Pogaru.Film Success Meet.

Thursday, February 25, 2021

314

ಪೊಗರು ಖುಷಿ ಮತ್ತು ಬೇಸರ

ಕಳೆದವಾರ ಬಿಡುಗಡೆಗೊಂಡ ‘ಪೊಗರು’ ಚಿತ್ರದ ಸಂತೋಷಕೂಟದಲ್ಲಿ ೪೫ ಕೋಟಿ ಗಳಿಕೆ ಆಗಿದ್ದಕ್ಕೆ ಸಂತಸ, ಮತ್ತೋಂದುಕಡೆಒಂದುಕೋಮಿನವರನ್ನು ಅವಹೇಳನ ಮಾಡಲಾದ ದೃಶ್ಯಗಳನ್ನು ಕಡಿತ ಮಾಡಿದ್ದರಿಂದಎಂಟು ನಿಮಿಷ ಟ್ರಿಮ್‌ಆಗಿರುವುದು ಬೇಸರ ತರಿಸಿದೆ.ಇವರೆಡು ವಿಷಯಗಳು ಅಂದಿನ ಗೋಷ್ಟಿಯಲ್ಲಿ ಮಾಹಿತಿ ಲಭ್ಯವಾಯಿತು.ನಿರ್ದೇಶಕ ನಂದಕಿಶೋರ್ ಮಾತನಾಡಿ ಹೊಸದಾಗಿ ಸೆನ್ಸಾರ್ ಮಾಡಿಸಲಾಗಿದೆ.ಸರ್ಟಿಫಿಕೇಟ್ ಸಿಕ್ಕ ತಕ್ಷಣಕ್ಯೂಬ್‌ಗೆಅಪ್‌ಲೋಡ್ ಮಾಡಲಾಗುವುದು.ಶುಕ್ರವಾರದಿಂದ ಹೊಸ ಪೊಗರು ನೋಡಬಹುದುಎಂದರು. ಬಂಡವಾಳದಲ್ಲಿ ಲಾಭ ಬಂದಿರುವುದಕ್ಕೆ ನಿರ್ಮಾಪಕ ಬಿ.ಕೆ.ಗಂಗಾಧರ್ ಮಂದಹಾಸವೇಎಲ್ಲವನ್ನು ಹೇಳುತ್ತಿತ್ತು.

ಸಿನಿಮಾ ನೋಡದ ಪ್ರತಿಭಟನಾಕಾರರ ಮನಸ್ಸುಚಿತ್ರ ನೋಡಿ ಬದಲಾಗಬಹುದು.ಯಾವುದೇಚಿತ್ರವಾಗಲಿ ಕೊಂಕು ಹುಡುಕಿಕೊಂಡು ಹೋದರೆ ಸಿಕ್ಕೇ ಸಿಗುತ್ತದೆ.ಕೆಲವು ದೃಶ್ಯಗಳನ್ನು ತೆಗೆಯಿರಿಎಂದು ಹೇಳಿದ್ದರೆ ಅದನ್ನುಡಿಲಿಟ್ ಮಾಡುತ್ತಿದ್ದೇವು.ಆದರೆ ಇಷ್ಟು ದೊಡ್ಡ ಸೀನ್ ಕ್ರಿಯೇಟ್ ಮಾಡುವಅಗತ್ಯಇರಲಿಲ್ಲ. ನಾವು ಜನರಿಗಾಗಿಚಿತ್ರ ಮಾಡುತ್ತೇವೆ. ನನ್ನದುರಾಕ್ಷಸನ ಪಾತ್ರವಾಗಿದ್ದರಿಂದ ಹಾಗೆಯೇ ನಡೆದುಕೊಳ್ಳಬೇಕಿತ್ತು.ಇಲ್ಲಿಆದಂಥ ಸಮಸ್ಯೆ ತಮಿಳು, ತೆಲುಗುದಲ್ಲಿಆಗಿಲ್ಲ. ಮುಂದೆಅಲ್ಲಿಯೂ ಆಗಬಹುದೆಂಬ ಕಾರಣದಿಂದಅಲ್ಲಿಯೂಇದನ್ನುತೆಗೆದು ಹಾಕಲಾಗುತ್ತಿದೆ.ರಾಕ್ಷಸನತರಹ ಆಗೋಕ್ಕೆ ತುಂಬ ಕಷ್ಟ ಪಟ್ಟಿದ್ದೇನೆ. ನಂಬಿರುವುದುಒಂದೆ. ಬಗ್ಗಿಸಿ ಕೆಲಸ ಮಾಡುವುದು. ಸಣ್ಣ, ದಪ್ಪಆಗುವುದಕ್ಕೆ ಸಾಕಷ್ಟು ಸಮಯತೆಗೆದುಕೊಂಡಿದ್ದೇನೆ. ಅದು ಈಗ ಅರ್ಥವಾಗಿದೆ.ಮೊದಲೇಗೊತ್ತಿದ್ದರೆಡ್ಯಾಪ್ ಹಾಕಿ ಪಟಪಟ ಸಿನಿಮಾ ಮುಗಿಸುತ್ತಿದ್ದೆ.ಇನ್ನು ಮುಂದೆ ಪಟ ಪಟ ಸಿನಿಮಾ ಮಾಡುತ್ತಿರುತ್ತೇನೆಂದು ಹೇಳುವಾಗ ಅವರ ಮುಖದಲ್ಲಿ ನೋವು ಕಾಣುತ್ತಿತ್ತು.

ಮಾತಿನ ಮಂಟಪದಲ್ಲಿ ಸಾರಾಗೋವಿಂದು, ತಾರ, ಚಿಕ್ಕಣ್ಣ, ಆಮದುನಟಜಾಜ್‌ಲೂಕಾಸ್, ಕತೆಗಾರಅರುಣ್‌ಬಾಲಜಿ, ಸಂಭಾಷನೆಕಾರ ಪ್ರಶಾಂತ್‌ರಾಜಪ್ಪ, ನೃತ್ಯ ಸಂಯೋಜಕ  ಮುರಳಿ, ವಿತರಕುಗಳಾದ ಭಾಷಾ, ಸುಪ್ರೀತ್, ಮುರಳಿ, ಮೋಹನ್‌ಕುಮಾರ್  ಮುಂತಾದವರು ಉಪಸ್ತಿತರಿದ್ದು ಸಂತಸ ಹಂಚಿಕೊಂಡರು.

 

Copyright@2018 Chitralahari | All Rights Reserved. Photo Journalist K.S. Mokshendra,