ಜನರಿಗೆಜಾಗೃತಿ ಮೂಡಿಸುವ ಸ್ವಚ್ಚಕರ್ನಾಟಕ
ಹಿರಿಯ ಸಾಹಿತಿಡಾ.ದೊಡ್ಡರಂಗೇಗೌಡರು ಸಾಹಿತ್ಯ ರಚಿಸಿರುವುದರ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಸ್ವಚ್ಚಕರ್ನಾಟಕ’ ಚಿತ್ರದಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮವು ಭಾರತ್ ಸ್ಕೌಟ್ಸ್‌ಅಂಡ್‌ಗೈಡ್ಸ್‌ಆವರಣದಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯಿತು.ಮಾಜಿ ಶಾಸಕ ಹೇಮಚಂದ್ರಸಾಗರ್, ಮೋಹನ್‌ಕೊಂಡಜ್ಜಿರಮೇಶ್‌ಕಾಮತ್ ಮುಂತಾದ ಗಣ್ಯರುಗಳು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ನಮ್ಮ ಸುತ್ತಲಿನ ಪರಿಸರವನ್ನುಹೇಗೆ ಸ್ವಚ್ಚವಾಗಿಟ್ಟುಕೊಳ್ಳಬೇಕು.ನಾವು ಇನ್ನೊಬ್ಬರನ್ನುದೂಷಿಸುವುದಕ್ಕಿಂತತನ್ನಿಂದಲೇ ಸ್ವಚ್ಚತಾಕಾರ್ಯ ಆರಂಭಿಸಿದರೆ,
ನಮ್ಮ ಸುತ್ತಮುತ್ತಲಿನ ಪರಿಸರಚೆನ್ನಾಗಿರುತ್ತದೆ.ನಮ್ಮಊರು, ರಾಜ್ಯ, ಮತ್ತುದೇಶವು ಸ್ವಚ್ಚವಾಗಿರುತ್ತದೆಂದು ಸಂದೇಶದಲ್ಲಿ ಹೇಳಲಾಗಿದೆ.
ಅರ್ಜುನ, ಅಂಜಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಎಲ್.ರವಿಕುಮಾರ್ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ.ರಾಜ್‌ಭಾಸ್ಕರ್ ಸಂಗೀತವಿದೆ. ಮಹಾನಗರ ಪಾಲಿಕೆ ವಿಶೇಷ ಆಯುಕ್ತರಣದೀಪ್ ಮಾತನಾಡಿ ನಾನು ಅಧಿಕಾರ ವಹಿಸಿಕೊಂಡ ನಂತರ ಮೊದಲಬಾರಿಗೆ ಸಿನಿಮಾ ಸಮಾರಂಭದಲ್ಲಿ ಭಾಗವಹಿಸುತ್ತಿದ್ದೇನೆ. ಅದಕ್ಕೆಕಾರಣಇದು ನಮ್ಮಕರ್ತವ್ಯಕ್ಕೆ ಸಂಬಂದಿಸಿದ ವಿಷಯ, ಕ್ಲೀನ್ ಸಿಟಿ ಕಾನ್ಸೆಪ್ಟ್ ಅಂಶಗಳ ಚಿತ್ರವೆಂಬುದು ತಿಳಿದು ಬಂದಿದೆ. ಪರಿವರ್ತನೆ ನಮ್ಮಲ್ಲಿ ಮೊದಲು ಬರಬೇಕು.ಸಾರ್ವಜನಿಕರ ಸಹಕಾರವಿಲ್ಲದೆನಾವು ಏನನ್ನು ಮಾಡಲು ಸಾದ್ಯವಿಲ್ಲ. ನಿರ್ಮಾಪಕರಿಗೆ ಬಂಡವಾಳ ವಾಪಸ್ಸು ಬರಲಿ ಎಂದರು.ಸಿನಿಮಾವುಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆಇದೆ.