Govinda Govinda.Film Press Meet

Monday, March 22, 2021

249

 

*ಗೋವಿಂದ ಗೋವಿಂದ ಚಿತ್ರದ ಆಡಿಯೋ ಬಿಡುಗಡೆ*

*-ಕಾಮಿಡಿ - ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ಚಿತ್ರ ಏಪ್ರಿಲ್ 16ಕ್ಕೆ ಚಿತ್ರ ಬಿಡುಗಡೆ*

 

 

ಶೈಲೇಂದ್ರ ಪ್ರೊಡಕ್ಷನ್ಸ್, ಎಲ್.ಜಿ. ಕ್ರಿಯೇಷನ್ಸ್, ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ "ಗೋವಿಂದ ಗೋವಿಂದ" ಚಿತ್ರದ ಆಡಿಯೋ ಜ್ಯೂಕ್ ಬಾಕ್ಸ್ ಬಿಡುಗಡೆ ಸಮಾರಂಭ ಸೋಮವಾರ  ನೆರವೇರಿತು. ಪುಷ್ಕರ್ ಫಿಲಂಸ್ ಮೂಲಕ  ಹಾಡುಗಳು ಹೊರಬಂದಿದ್ದು, ಏ. 16ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಶೈಲೇಂದ್ರ ಬಾಬು, ಕಿಶೋರ್ ಎಂ.ಕೆ.ಮಧುಗಿರಿ ಹಾಗೂ ರವಿ‌ ಆರ್ ಗರಣಿ ಈ ಚಿತ್ರದ ನಿರ್ಮಾಪಕರು. ಜನಾರ್ದನ್ ರಾಮ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ‌ಕಥಾಹಂದರ ಹೊಂದಿರುವ ಈ ಚಿತ್ರವನ್ನು ತಿಲಕ್ ನಿರ್ದೇಶಿಸಿದ್ದಾರೆ.

ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಮತ್ತೋರ್ವ ನಾಯಕನಾಗಿ ತುಳು ಸಿನಿಮಾ ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿದ್ದಾರೆ. ಸುಮಂತ್ ಹಾಗೂ‌ ರೂಪೇಶ್ ಅವರಿಗೆ ನಾಯಕಿಯರಾಗಿ  ಕವಿತಾ ಗೌಡ ಹಾಗೂ ಭಾವನ‌ ಮೆನನ್ ನಟಿಸಿದ್ದಾರೆ.

ಈ ಚಿತ್ರದ ಆಡಿಯೋ ಬಿಡುಗಡೆಗೆ ಅತಿಥಿಗಳಾಗಿದೆ ರಾಜಕಾರಣಿ ಕೆ.ಎನ್ ರಾಜಣ್ಣ ಮತ್ತು ನಿರ್ದೇಶಕ ಲಿಂಗದೇವರು ಆಗಮಿಸಿ ಹಾಡುಗಳ ಅನಾವರಣ ಮಾಡಿದರು. ಈ ವೇಳೆ ಮಾತನಾಡಿದ ರಾಜಣ್ಣ, ಗೋವಿಂದ ಗೋವಿಂದ ಚಿತ್ರದ ಎಲ್ಲ ಕಲಾವಿದರಿಗೆ ಅಭಿನಂದನೆ. ಹಾಡುಗಳು ಅದ್ಬುತವಾಗಿ ಮೂಡಿಬಂದಿವೆ. ಯುವಕಲಾವಿದರು ಸಿನಿಮಾದಲ್ಲಿದ್ದಾರೆ. ಎಲ್ಲರಿಗೂ ಉಜ್ವಲ ಭವಿಷ್ಯವಿದೆ. ಒಳ್ಳೆಯದಾಗಲಿ ಎಂದು ಹಾರೈಸಿದೆರು. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಲಿಂಗದೇವರು ಶುಭಹಾರೈಸಿದರು.

ಚಿತ್ರದ ಸಂಗೀತ ನಿರ್ದೇಶಕ ಹಿತನ್ ಮಾತನಾಡಿ, ಎಲ್ಲರೂ ನನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ. ಈ ಸಂಗೀತದಲ್ಲಿ ಭಾಗಿಯಾದ ಎಲ್ಲ ನನ್ನ ತಂಡಕ್ಕೆ ತುಂಬು ಹೃದಯದ ಧನ್ಯವಾದ. ಜನಗಳಿಂದ ಯಾವ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ನೋಡಲು ಕಾತರದಿಂದ ಇದ್ದೇನೆ ಎಂದರು.

