Nanna Kanasugalu.Film Press Meet.

Thursday, March 04, 2021

367

 

*ಸಮಾಜದ ಜ್ವಲಂತ ಸಮಸ್ಯೆಗಳ ಕನ್ನಡಿ ಈ ನನ್ನ ಕನಸುಗಳು*

*-ಶ್ರೀಗುರು ಅನುಗ್ರಹ ಪ್ರೊಡಕ್ಷನ್ಸ್ ನಿಂದ ನಿರ್ಮಾಣ, ರಾಜು ನಿರ್ದೇಶನ*

*-ಗಿರಿಜಾ ಲೋಕೇಶ್​ ಅತಿಥಿಯಾಗಿ ಶುಭ ಹಾರೈಕೆ*

 

ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆ ಮಕ್ಕಳ ಸಿನಿಮಾಗಳ ಸಂಖ್ಯೆ ತುಂಬ ಕಡಿಮೆ ಆಗಿದೆ. ಇದೀಗ ಆ ಹಸಿವನ್ನು ತುಂಬಿಸಲು ನನ್ನ ಕನಸುಗಳು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲೆಂದೇ ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಚಿತ್ರದ ಬಗ್ಗೆ ಒಂದೊಂದಾಗಿ ಮಾಹಿತಿಯನ್ನು ಹಂಚಿಕೊಂಡಿತು. ವಿಶೇಷ ಅತಿಥಿಯಾಗಿಹಿರಿಯ ನಟಿ ಗಿರಿಜಾ ಲೋಕೇಶ್ ಆಗಮಿಸಿ ಇಡೀ ತಂಡಕ್ಕೂ ಶುಭ ಹಾರೈಸಿದ್ದಾರೆ.

ಶ್ರೀಗುರು ಅನುಗ್ರಹ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಸಿದ್ಧವಾಗಿರುವ ನನ್ನ ಕನಸುಗಳು ಸಿನಿಮಾಕ್ಕೆ ರಾಜು ನಿರ್ದೇಶನ ಮಾಡಿದ್ದಾರೆ. ಇವರ ಈಪ್ರಯತ್ನಕ್ಕೆ ಬೆನ್ನೆಲುಬಾಗಿ ನಿರ್ಮಾಪಕಿ ಸುಜಾತಾ ಸಿಂಗ್ ಬಂಡವಾಳ ಹೂಡಿದ್ದಾರೆ. ಚಿತ್ರದ ಬಗ್ಗೆ ಮೊದಲಿಗೆ ಮಾಹಿತಿ ನೀಡುವ ನಿರ್ದೇಶಕ ರಾಜು, ಇದೊಂದು ಸಂಪೂರ್ಣ ಮಕ್ಕಳ ಸಿನಿಮಾ. ಈ ಚಿತ್ರದಲ್ಲಿ ಭ್ರೂಣಹತ್ಯೆ, ಹೆಣ್ಣಿಗೂ ಶಿಕ್ಷಣ ಕಡ್ಡಾಯ, ಹಳ್ಳಿಗಳಲ್ಲಿ ಪ್ರತಿ ಮನೆಗೂ ಶೌಚಾಲಯ ಅದೇ ರೀತಿ ಕೊರೊನಾ ಸಾಂಕ್ರಾಮಿಕ ರೂಗದ ಬಗ್ಗೆಯೂ ಸಿನಿಮಾದಲ್ಲಿ ಬೆಲಕು ಚೆಲ್ಲಿದ್ದೇವೆ. ಪರಿಸರ ಸಂರಕ್ಷಣೆ ಬಗ್ಗೆಯೂ ಸಿನಿಮಾ ಮಾತನಾಡಲಿದೆ. ಮಕ್ಕಳ ಶಿಕ್ಷಣದ ಬಗ್ಗೆಯೇ ಹೆಚ್ಚು ವಿಷಯಗಳನ್ನು ತಿಳಿಸಿದ್ದೇವೆ ಎಂದು ನಿರ್ದೇಶಕ ರಾಜು ಮಾಹಿತಿ ನೀಡುತ್ತಾರೆ.

