ಹೊಸಬರ ಪ್ರೇಮನ್ಗೆ ಸಕರಾತ್ಮಕ ಪ್ರತಿಕ್ರಿಯೆ
ಇತ್ತೀಚಿನ ಬೆಳವಣಿಗೆ ನೋಡಿದಾಗ ಹೊಸಬರ ಚಿತ್ರಗಳು ಬಂದದಾರಿಯಲ್ಲೆ ವೇಗವಾಗಿ ವಾಪಸ್ಸು ಹೋಗುತ್ತದೆ.ಆದರೆ ‘ಪ್ರೇಮನ್’ ಸಿನಿಮಾ ಫೆಬ್ರವರಿಕೊನೆವಾರದಲ್ಲಿತೆರೆಕಂಡುಜನರುಇಷ್ಟಪಟ್ಟಿದ್ದರಿಂದಎರಡನೇ ವಾರದಲ್ಲಿ ಯಶಸ್ವಿಯಾಗಿ ಪ್ರದರ್ಶನಕಾಣುತ್ತಿದೆ.ಇದರಿಂದಾಗಿತಂಡವು ಸಂತಸವನ್ನು ಹಂಚಿಕೊಳ್ಳಲು ಮಾದ್ಯಮದ ಮುಂದೆ ಹಾಜರಾಗಿದ್ದರು. ಮೊದಲು ಮೈಕ್‌ತೆಗೆದುಕೊಂಡ ನಿರ್ದೇಶಕ ಶಿವರಾಜ್‌ಮಧುಗಿರಿ ಮಾತನಾಡಿ, ಹಲವು ವರ್ಷಗಳ ಕಾಲ ಸಿಹಿಕಹಿ ಚಂದ್ರುಅವರ ಫೈನಲ್‌ಕಟ್ ಸಂಸ್ಥೆಯಲ್ಲಿ ಸಹ ನಿರ್ದೇಶಕ, ಸೀತೆಯರಾಮ, ಮಹಾಭಾರತ, ಹರಹರ ಮಹದೇವ ಧಾರವಾಹಿಗಳಲ್ಲಿ ಕೆಲಸ ಮಾಡಿದ್ದೇನೆ. ಇದೆಲ್ಲಾಅನುಭವದಿಂದ ಮೊದಲಬಾರಿ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ಕುಂದಾಪುರದ ಹೊಸ ಜಾಗಗಳನ್ನು ಹುಡುಕಲಾಗಿ, ಅಲ್ಲಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬಿಡುಗಡೆ ಮುಂಚೆ ತಮ್ಮನ್ನು ಭೇಟಿ ಮಾಡಬೇಕಾಗಿತ್ತು.ಕ್ಯೂಬ್‌ಗೆ ಅಳವಡಿಸಬೇಕಾಗಿದ್ದರಿಂದ ಸಮಯದಅಭಾವದಿಂದ ಸುದ್ದಿಗೋಷ್ಟಿ ನಡೆಸಲಾಗಲಿಲ್ಲ. ಕ್ಷಮೆಇರಲಿ. ಹಾಗಿದ್ದು, ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಿಸಿ ಪ್ರೋತ್ಸಾಹ ನೀಡಿದ್ದಕ್ಕೆಋಣಿಯಾಗಿದ್ದೇನೆಎಂದರು.
