Aduri Lover.Film Muhurath

Thursday, March 18, 2021

434

ಕಿಸ್ ಹುಡುಗನಅದ್ದೂರಿ ಲವ್

‘ಕಿಸ್’ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದ ವಿರಾಟ್‌ಅವರಎರಡನೇಚಿತ್ರ ‘ಅದ್ದೂರಿ ಲವರ್’ ಮಹೂರ್ತವು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ ನಡೆಯಿತು.ಮೊದಲ ದೃಶ್ಯಕ್ಕೆ ಲವ್ಲಿಸ್ಟಾರ್ ಪ್ರೇಮ್‌ಕ್ಲಾಪ್ ಮಾಡಿಶುಭ ಹಾರೈಸಿದರು.ಎ.ಪಿ.ಅರ್ಜುನ್ ಬ್ಯಾನರ್‌ನಡಿಎರಡನೇ ಬಾರಿ ನಿರ್ಮಾಣ ಮಾಡುತ್ತಿರುವ ಎ.ಪಿ.ಅರ್ಜುನ್‌ಕತೆ ಬರೆದು ನಿರ್ದೇಶನದಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.  

ವಿರಾಟ್‌ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡರೆ, ಪಕ್ಕದ ಮನೆ ಹುಡುಗಿಯಂತೆ ‘’ಸಲಗ’ ಖ್ಯಾತಿಯ ಸಂಜನಾಆನಂದ್ ನಾಯಕಿ. ಕಾಲೇಜ್ ದಿನಗಳಲ್ಲಿ ಲವ್ ಮಾಡಿದ್ದೆಏನಾಗುತ್ತೇ? ಮಾಡದಿದ್ದರೆಏನಾಗುತ್ತೆ?. ಹಳೆಯ ದ್ವೇಷದಂತಕಮರ್ಷಿಯಲ್ ಅಂಶಗಳನ್ನು ತೋರಿಸಲಾಗುವುದು. ಟ್ರಾವಲಿಂಗ್ ಸ್ಟೋರಿಆಗಿರುವುದರಿಂದ ಚಿಕ್ಕಮಗಳೂರು, ಡಾರ್ಜಿಲಿಂಗ್, ಊಟಿ, ಕೊಡೈಕೆನಾಲ್, ಗೋವಾ ಸೇರಿದಂತೆ ಹಲವು ಸುಂದರ ತಾಣಗಳಳ್ಲಿ ಚಿತ್ರೀಕರಣ ನಡೆಸಲಾಗುತ್ತದೆ.

ನಾಲ್ಕು ಭರ್ಜರಿಆಕ್ಷನ್, ಚೇಸಿಂಗ್ ದೃಶ್ಯಗಳು ಇರುವುದರಿಂದ ವಿರಾಟ್  ವರ್ಕೌಟ್ ಮಾಡುತ್ತಾ ಸಿಕ್ಸ್ ಪ್ಯಾಕ್‌ದಲ್ಲಿ ತೋರಿಸಿಕೊಳ್ಳಲು ಜಮ್ನಾಸ್ಟಿಕ್, ಬಾಕ್ಸಿಂಗ್‌ತರಭೇತಿ ಪಡೆದುಕೊಳ್ಳುತ್ತಿದ್ದಾರೆ. ತಾರಗಣದಲ್ಲಿಚಿಕ್ಕಣ್ಣ, ಸಾಧುಕೋಕಿಲ, ಅವಿನಾಶ್ ಮುಂತಾದವರು ನಟಿಸುತ್ತಿದ್ದಾರೆ. ಸಂಗೀತ ಆದಿಹರಿ, ಸಾಹಸ ಡಾ.ಕೆ.ರವಿವರ್ಮ, ನೃತ್ಯಇಮ್ರಾನ್‌ಸರ್ದಾರಿಯಅವರದಾಗಿದೆ. ಕನ್ನಡ ಮತ್ತುತೆಲುಗು ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವುದು ವಿಶೇಷ.

 

Copyright@2018 Chitralahari | All Rights Reserved. Photo Journalist K.S. Mokshendra,