ದೇಶ ಗಮನ ಸೆಳೆಯುವ ಚಿತ್ರ ನೀಡಲಿ - ಮುಖ್ಯಮಂತ್ರಿ
‘ತಾಯವ್ವ’ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಪಾದಾರ್ಪಣೆ ಮಾಡಿದ ಸುದೀಪ್ ಮುಂದೆ ಕಿಚ್ಚ ಸುದೀಪ್ ಆಗಿ ಹೆಸರು ಮಾಡಿದರು.ಸದುಭಿರುಚಿಯ ಚಿತ್ರಗಳನ್ನು ನೀಡುತ್ತಾ ಸಿನಿಮಾಕ್ಷೇತ್ರದಲ್ಲಿ೨೫ ವರ್ಷ ಪೂರೈಸಿದ ಹಿನ್ನಲೆಯಲ್ಲಿ ‘ಕೋಟಿಗೊಬ್ಬ-೩’ ನಿರ್ಮಾಪಕ ಸೂರಪ್ಪ ಬಾಬು ಬೆಳ್ಳಿ ಮಹೋತ್ಸವಕಾರ್ಯಕ್ರಮವನ್ನುಏರ್ಪಾಟು ಮಾಡಿದ್ದರು.ಅಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದು ವಿಶೇಷವಾಗಿತ್ತು.ಪೈಲ್ವಾನ್‌ರನ್ನು ಗೌರವಿಸಿದ ಬಳಿಕ ಮುಖ್ಯ ಮಂತ್ರಿಗಳು ಮಾತನಾಡಿದರು. ಹಿರಿತೆರೆ, ಕಿರುತೆರೆಯಲ್ಲೂ ಸುದೀಪ್‌ತಮ್ಮದೆಛಾಪು ಮೂಡಿಸಿಕೊಂಡಿದ್ದಾರೆ. ಅವರಅಭಿಮಾನಿ ಬಳಗ ದೊಡ್ಡದಿದೆ.ವರ್ಷದಿಂದ ವರ್ಷಕ್ಕೆ ಮಾಗಿದ ಪ್ರತಿಭೆಗೆಅವರ ಚಿತ್ರಗಳೇ ಸಾಕ್ಷಿಯಾಗಿದೆ.ವಿಭಿನ್ನ ವ್ಯಕ್ತಿತ್ವದ ವಿನೂತನ ಪಾತ್ರಗಳ ಮೂಲಕ ತಮ್ಮಚಿತ್ರಒರೆಗೆ ಹಚ್ಚಿರುವ ಸುದೀಪ್‌ಇಡೀದೇಶ ಗಮನ ಸೆಳೆಯುವ ಚಿತ್ರಕೊಡಲಿ.ಇಂಥ ಚಿತ್ರಗಳ ಮೂಲಕ ಅವರೂ ಬೆಳೆದು ಚಿತ್ರರಂಗವನ್ನು ಬೆಳಸಲಿ ಎಂದು ಶುಭಹಾರೈಸಿದರು.
ಎಷ್ಟು ನೋವು ಅನುಭವಿಸುತ್ತೇವ, ಅಷ್ಟೇ ಬದುಕಿನಲ್ಲಿ ಗೆಲುವು ಕಾಣಬಹುದು.ತಾನು ಬೆಳೆಯುವುದು ಮುಖ್ಯವಾಗಿರುವುದಿಲ್ಲ. ಹೇಗೆ ಬೆಳೆದೆ ಎಂಬುದು ಮುಖ್ಯ. ಸೋದರಇನ್ನಷ್ಟು ಚಿತ್ರಗಳನ್ನು ಅಭಿಮಾನಿಗಳಿಗೆ ಕೊಡುತ್ತಾಎತ್ತರಕ್ಕೆ ಬೆಳೆಯಲಿ ಎಂದರುರವಿಚಂದ್ರನ್.
