ರಾಬರ್ಟ್ ಗೆಲುವು ಒಬ್ಬನದಲ್ಲ–ದರ್ಶನ್
‘ರಾಬರ್ಟ್’ಚಿತ್ರದಸಕ್ಸಸ್ ಮೀಟ್‌ದಲ್ಲಿ‘ಜೈಗ್ಯಾಂಟಿಕ್ ಸಕ್ಸಸ್’ ಎಂದು ಬರೆದಿರುವಪೋಸ್ಟರ್‌ಕಂಡು ಬಂತು. ನೋಡಿದವರು ‘ಬಾಷಾ’ ಸಿನಿಮಾದ ನೆರಳು ಕಾಣಿಸುತ್ತದೆಂದು ಹೇಳಿದ್ದಾರೆ.ಆದರೆ ನಮ್ಮಕತೆಯಟ್ರೀಟ್‌ಮೆಂಟ್ ಬೇರೆಯೇಇದೆ.ವಿಶೇಷವಾದ ಅಂಶಗಳನ್ನು ಒಳಗೊಂಡಿದೆ ಎಂದುದರ್ಶನ್ ಹೇಳುತ್ತಾ ಹೋದರು.ಇದು ನನ್ನೊಬ್ಬನಚಿತ್ರಅಲ್ಲ. ತಂಡದ ಶ್ರಮ.ಒನ್ ಮ್ಯಾನ್ ಶೋ ಅಲ್ಲವೇಅಲ್ಲ. ನಾಲ್ಕೇ ದಿನದಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ೬೫ ಕೋಟಿಅಧಿಕ ಗಳಿಕೆ ಮಾಡಿ ಮುನ್ನುಗುತ್ತಿದೆ.ಕನ್ನಡ ಸೇರಿದಂತೆಟಾಲಿವುಡ್‌ದಲ್ಲೂ ಸದ್ದು ಮಾಡುತ್ತಿದೆ.ಈ ಗೆಲುವಿಗೆ ಕಾರಣರಾದ ಪ್ರೇಕ್ಷಕರಿಗೆ ಮೊದಲುಧನ್ಯವಾದ ಹೇಳಬೇಕು.ಸಿನಿಮಾವನ್ನುಜನರಿಗೆ ತಲುಪುಸಿವುದು ಒಂದು ಕಲೆ. ಸದರಿ ವಿತರಣೆಯಕಲೆಯನ್ನುಮೊದಲುಕಲಿತು ಬನ್ನಿ. ಇದನ್ನು ವಾರ್ನಿಂಗ್‌ಅಂದುಕೊಂಡರೂ ಪರವಾಗಿಲ್ಲ.
ನನ್ನಚಿತ್ರಕ್ಕೆರೇಟ್ ಬರೋಲ್ಲಅಂತಆರೋಪಇಲ್ಲಿಯವರೆಗೂ ಹೇಳಿಕೊಂಡು ಬಂದವರೇಇದ್ದಾರೆ.ಹಿಂದಿನ ‘ಒಡೆಯ’ ಸಿನಿಮಾದ ನಿರ್ಮಾಪಕರಿಗೆ ವಿತರಕರೊಬ್ಬರು ನಾಲ್ಕು ಕೋಟಿ ಹಣವನ್ನುಇನ್ನುಕೊಟ್ಟಿಲ್ಲ. ಎಸಿ ರೂಮ್‌ದಲ್ಲಿ ಕುಳಿತು ಕೋಟಿಕೋಟಿತೆಗೆದುಕೊಂಡು ಹೋಗುತ್ತಾರೆ.ಇಂತಹ ವ್ಯವಹಾರ ನನಗೂ ನನ್ನ ೫೩ನೇ ಸಿನಿಮಾದ ವೇಳೆಗೆ ಅರ್ಥವಾಯಿತು. ಮಂಗಳೂರು ಸೆಂಟರ್‌ನಲ್ಲಿದರ್ಶನ್‌ಚಿತ್ರಕ್ಕೆ ೧೦ ಲಕ್ಷ ಬರೋಲ್ಲವೆಂಬ ಸುದ್ದಿ ಹಬ್ಬಿತ್ತು. ಈಗ ನಾಲ್ಕು ದಿನಕ್ಕೆ ೫೫ ಲಕ್ಷ ಗಳಿಕೆ ಆಗಿದೆ.ಇದಕ್ಕಿಂತಇನ್ನೇನು ಬೇಕು ಎಂದುಮಾತಿಗೆವಿರಾಮ ಹಾಕಿದರುರಾಬರ್ಟ್.ಇದಕ್ಕೂ ಮುನ್ನಸಂತೋಷಕೂಟದಲ್ಲಿನಾಯಕಿಆಶಾಭಟ್, ದೇವರಾಜ್,ರವಿಶಂಕರ್, ಶಿವರಾಜ್.ಕೆ.ಆರ್.ಪೇಟೆ, ಚಿಕ್ಕಣ್ಣ, ಅವಿನಾಶ್, ಮಾಸ್ಟರ್‌ಜಾಸನ್‌ಡಿಸೋಜ, ನಿರ್ಮಾಪಕ ಉಮಾಪತಿಶ್ರೀನಿವಾಸಗೌಡ, ನಿರ್ದೇಶಕತರುಣ್‌ಸುದೀರ್, ವಿನೋದ್‌ಪ್ರಭಾಕರ್, ಛಾಯಾಗ್ರಾಹಕ ಸುಧಾಕರ್.ಎಸ್ ಮುಂತಾದವರು ಸಂತಸವನ್ನು ಹಂಚಿಕೊಂಡರು.