚಿ ‘ಮುಂಗಾರು ಮಳೆ’ ಚಿತ್ರದ ಮಾಧುರ್ಯ
ಚಿತ್ರಕ್ಕೆ ಬೇಕು ಎಂದು ಹೇಳಿದ್ದರು ಎಂದು ಮಾಧ್ಯಮ ಘೋಷ್ಟಿಯಲ್ಲಿ ಹೇಳಿಕೊಂಡಿದ್ದರು.
ಚಿತ್ರದ ಕಥಾ ನಾಯಕಿ ನಿಷ್ಕಲ ಮೊದಲ ಸಿನಿಮಾದಲ್ಲಿ ಚಿನ್ನಿ ಪ್ರಕಾಶ್ ಅಂತಹ ದಿಗ್ಗಜರ
ಜೊತೆ ಕೆಲಸ ಮಾಡಿರುವುದರ ಜೊತೆಗೆ ಶಿಸ್ತು ಸಂಯಮದಿಂದ ನಟ ‘ರಿಚ್ಚಿ’ ಚಿತ್ರವನ್ನೂ
ಮುಂದೆ ಸಾಗಿಸುತ್ತಿದ್ದಾರೆ ಎಂದು ಸಂತಸ ಪಟ್ಟುಕೊಂಡರು.
ಮಂಜು ಈ ಚಿತ್ರಕ್ಕೆ ಸಹ ನಿರ್ದೇಶಕ, ಅರ್ಜುನ್ ಕಿಟ್ಟಿ ಸಂಕಲನ, ಪೂರುಷೋತ್ತಮ್ ಕಲಾ
ನಿರ್ದೇಶನ, ವಿಕ್ರಮ್ ಸಾಹಸ, ಪ್ರಕಾಶ್ ರಾವ್ ಸಹ ನಿರ್ಮಾಪಕ ಆಗಿ ಜೊತೆಯಾಗಿದ್ದಾರೆ.
ರಿಚ್ಚಿ, ನಿಷ್ಕಲ, ಮನೋಜ್ ಮಿಶ್ರ, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ ಹಾಗೂ ಇತರರು
ತಾರಗಣದಲ್ಲಿದ್ದಾರೆ.