*ಮಾರ್ಚ್ 26ಕ್ಕೆ ಕರ್ನಾಟಕ ಸೇರಿ ಗಲ್ಫ್ ದೇಶಗಳಲ್ಲಿಯೂ ತುಳು ಚಿತ್ರ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಬಿಡುಗಡೆ*
*- ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣ*
*- ಸಿನಿಮಾ ನಿರ್ಮಾಪಕ, ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಬಂಡವಾಳ*
*- ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕ, ನವ್ಯಾ ಪೂಜಾರಿ ನಾಯಕಿ, ಸೂರಕ್ ಶೆಟ್ಟಿ ನಿರ್ದೇಶನ*
ತುಳು ಭಾಷೆಯ ಚಿತ್ರಗಳು ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗದೇ ಕರ್ನಾಟಕದ ಮೂಲೆ ಮೂಲೆಗಳಿಗೂ ತಲುಪಬೇಕು ಹಾಗು ಕನ್ನಡ ಭಾಷೆಯ ಚಿತ್ರಕ್ಕೆ ಎಷ್ಟು ಪ್ರಾಧಾನ್ಯ ನೀಡುತ್ತೇವೆಯೋ ಅಷ್ಟೇ ಪ್ರಾಧಾನ್ಯತೆ ತುಳು ಭಾಷೆಯ ಚಿತ್ರಕ್ಕೂ ನೀಡುವ ಮೂಲಕ ಕರುನಾಡಿನ ಸಮಸ್ತ ಜನತೆಯು ತುಳು ಭಾಷೆಯ ಚಿತ್ರಗಳನ್ನು ಪ್ರೋತ್ಸಾಹಿಸಬೇಕು ಎಂದು ಕನ್ನಡ-ತುಳು ಸಿನಿಮಾ ನಿರ್ಮಾಪಕ, ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹೇಳಿದರು.
ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣವಾಗಿರುವ ಕನ್ನಡ ಸಿನಿಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ ತುಳು ಚಿತ್ರರಂಗದ ಬಹುನಿರೀಕ್ಷೆಯ ಗಿಲ್ಬಿಸ್ಟಿಕ್ ಕಾಮಿಡಿ ತುಳು ಚಿತ್ರ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಸಿನಿಮಾದ ಬಿಡುಗಡೆಯ ಕುರಿತು ಬೆಂಗಳೂರಿನಲ್ಲಿ ಅಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈಗಾಗಲೇ ತಾನು ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಿಸಿದ ’ಮಾರ್ಚ್ 22 ', 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’, ’ಯಾನ’ ದಂತಹ ಕನ್ನಡ ಸಿನೆಮಾಗಳು ಮಾಧ್ಯಮದವರ ಪ್ರೋತ್ಸಾಹ, ಸಹಕಾರದಿಂದ ಅತ್ಯಂತ ಯಶಸ್ಸು ಕಂಡಿದೆ. ’ಮಾರ್ಚ್ 22 ' ಸಿನಿಮಾಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಕೂಡ ದೊರಕಿದೆ ಎಂದು ಶೇರಿಗಾರ್ ತಿಳಿಸಿದರು.
“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ Bro' ತುಳು ಭಾಷೆಯಲ್ಲಿ ಇದು ನನ್ನ ಮೊದಲ ಚಿತ್ರ. ಇಂದು ದೇಶ ವಿದೇಶಗಳಲ್ಲಿ ತುಳು ಭಾಷೆಯ ಚಿತ್ರಗಳು ಪ್ರದರ್ಶನಗೊಂಡು ಉತ್ತಮ ಯಶಸ್ಸು ಕಂಡಿದೆ. ಅದೇ ರೀತಿ ಕರ್ನಾಟಕದಲ್ಲಿ ಕನ್ನಡ ಭಾಷೆಯಂತೆ ತುಳು ಭಾಷೆಯ ಚಿತ್ರಕ್ಕೂ ಹೆಚ್ಚಿನ ಮನ್ನಣೆ ಸಿಗಬೇಕಾದರೆ ಕರ್ನಾಟಕದ ಜನತೆಯ ಆಶೀರ್ವಾದ ಬೇಕು. ಸಮಸ್ತ ಕನ್ನಡಿಗರು ತುಳು ಭಾಷೆಯ ಚಿತ್ರಗಳಿಗೂ ಬೆಂಬಲ ನೀಡಿದರೆ ತುಳು ಭಾಷೆಯ ಚಿತ್ರಗಳು ಮತ್ತಷ್ಟು ಖ್ಯಾತಿ ಪಡೆಯಲು ಸಾಧ್ಯ ಎಂದು ಹರೀಶ್ ಶೇರಿಗಾರ್ ಹೇಳಿದರು.
“ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಮಾರ್ಚ್ 26ರಂದು ಮಂಗಳೂರು-ಉಡುಪಿ ಸೇರಿದಂತೆ ಕರ್ನಾಟಕ, ಗಲ್ಫ್ ಹಾಗೂ ವಿಶ್ವದ ಎಲ್ಲೆಡೆ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರ ಪ್ರೇಮಿಗಳು ಈ ಚಿತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಚಿತ್ರದ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಶೇರಿಗಾರ್ ಮನವಿ ಮಾಡಿದರು.
ಚಿತ್ರದ ನಿರ್ದೇಶಕ ಕೆ. ಸೂರಜ್ ಶೆಟ್ಟಿ ಅವರು ಮಾತನಾಡಿ, ದೊಡ್ಡ ಬಜೆಟ್‌ನಲ್ಲಿ ಒಂದು ಉತ್ತಮ ಚಿತ್ರ ನಿರ್ಮಿಸ ಬೇಕೆಂಬ ಕನಸಿನೊಂದಿಗೆ ಉತ್ತಮ ನಿರ್ಮಾಪಕರ ಹುಡುಕಾಟದಲ್ಲಿದೆ. ಈ ಸಂದರ್ಭದಲ್ಲಿ ಶ್ರೀ ಹರೀಶ್ ಶೇರಿಗಾರ್ ಅವರು ಈ ಚಿತ್ರ ಮಾಡಲು ಮುಂದೆ ಬಂದರು. ದೊಡ್ಡ ಬಜೆಟ್ ಚಿತ್ರ ನಿರ್ಮಿಸುವಾಗ ಬಹಳಷ್ಠು ಕಠಿಣ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಆದರೆ ನಮ್ಮ ನಿರ್ಮಾಪರು ಯಾವೂದೇ ವಿಷಯಗಳ ಬಗ್ಗೆ ರಾಜಿ ಮಾಡದೇ ಚಿತ್ರ ಉತ್ತಮವಾಗಿ ಮೂಡಿ ಬರಬೇಕೆಂಬ ಏಕೈಕ ಉದ್ದೇಶದಿಂದ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಶೇರಿಗಾರ್ ಅವರ ಅಭಿರುಚಿಯಂತೆ ಕುಟುಂಬ ಸಮೇತಾ ಒಟ್ಟಿಗೆ ಕುಳಿತು ನೋಡ ಬಹುದಾದಂತ ಒಂದು ಉತ್ತಮ ಚಿತ್ರವನ್ನು ಮಾಡಿದ್ದೇವೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಪ್ರತಿಯೊಬ್ಬರು ಚಿತ್ರಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು.
ಚಿತ್ರದಲ್ಲಿ ತುಳು ರಂಗಭೂಮಿಯ ಖ್ಯಾತ ಹಾಸ್ಯ ನಟರಾದ ಅರವಿಂದ್ ಬೋಳಾರ್, ನವೀನ ಡಿ’ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ, ನಾಯಕ- ನಟನಾಗಿ "ದಿಯಾ" ಖ್ಯಾತಿಯ ಪೃಥ್ವಿ ಅಂಬರ್ ನಾಯಕಿ ನಟಿ ನವ್ಯ ಪೂಜಾರಿ ನಟಿಸಿದ್ದು, ಇವರ ನಟನೆ ಎಲ್ಲರಿಗೂ ಖುಷಿಕೊಡುತ್ತೆ. ಪ್ರಥಮ ಬಾರಿಗೆ ತುಳು ಚಿತ್ರರಂಗ ಪ್ರವೇಶಿಸಿ, ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ನಟನೆ ಎಲ್ಲರ ಮನದಲ್ಲಿ ಉಳಿಯುವಂತೆ ಮಾಡುತ್ತದೆ ಎಂದು ಸೂರಜ್ ಶೆಟ್ಟಿ ವಿವರಿಸಿದರು.
