Punch Shakthi.Film Press Meet

Saturday, March 13, 2021

362

 

ಮಹಿಳೆಯರಿಗೆ ಧೈರ್ಯ ತುಂಬುವ ಪಂಚ್‌ಶಕ್ತಿ

      ಮಾರ್ಚ್ ತಿಂಗಳಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಧೈರ್ಯ ತುಂಬುವ ’ಪಂಚ್ ಶಕ್ತಿ’ ಎನ್ನುವ ಕಿರುಚಿತವೊಂದು ಸಿದ್ದಗೊಂಡಿದೆ. ಪ್ರಸಕ್ತ ಸಮಾಜದಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತಿದೆ. ಆ ಪೈಕಿ ಆಸಿಡ್‌ಗೆ ಬಲಿಪಶುವಾದವಳು, ಅತ್ಯಾಚಾರಕ್ಕೆ ಒಳಗಾದವಳು, ನಟನೆ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುವವಳು, ಖಿನ್ನತೆಗೆ ಒಳಗಾದ ಹುಡುಗಿ, ಬಾಲಕಿಗೆ ಆದ ಅನ್ಯಾಯ. ಹೀಗೆ ಐದು ವರ್ಗದ ಸಮಸ್ಯೆಗಳನ್ನು ಕತೆಯಲ್ಲಿ ತೆಗೆದುಕೊಳ್ಳಲಾಗಿದೆ. ಇವರೆಲ್ಲರಿಗೂ ಸಾಂತ್ವನ ಹೇಳುತ್ತ, ಧೈರ್ಯ ತುಂಬಿ ಎಲ್ಲರಂತೆ ಬದುಕಲು ಸ್ಪೂರ್ತಿ  ನೀಡುವ ಶಕ್ತಿಯಾಗಿ ಮಹಿಳೆಯೊಬ್ಬಳು ಬರುತ್ತಾಳೆ. ಇದಕ್ಕಾಗಿ ಇಂತಹ ತೊಂದರೆಯಲ್ಲಿ ಸಿಲುಕಿದವರನ್ನು ಭೇಟಿ ಮಾಡಿ, ಅವರುಗಳಿಂದ ಮಾಹಿತಿ ಕಲೆ ಹಾಕಿ ಅದನ್ನು   ಚಿತ್ರರೂಪಕ್ಕೆ ತರಲಾಗಿದೆ. ಅಂತಿಮವಾಗಿ ತೂಕದ ಸಂದೇಶ ಇರಲಿದೆ.

       ಶನಿವಾರದಂದು ವಿಶೇಷ ಪ್ರದರ್ಶನ ಏರ್ಪಾಟು ಮಾಡಲಾಗಿತ್ತು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಮಾತನಾಡಿ ಯಾವುದೇ ಚಿತ್ರ ಮಾಡಬೇಕಾದರೆ ದೃಶ್ಯಗಳು ಎಷ್ಟು ಮುಖ್ಯವಾಗಿರುತ್ತದೋ, ಅದಕ್ಕೆ ತಕ್ಕಂತೆ ಹಿನ್ನಲೆ ಶಬ್ದ ಪ್ರಮಖವಾಗಿರುತ್ತದೆ. ಇವರೆಡನ್ನು ಚೆನ್ನಾಗಿ ನಿಭಾಯಿಸಿರುವುದು ಕಂಡುಬಂದಿದೆ. ಕಿರುಚಿತ್ರ ಅಂದರೆ ಕನಿಷ್ಟ ೧೫ ರಿಂದ ೩೦ ನಿಮಿಷಗಳಲ್ಲಿ ಎಲ್ಲವನ್ನು ಹೇಳುತ್ತದೆ. ತಾವು ೧೨ ನಿಮಿಷದಲ್ಲಿ ತೋರಿಸಿರುವುದು ಶ್ಲಾಘನೀಯವಾಗಿದೆ. ಈ ಸಲದ ಅಂತರರಾಷ್ರೀಯ ಚಲನಚಿತ್ರೋತ್ಸವದಲ್ಲಿ ಶೇಕಡ ೩೦ ರಷ್ಟು ಮಹಿಳಾ ಜ್ಯೂರಿ ಸದಸ್ಯರುಗಳು ಇದ್ದಾರೆ. ಇದರಿಂದ ಅವರಿಗೂ ಸಾಮಾಜಿಕ ನ್ಯಾಯ ಒದಗಿಸಿದಂತೆ ಆಗಿದೆ. ನಿಮಗೆಲ್ಲರಿಗೂ ಒಳ್ಳೆಯ ಭವಿಷ್ಯವಿದೆ. ಅದನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

      ಮಹಿಳೆಯರಿಗೆ ಶಕ್ತಿ ತುಂಬಬೇಕೆಂದು ನಿರ್ಮಾಣ ಮಾಡಲಾಗಿದೆ. ಒಬ್ಬಳು ಶಿಕ್ಷಣದಲ್ಲಿ ಪರಿಣಿತಿ ಪಡೆದರೆ, ಇಡೀ ಕುಟುಂಬ ವಿದ್ಯಾವಂತರಾಗುತ್ತಾರೆ. ಅದೇ ಕುಟುಂಬವು ವಿದ್ಯೆಗಳಿಸಿದರೆ, ದೇಶವೇ ಬುದ್ದವಂತರಾಗುತ್ತದೆ. ಜೀವನಕ್ಕಾಗಿ ಬದುಕಬೇಡಿ. ಕಲಿಗಳಾಗಿ, ಶಕ್ತಿಶಾಲೆಯಾಗಬೇಕು ಎಂದು ಪ್ರಿಯಾದೇವರಾಜ್ ಕರೆ ನೀಡಿದರು.

      ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್.ವಿ.ದೇವರಾಜ್ ಪತ್ನಿ ಮಮತಾದೇವರಾಜ್, ನಿರ್ದೇಶಕ ಆಂಡಿ ಐಯ್ಯಂಗಾರ್,  ಜ್ಯೋತ್ಸಾವೆಂಕಟೇಶ್, ಸಾತ್ವಿಕಾಶಾಸ್ತ್ರೀ, ಶೇಷನ್‌ಪ್ರವೀಣ್, ದಿಯಾಬಿಹಾನಿ, ಕೀರ್ತನರಾಜ್, ಉಷಾ, ದಿವ್ಯಾ, ಸಂಗೀತ ಸಂಯೋಜಕ ಆನಂದ್, ಸಂಕಲನ ಬಸವರಾಜ್‌ಪೊನ್‌ರಾಜ್, ಛಾಯಾಗ್ರಾಹಕ ಅರ್ಜುನ್, ಕಾರ್ಯಕಾರಿನಿರ್ಮಾಪಕ ಸಬರೇಷ್ ಬಾಲಕೃಷ್ಣ ನಾಯ್ಡು  ಮುಂತಾದವರು ಉಪಸ್ತಿತರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,