Man Of The Match.Filom Muhurth

Thursday, March 18, 2021

321

ಕ್ರಿಕೆಟ್ದಲ್ಲಿ ಬಳಸುವ ಪದಚಿತ್ರದ ಶೀರ್ಷಿಕೆ

ಕ್ರಿಕೆಟ್‌ದಲ್ಲಿಆಟಗಾರನೊಬ್ಬಉತ್ತಮ ಸ್ಕೋರ್, ವಿಕೆಟ್,ಕ್ಯಾಚ್ ಪಡೆದುಕೊಂಡರೆಅವರನ್ನು ‘ಮ್ಯಾನ್‌ಆಫ್ ದಿ ಮ್ಯಾಚ್’ ಎಂದುಕರೆಯುತ್ತಾರೆ. ಇದನ್ನುಹೇಳಲು ಪೀಠಿಕೆಇದೆ.  ‘ರಾಮರಾಮರೇ’ ಮತ್ತು ‘ಒಂದಲ್ಲಾಎರಡಲ್ಲಾ’ ಚಿತ್ರಗಳ ನಿರ್ದೇಶಕ ಸತ್ಯಪ್ರಕಾಶ್‌ಕತೆ ಬರೆದು ನಿರ್ದೇಶನ ಮಾಡುತ್ತಿರುವಚಿತ್ರದ ಹೆಸರುಇದೇಆಗಿದೆ. ಪ್ರತಿ ದಿನ ಪ್ರತಿಯೊಬ್ಬನಿಗೂ ಮ್ಯಾಚ್ ನಡಿತಿರುತ್ತೆ.ಸಂಜೆ ವಾಪಸ್ಸು ಮನೆಗೆ ಬರುವಾಗಆತಗೆದ್ದಿರಬೇಕುಅಥವಾ ಸೋತಿರಬೇಕು.ಅವನು ಗೆಲ್ತಾನಾ? ಅವನ ಆದರ್ಶಗೆಲ್ಲುತ್ತಾಅಥವಾಯೋಚನೆಗೆಲ್ಲುತ್ತಾ ಎಂಬ ಒನ್ ಲೈನ್‌ಐಡಿಯಾ ಸಿನಿಮಾದ ಸಾರಾಂಶವಾಗಿದೆ. 

. ಬನಗಿರಿ ವರಸಿದ್ದಿ ವಿನಾಯಕದೇವಾಲಯದಲ್ಲಿ ನಡೆದ ಮಹೂರ್ತ ಸಮಾರಂ ನಡೆಯಿತು.ನಾದಬ್ರಹ್ಮ ಹಂಸಲೇಖಾ, ಡಾಲಿ ಧದನಂಜಯ್ ಆಗಮಿಸಿ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿ, ಟೈಟಲ್ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.ಸಿನಿಮಾವುಒಂದೇ ದಿನ,ಒಂದೇಜಾಗದಲ್ಲಿ ನಡೆಯುವುದು ವಿಶೇಷ. ನಿರ್ದೇಶಕರುಚೊಚ್ಚಲ ಸಿನಿಮಾದಲ್ಲಿ ಭಗವದ್ಗೀತೆಯ ಸಾರವನ್ನು ಹೇಳಿದ್ದರು.ಎರಡನೆಯದರಲ್ಲಿ ಮನುಷ್ಯತ್ವದ ಮುಂದೆಯಾವುದುಇಲ್ಲವೆಂದು ತಿಳಿಸಿದ್ದರು.ಮೂರನೆಯದರಲ್ಲಿಎರಡಕ್ಕಿಂತ ಭಿನ್ನವಾದ ವಿಷಯವನ್ನು ಹೇಳಲು ಹೊರಟಿದ್ದಾರೆ.ಸಿನಿಮಾವೊಂದರಅಡಿಷನ್‌ಆಧಾರವಾಗಿಟ್ಟುಕೊಂಡುಕತೆಯನ್ನುರಚಿಸಿದ್ದಾರೆ.

ರಾಮರಾಮರೇಖ್ಯಾತಿಯ ನಟರಾಜ್ ನಿರ್ದೇಶಕನಾಗಿ ಕಾಣಿಸಿಕೊಂಡರೆ, ಧರ್ಮಣ್ಣ ನಿರ್ಮಾಪಕನ ಪಾತ್ರ. ಸಂಗೀತ ನಿರ್ದೇಶಕನಾಗಿ ವಾಸುಕಿವೈಭವ್ ನಟಿಸುತ್ತಿದ್ದು, ಚಿತ್ರಕ್ಕೂರಾಗಒದಗಿಸುತ್ತಾರೆ.ರಿಯಲ್ ದಂಪತಿಗಳಾದ ಸುಂದರ್-ವೀಣಾರೀಲ್‌ದಲ್ಲಿಅದೇರೀತಿಯಲ್ಲಿಇರುತ್ತಾರಂತೆ. ಈಗಾಗಲೇ ೨೦೦ ಮಂದಿ ಅಡಿಷನ್‌ನಡೆಸಿ ಕಲಾವಿದರನ್ನುಆಯ್ಕೆ ಮಾಡಲಾಗಿದೆ. ಲಿವಿತ್ ಮತ್ತು ಮದನ್‌ಜಂಟಿಯಾಗಿಛಾಯಾಗ್ರಹಣದಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.ಸತ್ಯ ಪಿಕ್ಚರ‍್ಸ್ ಹಾಗೂ ಮಯೂರ ಪಿಕ್ಚರ‍್ಸ್ ಬ್ಯಾನರ್‌ಅಡಿಯಲ್ಲಿ ಸಿನಿಮಾವು ಸಿದ್ದಗೊಳ್ಳುತ್ತಿದೆ.ಏಪ್ರಿಲ್‌ನಿಂದಚಿತ್ರೀಕರಣ ನಡೆಸಲುತಂಡವುಯೋಜನೆ ರೂಪಿಸಿಕೊಂಡಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,