ಈ ಮಕ್ಕಳ ಚಿತ್ರಕ್ಕೆ ನಿರ್ಮಾಪಕಿಯಾಗಿರುವ ಸುಜಾತಾ ಸಿಂಗ್ ಸಹ, ಅಷ್ಟೇ ಖುಷಿಯಲ್ಲಿಯೇ ಸಿನಿಮಾ ಮೂಡಿಬಂದ ಬಗ್ಗೆ ಮಾತನಾಡಿದ್ದಾರೆ. ಮಕ್ಕಳ ಕನಸು ಕಾಣಲು ಬಿಡಬೇಕು. ಈಗಿನ ಪೋಷಕರು ಬಿಡ್ತಿಲ್ಲ. ಮಕ್ಕಳೂ ಕನಸು ಕಾಣಬೇಕು. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆಯೂ ಸಿನಿಮಾದಲ್ಲಿ ನಿರ್ದೇಶಕರು ತೋರಿಸಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ತೆರೆಗೆ ಬರಲಿದ್ದೇವೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಗಿರಿಜಾ ಲೋಕೇಶ್​, ಕನ್ನಡದಲ್ಲಿ ಮಕ್ಕಳ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿದೆ.ಇದೀಗ ಆ ಸ್ಥಾನ ತುಂಬಲು ನನ್ನ ಕನಸುಗಳು ಚಿತ್ರ ಸಿದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಇಂಥ ಸಿನಿಮಾಗಳನ್ನು ಜನ ನೋಡುವುದನ್ನೇ ಬಿಟ್ಟಿದ್ದಾರೆ. ಸಾಕಷ್ಟು ಸಂದೇಶ ಹೇಳುವ ಮಕ್ಕಳ ಚಿತ್ರಗಳನ್ನು ಪ್ರತಿಯೊಬ್ಬರೂ ನೋಡಬೇಕು. ಅದೇ ರೀತಿ ನನ್ನ ಕನಸುಗಳು ಚಿತ್ರದ ಮೂಲಕ ಸಾಮಾಜಿಕ ಸಂದೇಶವನ್ನೂ ನಿರ್ದೇಶಕರು ನೀಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಹರಿಸಿದರು.

ಮದ್ದೂರು, ಗೊರವನಹಳ್ಳಿ, ಬೆಂಗಳೂರು ಸೇರಿ ಹಲವೆಡೆ ಚಿತ್ರದ ಶೂಟಿಂಗ್​ ಮಾಡಲಾಗಿದ್ದು, ಚಿತ್ರ ಸಂಪೂರ್ಣ ಮುಗಿದಿದ್ದು, ಮುಂದಿನ ತಿಂಗಳು ಸೆನ್ಸಾರ್ ಕದ ತಟ್ಟಲಿದೆ. ಮಕ್ಕಳ ಚಿತ್ರವಾದ್ದರಿಂದ ಇಡೀ ಚಿತ್ರದಲ್ಲಿ ಪ್ರತಿಯೊಬ್ಬರೂ ಅಚ್ಚುಕಟ್ಟಾಗಿ ಪಾತ್ರ ಮಾಡಿದ್ದಾರೆ ಎಂಬುದು ನಿರ್ದೇಶಕರ ಮಾತು. ಅಂದಹಾಗೆ, ಯಶಶ್ವಿನಿ, ಕಾಜಲ್, ದೀಕ್ಷಾ, ಅಂಕಿತಾ, ಕಾಂಚನಾ, ಗ್ರೀಷ್ಮಾ ಸೇರಿ ಇನ್ನೂ ಹಲವು ಪುಟಾಣಿಗಳು ಚಿತ್ರದಲ್ಲಿ ನಟಿಸಿದ್ದಾರೆ. ಪಿವಿಆರ್​ ಸ್ವಾಮಿ ಛಾಯಾಗ್ರಹಕರಾಗಿ ಕೆಲಸ ಮಾಡಿದರೆ, ಶಿವರಾಜ್ ಸಂಕಲನ , ಚಿತ್ರಕ್ಕೆ ವಿಜಯ್ ಸಂಗೀತ ನೀಡಿದ್ದಾರೆ. ಇನ್ನು ಸಂಜಯ್ ಮಾಗನೂರು- ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,