Yuvarathna.Film Press Meet

Wednesday, March 10, 2021

311

ಏಪ್ರಿಲ್ಒಂದರಂದುಯುವರತ್ನ ಹಾಜರ್

ಅದ್ದೂರಿಚಿತ್ರ ‘ಯುವರತ್ನ’ ಏಪ್ರಿಲ್‌ಒಂದರಂದು ವಿಶ್ವದಾದ್ಯಂತತೆರೆಕಾಣಲಿದೆ. ಸಿನಿಮಾದಕುರಿತು ಮಾಹಿತಿ ಹಂಚಿಕೊಳ್ಳಲು ತಂಡವು ಮೊದಲಬಾರಿ ಮಾದ್ಯಮದ ಮುಂದೆ ಹಾಜರಾಗಿತ್ತು.ನಿರ್ದೇಶಕ ಸಂತೋಷ್‌ಆನಂದ್‌ರಾಮ್ ಮಾತನಾಡಿಯುವರತ್ನಯುವಕರಿಗೆ ಸ್ಪೂರ್ತಿ ಮತ್ತು ಮಾದರಿಯಾಗಲಿದೆ.ಆರೋಗ್ಯ, ಶಿಕ್ಷಣ, ಗುರುಶಿಷ್ಯರ ಸಂಬಂದ, ರಾಜಕೀಯ, ಸ್ನೇಹ ಪ್ರೀತಿ ಸೇರಿದಂತೆ ಹಲವು ಸಾಮಾಜಿಕವಿಷಯಗಳನ್ನು ಮನರಂಜನೆರೀತಿಯಲ್ಲಿ ಹೇಳಿದ್ದೇವೆ. ಅಪ್ಪು ಸರ್ ಸಿನಿಮಾಅಂದುಕೊಂಡು ಬಂದವರಿಗೆ ಮಜಾಕೊಡುತ್ತದೆಂದು ಹೇಳಿದರು.

ರಾಜಕುಮಾರತೆರೆಗೆ ಬಂದು ನಾಲ್ಕು ವರ್ಷಗಳ ನಂತರಯುವರತ್ನ ಬರುತ್ತಿದೆ. ಕೋವಿಡ್ ಸಮಯದಲ್ಲಿ ಸಹಜವಾಗಿಕುತೂಹಲ, ನಿರೀಕ್ಷೆ, ಭಯಇದೆ.ಜನರು ಇಷ್ಟ ಪಡುತ್ತಾರೆಂಬ ನಂಬಿಕೆ ಇದೆ. ಚಿತ್ರದಲ್ಲಿ ನಾನೊಬ್ಬನೇಇಲ್ಲ. ನಾಯಕಿ ಸಯೇಷಾಸೈಗಲ್, ಸಾಧುಕೋಕಿಲ, ಸುಧಾರಾಣಿ, ರವಿಶಂಕರ್‌ಗೌಡ, ರಜೇಶ್‌ನಟರಂಗ, ಕುರಿಪ್ರತಾಪ್, ದಿಗಂತ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆಂದು ಪುನೀತ್‌ರಾಜ್‌ಕುಮಾರ್ ವಿವರ ಬಿಚ್ಚಿಟ್ಟರು.

ಧಾರವಾಡ, ಮೈಸೂರು, ಉಡುಪಿ, ಮಂಗಳೂರು, ಶಿವಮೊಗ್ಗ, ತುಮಕೂರು, ಗೋವಾ, ಬೆಂಗಳೂರು ಕಡೆಗಳಲ್ಲಿ ೧೪೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.ನಿರ್ಮಾಪಕ ವಿಜಯ್‌ಕಿರಗಂದೂರುಎರಡನೇ ಬಾರಿ ಪುನೀತ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸುದಿಗೋಷ್ಟಿಯಲ್ಲಿ ಸೋನುಗೌಡ, ಧನಂಜಯ್, ಕಾರ್ಯಕಾರಿ  ನಿರ್ಮಾಪಕಕಾರ್ತಿಕ್‌ಗೌಡ ಮುಂತಾದವರು ಉಪಸ್ತಿತರಿದ್ದು ಅನುಭವ ಹಂಚಿಕೊಂಡರು.

 

Copyright@2018 Chitralahari | All Rights Reserved. Photo Journalist K.S. Mokshendra,