ಸಪ್ತಸಾಗರದಾಚೆಎಲ್ಲೋ
ಹಿರಿಯ ಕವಿ ಗೋಪಾಲಕೃಷ್ಣ ಅಡಿಗ ವಿರಚಿತ ‘ಸಪ್ತಸಾಗರದಾಚೆಎಲ್ಲೋ’ ಗೀತೆಯ ಸಾಲು ಈಗ ಚಿತ್ರದ ಶೀರ್ಷಿಕೆಯಾಗಿದೆ.ಈ ಹಿಂದೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುವುದಾಗಿ ಸುದ್ದಿಯಾಗಿತ್ತು.ಅದರೀಗರಕ್ಷಿತ್ಶೆಟ್ಟಿ ನಾಯಕನಾಗಿ ನಟಿಸುವಜೊತೆಗೆ ಪರಂವಾ ಪಿಕ್ಚರ್ಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ.ಅವರು ಮನು ಹೆಸರಿನಲ್ಲಿಎರಡು ಗೆಟಪ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ೨೦೧೦ ಹಾಗೂ ೨೦೨೦ರ ಅವಧಿಯಲ್ಲಿ ನಡೆಯುವಕತೆಯಾಗಿದೆ.
ಹತ್ತ ವರ್ಷಗಳಂತೆ ಎರಡು ಪಾತ್ರಗಳು ಬರಲಿದೆ. ಯುವಕನಾಗಿಕಾಣಲು ಶೆಟ್ಟರು ಹತ್ತುಕೆಜಿತೂಕಕಡಿಮೆ ಮಾಡಿಕೊಂಡಿದ್ದಾರೆ.ದ್ವಿತಿಯಾರ್ಧದಲ್ಲಿ ಮಾಮೂಲಿನಂತೆಗಡ್ಡ, ಬಾಡಿಯನ್ನುತೋರಿಸಲಿದ್ದಾರೆ.‘ಬೀರಬಲ್’ದಲ್ಲಿ ನಟಿಸಿದ್ದ ರುಕ್ಮಿಣಿವಸಂತ್ ನಾಯಕಿ.ಇವರೊಂದಿಗೆಅಚ್ಯುತಕುಮಾರ್ ಮುಂತಾದವರು ನಟಿಸುತ್ತಿದ್ದಾರೆ.
ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ಚಿತ್ರಗಳಿಗೆ ಆಕ್ಷನ್ಕಟ್ ಹೇಳಿದ್ದ ಹೇಮಂತ್.ಎಂ.ರಾವ್ಕತೆ ಬರೆದು ನಿರ್ದೆಶನ ಮಾಡುತ್ತಿದ್ದಾರೆ.ಸಂಬಂದಗಳ ಬಗ್ಗೆ ಹೇಳುತ್ತಾ, ಒಬ್ಬ ಹುಡುಗ, ಹುಡುಗಿ ನಡುವಿನ ಕೆಮಿಸ್ಟ್ರೀ ಹೇಗಿರುತ್ತೆ.ಅವರಿಬ್ಬರು ವರ್ಷಗಳ ಕಾಲ ಪ್ರೀತಿಸುತ್ತಾರೆ.ಇವೆಲ್ಲಾ ಅಂಶಗಳು ಸನ್ನಿವೇಶದಲ್ಲಿ ಬರುತ್ತದೆ.ಬೆಂಗಳೂರು, ಮಂಗಳೂರು ಮತ್ತು ಶಿವಮೊಗ್ಗ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.ಸಂಗೀತಚರಣ್ರಾಜ್, ಛಾಯಾಗ್ರಹಣಅದ್ವೈತಗುರುಮೂರ್ತಿಅವರದು.ಧರ್ಮಗಿರಿ ಮಂಜುನಾಥ ಸ್ವಾಮಿದೇವಾಲಯದಲ್ಲಿ ಸರಳವಾಗಿ ಮಹೂರ್ತ ನಡೆಯಿತು.