ನಾಯಕ ನಟ ಪ್ರಥ್ವಿ ಅಂಬರ್ ಅವರು ಮಾತನಾಡಿ, ಈ ಮೊದಲು ನಾನು ತುಳು ಚಿತ್ರದಲ್ಲಿ ನಟಿಸಿದ್ದರೂ... ನನಗೆ ತುಳು ಚಿತ್ರರಂಗದಲ್ಲಿ ಬ್ರೇಕ್ ನೀಡಿದ್ದು, ಸೂರಜ್ ಶೆಟ್ಟಿ ನಿರ್ದೇಶನದ "ಪಿಲಿಬೈಲ್ ಯಮುನಕ್ಕ" ತುಳು ಚಿತ್ರ. ಈ ಸಂದರ್ಭ ಸೂರಜ್ ಶೆಟ್ಟಿ ಅವರು ನನ್ನ ಪ್ರತಿಭೆಯನ್ನು ಗುರುತಿಸಿ ನನಗೆ ಉತ್ತಮ ಸಹಕಾರ ನೀಡಿದರು. ಅ ಚಿತ್ರದಲ್ಲಿ ನಟಿಸಿದ ಬಳಿಕ ಹಲವಾರು ಅವಕಾಶಗಳು ದೊರಕಿದವು. ಕನ್ನಡ ಚಿತ್ರದಲ್ಲೂ ನಟಿಸುವ ಅವ್ವಕಾಶ ಲಭಿಸಿತು. ನನ್ನ ಏಳಿಗೆಗೆ ಒಂದು ರೀತಿಯಲ್ಲಿ ಸೂರಜ್ ಶೆಟ್ಟಿ ಅವರು ಕಾರಣರಾಗಿದ್ದಾರೆ ಎಂದು ಹೇಳಿದರು.
ನಾಯಕಿ ನಟಿ ನವ್ಯ ಪೂಜಾರಿ ಅವರು ಮಾತನಾಡಿ, ಚಿತ್ರರಂಗದಲ್ಲಿ ಮೊದಲಿನಿಂದಲೂ ಆಸಕ್ತಿ ಇದ್ದ ನನಗೆ ‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ಸಿನೆಮಾದಲ್ಲಿ ನಟಿಸಿದ ಬಳಿಕ ಬಹಳಷ್ಟು ಅವಕಾಶಗಳು ಬರಲು ಆರಂಭವಾಯಿತು. ‘ಇಂಗ್ಲಿಷ್" ಚಿತ್ರದಲ್ಲಿ ನನಗೆ ಜನರು ಮರೆಯಲಾಗದಂತಹ ಒಂದು ಉತ್ತಮ ಪಾತ್ರ ನೀಡಿ ನನ್ನ ಪ್ರತಿಭೆಯ ಅನಾವರಣ ಮಾಡಲಾಗಿದೆ. ಇದು ನನ್ನ ಸಿನಿ ಬದುಕಿನ ಯಶಸ್ಸಿಗೆ ಸಹಕಾರಿಯಾಗಿದೆ. ನಿರ್ಮಾಪಕರಾದ ಶ್ರೀ ಹರೀಶ್ ಶೇರಿಗಾರ್, ನಿರ್ದೇಶಕ ಸೂರಜ್ ಶೆಟ್ಟಿ ಹಾಗು ಈ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ , ನಿರ್ದೇಶನವನ್ನು ಕೆ. ಸೂರಜ್ ಶೆಟ್ಟಿ ಮಾಡಿದ್ದಾರೆ. ಮ್ಯೂಸಿಕ್ ಕದ್ರಿ ಮಣಿಕಾಂತ್, ಸಿನಿಮಾಟೋಗ್ರಫಿ ಕೃಷ್ಣ ಸಾರಥಿ ಮತ್ತು ಅಭಿಲಾಷ್ ಕಲಾತಿ, ಸಂಕಲನ ಮನು ಶೆಡ್ಗರ್, ಆರ್ಟ್ ಡೈರೆಕ್ಟರ್ ಮಹೇಶ್ ಎನ್ಮೂರಿ, ಸಾಹಿತ್ಯ ಅರ್ಜುನ್ ಲೆವಿಸ್, ಲೋಕು ಕುಡ್ಲ, ’ಭಜರಂಗಿ’ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಶೇಷ ಅಥಿತಿಗಳಾಗಿ ಪಾಲ್ಗೊಂಡಿದ್ದ ನಟಿ, ಗಾಯಕಿ ನಿಮಿಕ ರತ್ನಾಕರ್ ಚಿತ್ರದ ಯಶಸ್ಸಿಗೆ ಶುಭಕೋರಿದರು. ಬೆಂಗಳೂರು ಹಾಗೂ ಮೈಸೂರಿನ ವಿತರಕರಾದ ಹೇಮಂತ್ ಉಪಸ್ಥಿತರಿದ್ದರು.