ನಿರ್ಮಾಪಕರಲ್ಲೊಬ್ಬರಾದ ರವಿ ಗರಣಿ ಮಾತನಾಡಿ, ಇದು ಶುರುವಾಗಿದ್ದು ಆಕಸ್ಮಿಕ. ವಿಜಯ್ ಸೇತುಪತಿ ಸಿನಿಮಾ ಮಾಡುವ ಪ್ಲಾನ್ ಇತ್ತು. ಕೊನೆಗೆ ಕೊರೊನಾದಿಂದ ಎಲ್ಲವೂ ಬದಲಾಯಿತು,. ಆಗ ಶುರುವಾಗಿದ್ದೇ ಈ ಸಿನಿಮಾ, ತುಂಬ ಅಚ್ಚುಕಟ್ಟಾಗಿ ಚೆನ್ನಾಗಿ ಮೂಡಿಬಂದಿದೆ ಎಂದರು.

ಚಿತ್ರದ ನಿರ್ದೇಶಕ ತಿಲಕ್ ಅವರಿಗಿದು ಚೊಚ್ಚಲ ಸಿನಿಮಾ. ಇದು‌ ನನ್ನ ಮೊದಲ ಸಿನಿಮಾ.ಅವಕಾಶ ಕೊಟ್ಟಿದ್ದಕ್ಕೆ  ಧನ್ಯವಾದ. ಪಕ್ಕಾ ಕೌಟುಂಬಿಕ ಸಿನಿಮಾ.. ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದೆ. ಒಟ್ಟು ಆರು ಹಾಡುಗಳೀವೆ. ಎರಡು ಬಿಟ್ ಸಾಂಗ್ ಗಳಿವೆ. ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಯೂ ಪ್ರಮಾಣ ಪತ್ರ ಸಿಕ್ಕಿದೆ ಎಂದರು.

ಅದೇ ರೀತಿ ನಟ ರೂಪೇಶ್ ಶೆಟ್ಟಿ ಈ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ನಟಿ ಕವಿತಾ ಗೌಡ ಟೆನ್ಷನ್ ಫ್ರೀ ಆಗಿ ಸಿನಿಮಾ ಮಾಡಿದ್ದಾರಂತೆ. ಕಳೆದ ವರ್ಷವೇ ಸಿನಿಮಾ ರೆಡಿಯಾಗಿತ್ತು. ಇದೀಗ ಬಿಡುಗಡೆಗೆ ಬಂದಿದ್ದೇವೆ. ಅವಕಾಶ ನೀಡಿದ್ದಕ್ಕೆ ಇಡೀ ತಂಡಕ್ಕೆ ಧನ್ಯವಾದ ಎಂದರು.

ಅದೇ ರೀತಿ ನಾಯಕ ಸುಮಂತ್ ಮಾತನಾಡಿ, ರವಿ ಗರಣಿ ಅವರಿಗೆ ಧನ್ಯವಾದ. ಅವರೇ ಈ ಚಿತ್ರದ ಕ್ಯಾಪ್ಟನ್. ಕಾಮಿಡಿ ಶೈಲಿಯ ಮತ್ತು ಥ್ರಿಲ್ಲರ್ ಥರಹದ ಕಥೆ ಸಿನಿಮಾದಲ್ಲಿರಲಿದೆ. ಏ. 16ರಂದು ಚಿತ್ರ ತೆರೆಗೆ ಬರಲಿದೆ ಎಂದರು.

ದೇವ್ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ, ಪ್ರಕಾಶ್ ಪುಟ್ಟಸ್ವಾಮಿ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಸುಮಂತ್ ಶೈಲೇಂದ್ರ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಕವಿತಾ ಗೌಡ, ಭಾವನ ಮೆನನ್, ರೂಪೇಶ್ ಶೆಟ್ಟಿ, ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ ಕುಮಾರ್, ವಿ.ಮನೋಹರ್, ಕೆ.ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ, ಶ್ರೀನಿವಾಸಪ್ರಭು, ಸುನೇತ್ರ ಪಂಡಿತ್, ಗೋವಿಂದೇ ಗೌಡ, ಯಮುನ ಶ್ರೀನಿಧಿ ಮುಂತಾದವರಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,