Muniyana Madari.Film Audio Rel.

Saturday, February 27, 2021

318

ಅನ್ನದಾತನ ಬದುಕು,ಬವಣೆಕುರಿತಾದಚಿತ್ರ

ನಮಗೆಲ್ಲರಿಗೂಆಹಾರಕೊಡುವರೈತನನ್ನುಅನ್ನದಾತನೆಂದುಕರೆಯುತ್ತೇವೆ. ಆತನ ಬದುಕುದುಸ್ತರವಾಗಿರುತ್ತದೆ.ಸಾಲ ಮಾಡಿತೀರಿಸಲಾಗದೆ, ಫಸಲು ಸಿಗದೆ ಹೋದಾಗಆತ್ಯಹತ್ಯೆಗೆ ಶರಣಾಗುತ್ತಾನೆ. ಮಿಷನ್ ಬಳಸದೆ ಸೈಕೆಲ್‌ಚಕ್ರದ ಮೂಲಕ ಹೊಲ ಹೂಳಬಹುದು.ಇವೆಲ್ಲಾ ಅಂಶಗಳು ‘ಮುನಿಯನ ಮಾದರಿ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.೧೯೮೦ರ ದಶಕದಲ್ಲಿ ಶಂಕರ್‌ನಾಗ್‌ಅಭಿನಯದಚಿತ್ರವುಇದೇ ಹೆಸರಿನಲ್ಲಿತೆರೆಕಂಡಿತ್ತು.ಅದಕ್ಕೂಇದಕ್ಕೂ ಸಂಬಂದವಿಲ್ಲವೆಂದುಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಮಹೇಶ್‌ಮರಿಯಪ್ಪ ಸ್ಪಷ್ಟಪಡಿಸಿದ್ದಾರೆ. 

ಚಿಕ್ಕ ವಯಸ್ಸಿನಲ್ಲೆ ಅಪ್ಪನನ್ನು ಕಳೆದುಕೊಂಡ ಮಗ, ಎದೆಗುಂದದೆ ಸೈಕಲ್‌ಚಕ್ರವನ್ನು ಬಳಸಿಕೊಂಡು ಹುಳುಮೆ ಮಾಡಿಎಲ್ಲರಿಗೂ ಹೇಗೆ ಮಾದರಿಯಾಗುತ್ತಾನೆಂಬುದುಒಂದು ಏಳೆಯ ಸಾರಾಂಶವಾಗಿದೆ. ಶ್ರೀ ಭುವನೇಶ್ವರಿ ಪ್ರೊಡಕ್ಷನ್‌ಅಡಿಯಲ್ಲಿಕೆ.ಅಶೋಕ್‌ಕುಮಾರ್ ನಿರ್ಮಾಣ ಮಾಡಿರುವುದು ಹೊಸ ಅನುಭವ.

ಮುಖ್ಯ ಪಾತ್ರದಲ್ಲಿ ಮಾಸ್ಟರ್ ಹೇಮಂತ್, ಇವರೊಂದಿಗೆ ಸ್ನೇಹಶರ್ಮ, ನಾಗರಾಜ್ ಮುಂತಾದವರು ನಟಿಸಿದ್ದಾರೆ. ಸಂಗೀತಯಶ್‌ವಂತ್‌ಭೂಪತಿ, ಛಾಯಾಗ್ರಹಣಗುರುಪ್ರಸಾದ್‌ನರ್ನಾಡ್-ಭರತ್, ಸಂಕಲನ ಸುಬ್ರಮಣ್ಯ.ಜಿ.ಪ್ರಮೋದ್‌ಅವರದಾಗಿದೆ. ಪ್ರಚಾರದ ಮೊದಲ ಹಂತವಾಗಿ ಸಿರಿ ಕನ್ನಡ ಮ್ಯೂಸಿಕ್ ಹೊರತಂದಿರುವಧ್ವನಿಸಾಂದಿಕೆಯನ್ನು ಗಣ್ಯರುಗಳು ಅನಾವರಣ ಮಾಡಿದರು.ಕಾರ್ಯಕ್ರಮದಲ್ಲಿಚಿಕ್ಕಣ್ಣ, ಜಿಸಿ.ಸಿಂಗ್, ನಿರ್ದೇಶಕ ಕಾಶಿನಾಥ್, ಎಸ್.ಎಂ.ಪಾಟೀಲ್, ಸ್ನೇಹನಾಗರಾಜ್ ಮುಂತಾದವರು ಹಾಜರಿದ್ದರು.

 

 

 

Copyright@2018 Chitralahari | All Rights Reserved. Photo Journalist K.S. Mokshendra,