Raimes.Film Press Meet.

Saturday, February 27, 2021

298

ರೈಮ್ಸ್ ಅಪರಾಧಿಗಳ ಬೆನ್ನಟ್ಟಿ

ಸತ್ಯಘಟನೆಯನ್ನುತೆಗೆದುಕೊಂಡುಅದಕ್ಕೆಕಾಲ್ಪನಿಕಕತೆ ಸೃಷ್ಟಿಸಿರುವ ‘ರೈಮ್ಸ್’ ಬೆಂಗಳೂರು, ತುಮಕೂರು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿದೆ.ರಚಿಸಿ ಮೊದಲಬಾರಿ ನಿರ್ದೇಶನ ಮಾಡಿರುವಅಜಿತ್‌ಕುಮಾರ್‌ಅವರು ಕಮಲಹಾಸನ್‌ಅವರೊಂದಿಗೆ ಸಹಾಯಕರಾಗಿ ಕೆಲಸ ಮಾಡಿದಅನುಭವವಿದೆ.ಇವರುಹೇಳುವಂತೆ ೧೯೮೯ರಂದು  ಪತ್ರಿಕೆಯಲ್ಲಿ ಬಂದಂತ ಸುದ್ದಿಗೂ ಈಗ ನಡೆಯುತ್ತಿರುವ ಅಪರಾಧಗಳಿಗೂ ಸಂಬಂದವಿರುತ್ತದೆ. ಕ್ರೈಂಥ್ರಿಲ್ಲರ್‌ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನುತನಿಖೆ ಮಾಡಲುಇನ್ಸ್‌ಪೆಕ್ಟರ್ ನೇಮಕಗೊಂಡರೆ, ಉನ್ನತ ಪತ್ರಿಕೆಯಅಪರಾಧ ವಿಭಾಗದ ವರದಿಗಾರ್ತಿಇವರೊಂದಿಗೆ ಸೇರಿಕೊಳ್ಳುತ್ತಾರೆ. 

ನಂತರಕೇಸ್ ಸಿಬಿಐಗೆ ವಹಿಸಿಲಾಗುತ್ತದೆ.ಕೊಲೆ ಮಾಡಿದವರುಯಾರು, ಇದಕ್ಕೆಕಾರಣವಾದರೂ ಏನು?ಎಷ್ಟು ಕೊಲೆ ಆಗುತ್ತದೆ.ಇವೆಲ್ಲವುಕುತೂಹಲದರೀತಿಯಲ್ಲಿ ಬಿಚ್ಚಿಕೊಳ್ಳುವುದೇ ಒಂದು ಏಳೆಯ ಸಾರಾಂಶವಾಗಿದೆ.ಶೀರ್ಷಿಕೆ ಇದೆಲ್ಲಕ್ಕೂ ಪೂರಕವಾಗಿದೆ.

ಅಜಿತ್‌ಜಯರಾಜ್ ನಾಯಕ, ಸುಷ್ಮನಾಯರ್‌ಇನ್ಸೆಪೆಕ್ಟರ್ ಪತ್ನಿ, ನಾಯಕಿಯಾಗಿ ಮೂರನೇಚಿತ್ರ. ನಾಯಕನತಾಯಿ ಪಾತ್ರದಲ್ಲಿಅಭಿನಯ, ಉಡಾಫೆ ಹೆಡ್‌ಕಾನ್ಸ್‌ಟೇಬಲ್ ಆಗಿ ಮಿಮಿಕ್ರಿಗೋಪಿ, ತನಿಖಾದಿಕಾರಿಯಾಗಿಅರ್ಪಣ, ಶುಭಪೂಂಜಾ, ಬೇಬಿ ಬಾಸುತಿ,ಚನ್ನರಾಜು ಮುಂತಾದವರು ಟಿಸಿದ್ದಾರೆ.  ಹಾಡುಗಳು, ಸಾಹಸ ಇಲ್ಲದೆಇರುವುದು ವಿಶೇಷ. ಶಕ್ತಿ ಹಿನ್ನಲೆ ಶಬ್ದ ಸಂಯೋಜಿಸಿದ್ದಾರೆ. ಛಾಯಾಗ್ರಹಣಅರ್ಜುನ್‌ಅಕೋಟ್, ಸಂಕಲನ ಸಂತೋಷ್.ಟಿ, ಕಲೆ ಕಿಶನ್‌ದೀಪ್‌ಅವರದಾಗಿದೆ.  ಮಾಜಿಆಕ್ಸಿಸ್ ಬ್ಯಾಂಕ್ ನೌಕರಜ್ಘಾನಶೇಖರ್ ಹಾಗೂ ಗೆಳಯರುಗಳಾದ ಎಂ.ರಮೇಶ್‌ಆರ್ಯ,ರವಿಕುಮಾರ್, ಮತ್ತುಗಿರೀಶ್‌ಇವರಿಗೆ ಕೈ ಜೋಡಿಸಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ನಿವೃತ್ತ ಪೋಲೀಸ್‌ಅಧಿಕಾರಿ ಮಾತನಾಡಿ ಭೂಗತಲೋಕದಡಾನ್‌ಜಯರಾಜ್‌ಅವರನ್ನು ನೆನಪು ಮಾಡಿಕೊಂಡು, ಇಂದುಅವರ ಮಗ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಲೀಸ್ ಅವರುಗಳ ಭಾವನೆಗಳನ್ನು ಕನ್ನಡ ಚಿತ್ರಗಳಲ್ಲಿ ಚೆನ್ನಾಗಿತೋರಿಸಲಾಗುತ್ತಿದೆ.ತಂಡಕ್ಕೆ ಒಳ್ಳೆಯದಾಗಲಿ ಎಂದರು. ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ  ತೆರೆಗೆತರಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,