ಕೃಷ್ಣ ಟಾಕೀಸ್ಟ್ರೈಲರ್ ಬಿಡುಗಡೆ
ವಿನೂತನಕತೆ ಹೊಂದಿರುವ‘ಕೃಷ್ಣ ಟಾಕೀಸ್’ ಚಿತ್ರದಟ್ರೈಲರ್ ಮೊನ್ನೆಕಲಾವಿದರ ಸಂಘದಲ್ಲಿಅನಾವರಣಗೊಂಡಿತು. ೧೯೯೫ರಂದು ಲಕ್ನೋಚಿತ್ರಮಂದಿರದಲ್ಲಿ ನಡೆದ ನೈಜಘಟನೆಯನ್ನು ಸಾಹಿತಿ,ನಿರ್ದೇಶಕ ವಿಜಯಾನಂದ್‌ಚಿತ್ರಕತೆಯಾಗಿ ರೂಪಾಂತರಿಸಿದ್ದಾರೆ. ಕಥನಾಯಕಇಲ್ಲಿನ ಒತ್ತಡಗಳಿಂದ ಬೇಸತ್ತು, ಸ್ವಲ್ಪ ದಿನಗಳ ಮಟ್ಟಿಗೆತನ್ನ ಹಳ್ಳಿಗೆ ಹೋಗುತ್ತಾನೆ. ಅಲ್ಲಿಗೆ ಹೋದಾಗ ಭ್ರಮೆ, ಸತ್ಯಾಂಶಗಳು ನೇರ, ಪರೋಕ್ಷವಾಗಿ ಸಂಬಂದಕಲ್ಪಿಸುತ್ತದೆ. ಸಾಮಾಜಿಕ ಕಳಕಳಿಯಿಂದ ಏನು ಎಂಬುದನ್ನು ತಿಳಿಯಲು ಹೋದಾಗಕ್ಲೈಮಾಕ್ಸ್‌ದಲ್ಲಿಒಂದೊಂದೇಸಂಗತಿಗಳು ಸೆಸ್ಪನ್ಸ್, ಥ್ರಿಲ್ಲರ್ ಮಾದರಿಯಲ್ಲಿ ತೆರೆದುಕೊಳ್ಳುತ್ತದೆ. ಇದೆಲ್ಲಕ್ಕೂ ಪೂರಕಎನ್ನುವಂತೆ ಬಾಲ್ಕಾನಿ ಎಫ್ ೧೩ ಅಂತ ಉಪಶೀರ್ಷಿಕೆಯಾಗಿ ಬಳಸಿಕೊಂಡಿದೆ.
ನಾಯಕಅಜಯ್‌ರಾವ್‌ಪತ್ರಕರ್ತನ ಪಾತ್ರದಲ್ಲಿ ನಟಿಸಿರುವ ೨೬ನೇ ಚಿತ್ರ.ಜರ್ನಲಿಸ್ಟ್‌ಆಗಿದ್ದರೂಪೋಲೀಸರಂತೆತನಿಖೆ ಮಾಡುತ್ತಾರಂತೆ. ಪಟ್ಟಣದ ಹುಡುಗಿ, ಕಾಡನ್ನು ಸಂರಕ್ಷಣೆ ಮಾಡುವಕುರಿತಂತೆ ಸಾಕ್ಷಚಿತ್ರ ಸಿದ್ದಪಡಿಸಲು ಹಳ್ಳಿಗೆ ಹೋಗುವ ಅಪೂರ್ವ ನಾಯಕಿ. ಮುಗ್ದ ಹಳ್ಳಿ ಹೆಣ್ಣುಮಗಳಾಗಿ ಸಿಂಧೂಲೋಕನಾಥ್ ಉಪನಾಯಕಿ.ತಾರಗಣದಲ್ಲಿಶಾಂಭವಿವೆಂಕಟೇಶ್, ಪ್ರಮೋದ್‌ಶೆಟ್ಟ, ಖಳನಾಗಿ ನಿರಂತ್, ಇವರೊಂದಿಗೆಚಿಕ್ಕಣ್ಣ, ಮಂಡ್ಯಾರಮೇಶ್, ಶೋಭರಾಜ್, ಬಸುಕುಮಾರ್ ಮುಂತಾದವರ ನಟನೆಇದೆ.
ಶ್ರೀಧರ್‌ಸಂಭ್ರಮ್ ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು, ಶಿವಮೊಗ್ಗ, ಸಕಲೇಶಪುರಚಿತ್ರೀಕರಣ ನಡೆದಿದೆ. ಛಾಯಾಗ್ರಹಣಅಭಿಷೇಕ್‌ಕಾಸರಗೂಡು, ಸಂಕಲನ ಶ್ರೀಕಾಂತ್, ಸಾಹಸ ವಿಕ್ರಂಮೋರ್‌ಅವರದಾಗಿದೆ. ಗೋವಿಂದರಾಜುಆಲೂರುನಿರ್ಮಾಣ ಮಾಡಿರುವಚಿತ್ರವುಏಪ್ರಿಲ್ ೧೯ರಂದು ತೆರೆಕಾಣಲಿದೆ.