ಪ್ರಾರಂಭದಲ್ಲಿಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದೆ.ಅಮ್ಮ ನನ್ನ ಕಷ್ಟ ನೋಡಲಾಗದೆ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದೆ, ಇಲ್ಲಿಯವರೆಗೂತಂದು ನಿಲ್ಲಿಸಿದೆ.ನೈಜಘಟನೆಯಾಗಿದ್ದರಿಂದಎಲ್ಲರಿಗೂಇಷ್ಟವಾಗಿದೆ.ಅದರಲ್ಲೂಕ್ಲೈಮಾಕ್ಸ್ ಸನ್ನಿವೇಶಗಳು ಕಣ್ಣನ್ನುಒದ್ದೆ ಮಾಡುತ್ತದೆಂದು ನೋಡುಗರು ಹೇಳುತ್ತಿದ್ದಾರೆ.ಮೊದಲರೆಡು ದಿನ ಗಳಿಕೆ ಸಾಧಾರಣವಾಗಿದ್ದು, ನಂತರ ಚೇತರಿಸಿಕೊಂಡಿತು.ಇದಕ್ಕೆಕಾರಣ ಪ್ರಚಾರದಕೊರತೆಎಂಬುದು ಈಗ ಅರಿವಾಗಿದೆ.ಮುಂದಿನ ಚಿತ್ರ ಮಾಡುವಾಗಇಂತಹ ತಪ್ಪುಗಳನ್ನು ಮಾಡುವುದಿಲ್ಲ. ಮಾದ್ಯಮದವರುಅನುಮತಿ ನೀಡಿದರೆ ಪ್ರತ್ಯೇಕವಾಗಿ ವಿಶೇಷ ಪ್ರದರ್ಶನಏರ್ಪಡಿಸಲಾಗುವುದು. ಹೀಗೆ ನಿಮ್ಮಗಳ ಬೆಂಬಲ ಸದಾಇರಲಿ ಅಂತ ನಾಯಕ ವಿಷ್ಣುತೇಜ ಹೇಳಿದರು.
ಅಣ್ಣಹೀರೋ, ನಾನು ಖಳನಾಯಕ.ಮಹಾಭಾರತದಲ್ಲಿ ಸಹದೇವನಾಗಿ ಕಾಣಿಸಿಕೊಂಡಿದ್ದರಿಂದ ಗುರುತು ಹಿಡಿಯುವುದುಕಷ್ಟವಾಗಿತ್ತು.ಪ್ರೇಮನ್‌ಕಮರ್ಷಿಯಲ್‌ಆಗಿದ್ದರಿಂದ ನನ್ನ ಪರಿಚಯಚೆನ್ನಾಗಿಆಗಿದೆ.ಅನುಭವಿ ಕಲಾವಿದರುಗಳು ಇರುವುದುಚಿತ್ರಕ್ಕೆತೂಕ ಬಂದಿದೆಅಂತಾರೆ ಪಾರ್ಥ.
ನಾಯಕಿ ಪದ್ಮಶ್ರೀ, ರಮೇಶ್‌ಪಂಡಿತ್, ಸುನೇತ್ರಪಂಡಿತ್, ಕಾಮಿಡಿ ನಟಧನಿಕ್, ಚೈತ್ರ, ಉಷಾ, ಸಾಹಿತಿ ಕಿನ್ನಾಳ್‌ರಾಜ್ ತಂಡದೊಂದಿಗೆ ನಾವುಗಳು ಇರುವುದು ಖುಷಿ ತಂದಿದೆಎಂದು ಅನುಭವಗಳನ್ನು ಹೇಳಿಕೊಂಡರು. ಮಕ್ಕಳ ನುಡಿಗಳನ್ನು ಆಲಿಸಿದ ನಿರ್ಮಾಪಕಿಗಂಗಮ್ಮಶಿವಣ್ಣ.ಬಿ.ಜಿ ಬಂಡವಾಳ ಹೂಡಿದ ಬಗ್ಗೆ ನೆನಪು ಮಾಡಿಕೊಂಡರು.ತಾರಗಣದಲ್ಲಿ ನಾಗೇಂದ್ರಷಾ, ರವಿಭಟ್, ಚಿಲ್ಲರ್‌ಮಂಜು ಮುಂತಾದವರ ನಟನೆಇದೆ. ಹೆಸರಾಂತ ವಿತರಕ,ನಿರ್ಮಾಪಕ ಭೋಗೇಂದ್ರ ಹತ್ತಿರದ ಸಂಬಂದಿಯಾಗಿರುವ ವಿಷ್ಣುತೇಜ ಮತ್ತು ಪಾರ್ಥ,ಅವರ ಸಲಹೆ ಸೂಚನೆಯಂತೆ ಹೆಚ್ಚಿನ ಕೇಂದ್ರಗಳಲ್ಲಿ ಶುಕ್ರವಾರದಿಂದ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿರುವುದಾಗಿ ಸೋದರರು ಮಾಹಿತಿ ನೀಡಿದರು. ಇದಕ್ಕೂ ಮುನ್ನ ತುಣುಕುಗಳು ಮತ್ತುಒಂದು ಮೆಲೋಡಿ ಹಾಡನ್ನುತೋರಿಸಲಾಯಿತು.