ಚಿತ್ರರಂಗದಲ್ಲಿ ೨೫ ವರ್ಷ ಪೂರೈಸುವುದು ಅಷ್ಟು ಸುಲಭವಲ್ಲ. ಅಭಿಮಾನಿಗಳೂ ಇದ್ದರೂ, ಎದುರಾದ ಸವಾಲುಗಳನ್ನು ಮೆಟ್ಟಿನಿಂತು ಸಾಧಿಸಿ ತೋರಿಸಿದ್ದಾರೆ. ಸುದೀಪ್ ಕೆಲಸಕ್ಕೆ ನಮ್ಮ ಸಹಕಾರಯಾವಾಗಲೂಇರುತ್ತದೆ.ಮತ್ತೋಮ್ಮೆ ನಾವಿಬ್ಬರು ಸಿನಿಮಾ ಮಾಡಲಿದ್ದೇವೆಎಂಬುದು ಶಿವರಾಜ್‌ಕುಮಾರ್ ನುಡಿಯಾಗಿತ್ತು.
ಚಿತ್ರರಂಗದಲ್ಲಿಕಾಲಿಟ್ಟು ೨೫ ವರ್ಷಆಗಿದೆಅಂತ ಅನಿಸಿಲ್ಲ. ಅದನ್ನು ಪ್ರೀತಿಯಿಂದ ಪಡೆದಿದ್ದೇನೆಎನ್ನಬಹುದು. ಹಿರಿಯರಾದ ಶಿವರಾಜ್‌ಕುಮಾರ್, ರವಿಚಂದ್ರನ್, ರಮೇಶ್‌ಅರವಿಂದ್‌ಇರುವತನಕಧೈರ್ಯವಿರುತ್ತದೆ.ಏಕೆಂದರೆ ನಾನು ತಪ್ಪು ಮಾಡಿದಾಗ ಅವರುಗಳು ನನ್ನನ್ನುತಿದ್ದಿದ್ದಾರೆ.ಅಲ್ಲಿಯವರೆಗೂ ತಪ್ಪುಗಳನ್ನು ಮಾಡುತ್ತಿರುತ್ತೆನೆ. ಚಿತ್ರರಂಗಕ್ಕೆ ನಾನು ಬೇಕು.ನನಗಾಗಿ ಕತೆ ಬರೆಯೋವರೆಗೂ ಬಣ್ಣ ಹಚ್ಚುತ್ತೇನೆ. ಎಷ್ಟೋ ವೇದಿಕೆಗೆ ಹೋಗಿದ್ದೇನೆ. ಬಹಳ ಸಮಯದ ನಂತರ ಮೊದಲಬಾರಿ ನರ್ವಸ್‌ಆದೆ.ಎಲ್ಲರಕಣ್ಣು ನಮ್ಮ ಮೇಲೆ ಇರಬೇಕಾದರೆದುಗುಡಆಗುತ್ತದೆ.ಈ ಭೂಮಿಯಲ್ಲಿ ನನಗೆ ಸ್ಥಾನ ಸಿಕ್ಕಿದೆ.ಚಿತ್ರರಂಗದಕುರಿತು ಎಷ್ಟೇ ದೊಡ್ಡ ಪುಸ್ತಕ ಬರೆದರೂಅದರಲ್ಲಿ ನಂಗೆ ಅಂತಲೇಒಂದು ಪುಟಇರುವುದು ಖುಷಿ ತಂದಿದೆಎಂದು ಸುದೀಪ್ ಹೇಳುವಾಗ ಚಪ್ಪಾಳೆ, ಜೈಕಾರ ಕೂಗು ಕೇಳಿಬಂತು.
ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥಎಚ್.ಆರ್.ರಂಗನಾಥ್, ಕನ್ನಡ ಪ್ರಭ-ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರವಿಹೆಗಡೆ, ನಿರ್ಮಾಪಕರಾಕ್‌ಲೈನ್‌ವೆಂಕಟೇಶ್, ನಿರ್ದೇಶಕ ಸುನಿಲ್‌ಕುಮಾರ್‌ದೇಸಾಯಿ, ಆನಂದ್‌ಆಡಿಯೋದ ಶ್ಯಾಮ್-ಆನಂದ್ ಮುಂತಾದಗಣ್ಯರು ವೇದಿಕೆ ಅಲಂಕರಿಸಿದ್ದರು.